ಉಳಿಕೆ ಸ್ಥಳದ ಬಳಕೆ


Team Udayavani, Oct 8, 2018, 6:00 AM IST

ulike.jpg

ಮನೆಯ ವಿನ್ಯಾಸ ಮಾಡುವ ಮೊದಲು ಸೈಟ್‌ ಸಿಟ್‌ – ನಿವೇಶನವನ್ನು ಕೂಲಂಕಷವಾಗಿ ಪರಿಶೀಲಿಸಿ ಅಕ್ಕ ಪಕ್ಕ ಏನಿದೆ? ಮನೆಗಳಿದ್ದರೆ ಅವರ ಬೆಡ್‌ ರೂಮ್‌, ಲಿವಿಂಗ್‌ ರೂಮ್‌ ಇತ್ಯಾದಿ ಎಲ್ಲಿದೆ ಎಂದು ಗಮನಿಸಿ ಅವಕ್ಕೆ ಹೊಂದುವಂತೆ ನಮ್ಮ ಮನೆಯ ವಿನ್ಯಾಸ ಮಾಡುವುದು ಉತ್ತಮ. 

ಮನೆ ಕಟ್ಟುವಾಗ ಈ ಮನೆಯನ್ನು ಆದಷ್ಟೂ ದೊಡ್ಡದಾಗಿ, ತುಂಬ ವಿಸ್ತಾರ ಜಾಗ ಇರುವಂತೆ ಕಟ್ಟಿಬಿಡಬೇಕು ಎಂಬ ಆಸೆಯಾಗುತ್ತದೆ. ಸ್ವಲ್ಪ ಎಕ್ಸ್‌ಟ್ರಾ ನಿವೇಶನ ಇದ್ದರೆ ಒತ್ತರಿಸಿಕೊಳ್ಳಬೇಕು ಎಂದೆನಿಸುತ್ತದೆ. ಆದರೆ ಬಿಲ್ಡಿಂಗ್‌ ಬೈಲಾಗಳು, ಅಕ್ಕ ಪಕ್ಕದವರ ಇರಿಸುಮುರುಸಿನಿಂದಾಗಿ ಒಂದಷ್ಟು ಸ್ಥಳವನ್ನು ಬಿಟ್ಟೂಬಿಡದಂತೆ ಮಾಡುವುದುಂಟು. ಹತ್ತಾರು ವರ್ಷದ ಹಿಂದೆ, ನಿವೇಶನವನ್ನು ಕಡಿಮೆ ಬೆಲೆ ಇದ್ದಾಗ ಖರೀದಿಸಿದ್ದವರೂ ಕೂಡ, ಈಗ ಮನಟ್ಟಿಸುವ ಸಂದರ್ಭದಲ್ಲಿ ಈಗಿನ ಮಾರುಕಟ್ಟೆ ಬೆಲೆಗೆ ಹೋಲಿಸಿ, ಅಷ್ಟೊಂದು ದುಬಾರಿ ಬೆಲೆ ಬಾಳುವ ನಿವೇಶನದಲ್ಲಿ ಜಾಗವನ್ನು ಏಕೆ ವೇಸ್ಟ್‌ ಮಾಡಬೇಕು?

ಎಂದು ಒಂದೊಂದು ಇಂಚನ್ನೂ ಲೆಕ್ಕ ಹಾಕುವುದುಂಟು. ಮನೆಯ ಸುತ್ತಲೂ ಒಂದಷ್ಟು ಖಾಲಿ ಜಾಗ ಬಿಡುವುದು ಅನಿವಾರ್ಯ. ಅದು ಎಷ್ಟೇ ಇರಲಿ, ಅದಕ್ಕೊಂದು ಪೂರಕ ಉಪಯೋಗ ಕಂಡುಕೊಂಡರೆ, ನಾವು ಗಾಳಿ ಬೆಳಕಿಗೆಂದು ಬಿಟ್ಟಸ್ಥಳದ ಸದ್ಬಳಕೆಯೂ ಆದಂತೆ ಆಗುತ್ತದೆ. ಹಾಗಾಗಿ, ಮನೆಯ ಸುತ್ತ ಬಿಡುವ ಓಪನ್‌ ಸ್ಪೇಸ್‌ ಅನ್ನು ಸ್ವಲ್ಪ ಯೋಚಿಸಿ ನಿಯೋಜಿಸಿದರೆ, ನಮ್ಮ ಅತ್ಯಮೂಲ್ಯ ನಿವೇಶನಕ್ಕೂ ಸರಿಯಾದ ಬೆಲೆ ಬಂದಂತೆ ಆಗುತ್ತದೆ.

ತೆರೆದ ಸ್ಥಳವನ್ನು ಮನೆಯೊಳಗೆ ಸೆಳೆದುಕೊಳ್ಳುವುದು: ನಾವು ಮನೆಯ ವಿನ್ಯಾಸ ಮಾಡುವಾಗ – ಇದು ಹೊರಗೆ, ಇದು ಒಳಗೆ ಎಂದು ನಿರ್ದಿಷ್ಟವಾಗಿ ವಿಭಜನೆ ಮಾಡಿಕೊಂಡರೆ ತೆರೆದ ಸ್ಥಳದ ಸಂಪೂರ್ಣ ಉಪಯೋಗ ಆಗುವುದು ಕಷ್ಟ. ನಮ್ಮ ಮನೆಯಲ್ಲಿ ಸಾಕಷ್ಟು ಸ್ಥಳವನ್ನು ಅರ್ಧ ತೆರೆದಂತೆ – ಸೆಮಿ ಓಪನ್‌ ಸ್ಪೇಸ್‌ ಮಾದರಿಯಲ್ಲಿ ಮಾಡಿಕೊಂಡರೂ, ಹೊರಗಿಗೂ ಒಳಗಿಗೂ ಬೆಸೆಯುವ ಸ್ಥಳವಾಗಿ ರೂಪುಗೊಂಡು ಮನೆಯ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ. 

ಮನೆಯ ಮುಂದಿನ ಸಿಟ್‌ ಔಟ್‌ಗೆ ಒಂದು ಸುತ್ತು ಗ್ರಿಲ್‌ ಅಳವಡಿಸಿದರೆ, ಅದು ಮನೆಯ ಹೊರಗಿದ್ದಂತೆಯೇ ಒಳಗೂ ಆಗುತ್ತದೆ. ಕಳ್ಳಕಾಕರ ಭಯವೂ ಇರುವುದಿಲ್ಲ. ಒಂದು ಕಡೆ ಓಪನ್‌ ಸ್ಪೇಸ್‌ ಕೊಟ್ಟಂತೆ ಇರುವಂತೆಯೇ ಈ ಸ್ಥಳ ಮನೆಯ ಒಳಗೂ ಇರುವುದರಿಂದ, ಮಾಮೂಲಿ ಎರಡು ಅಡಿಗೆ ಬದಲು ಮೂರು ನಾಲ್ಕು ಅಡಿ ಬಿಟ್ಟರೂ ನಮಗೆ ನಷ್ಟವೇನೂ ಆಗುವುದಿಲ್ಲ. ಬೇಸಿಗೆಯಲ್ಲಿ ಈ ಬಾಲ್ಕನಿಯ ಪಕ್ಕದಲ್ಲಿರುವ ಲಿವಿಂಗ್‌ ಇಲ್ಲವೇ ಡೈನಿಂಗ್‌ ರೂಮಿನ ಬಾಗಿಲನ್ನು “ಫ್ರೆಂಚ್‌ ವಿಂಡೊ ‘ ಮಾದರಿಯಲ್ಲಿ, ಅಂದರೆ ಕಿಟಕಿಯನ್ನು ನೆಲಮಟ್ಟದಲ್ಲಿ ಇಟ್ಟುಕೊಂಡು ಬೇಕೆಂದಾಗ ತೆರೆದಿಟ್ಟುಕೊಂಡರೆ,

ಹೊರಗಿನ ಸ್ಥಳವೂ ಮನೆಯೊಳಗಿನ ಒಂದು ಭಾಗವಾಗಿರುತ್ತದೆ. ಮನೆಯನ್ನು ವಿಪರೀತ ಎನ್ನುವಷ್ಟು ಗೋಡೆಗಳಿಂದ ವಿಭಜನೆ ಮಾಡದೆ, ಒಂದು ಸ್ಥಳ ಇನ್ನೊಂದು ಸ್ಥಳಕ್ಕೆ ನಿರಾಯಾಸವಾಗಿ ಹರಿದಾಡುವಂತೆ ಮಾಡಿದರೆ ಖರ್ಚು ಕಡಿಮೆ ಆಗುವುದರ ಜೊತೆಗೆ ಮನೆಯೂ ದೊಡ್ಡದಾಗಿಯೂ, ಗಾಳಿ ಬೆಳಕಿನಿಂದ ತಾಜಾ ಆಗಿಯೂ ಮೂಡಿಬರುತ್ತದೆ. ಮನೆಗಳಿಗೆ, ಅದರಲ್ಲೂ ಸಣ್ಣ ನಿವೇಶನದ ಮನೆಗಳಿಗೆ ತೆರೆದ ವಿನ್ಯಾಸ – ಓಪನ್‌ ಪ್ಲಾನಿಂಗ್‌ ಹೆಚ್ಚು ಸೂಕ್ತ.

ಅಕ್ಕ ಪಕ್ಕದ ತೆರೆದ ಸ್ಥಳದ ಉಪಯೋಗ: ಮನೆಯ ವಿನ್ಯಾಸ ಮಾಡುವ ಮೊದಲು ಸೈಟ್‌ ಸಿಟ್‌ – ನಿವೇಶನವನ್ನು ಕೂಲಂಕಷವಾಗಿ ಪರಿಶೀಲಿಸಿ ಅಕ್ಕ ಪಕ್ಕ ಏನಿದೆ? ಮನೆಗಳಿದ್ದರೆ ಅವರ ಬೆಡ್‌ ರೂಮ್‌, ಲಿವಿಂಗ್‌ ರೂಮ್‌ ಇತ್ಯಾದಿ ಎಲ್ಲಿದೆ ಎಂದು ಗಮನಿಸಿ ಅವಕ್ಕೆ ಹೊಂದುವಂತೆ ನಮ್ಮ ಮನೆಯ ವಿನ್ಯಾಸ ಮಾಡುವುದು ಉತ್ತಮ. ಪಕ್ಕದ ಮನೆಯ ಹಾಲ್‌ಗೆ ಎದುರಾಗಿ ನಮ್ಮ ಮನೆಯ ಬೆಡ್‌ ರೂಮ್‌ ಮಾಡಿಕೊಂಡರೆ, ಟಿವಿ ಹಾವಳಿ ಸರಿರಾತ್ರಿಯ ವರೆಗೂ ಮುಂದುವರೆಯ ಬಹುದು!

ಹಾಗೆಯೇ ಕಿಚನ್‌ ಎದುರು ಪಕ್ಕದ ಮನೆಯ ಟಾಯ್ಲೆಟ್‌ ಇದ್ದರೆ, ಅಡುಗೆ ಮಾಡುವಾಗ ತಾಜಾತನ ಇರದೆ ಇರುಸುಮುರಿಸು ಆಗಬಹುದು. ಕೆಲವೊಮ್ಮೆ ಅನಿವಾರ್ಯವಾಗಿ ಕಿರಿಕಿರಿ ಇದ್ದಲ್ಲಿ ಪ್ಲಾನ್‌ ಮಾಡಲೇ ಬೇಕಾದಾಗ, ನಾವು ಬಿಟ್ಟಿರುವ ತೆರೆದ ಸ್ಥಳದ ಉಪಯೋಗ ಪಡೆದುಕೊಂಡು ಅಕ್ಕಪಕ್ಕದವರಿಂದ ಹೆಚ್ಚು ತೊಂದರೆ ಆಗದಂತೆ ಮಾಡಬಹುದು. ನಮ್ಮ ಮನೆಯ ಬೆಡ್‌ರೂಮ್‌ ಪಕ್ಕ ಎರಡು ಅಡಿ ಮಾತ್ರ ಜಾಗ ಬಿಡಲು ನಿರ್ಧರಿಸಿದ್ದರೆ, ಜೊತೆಗೆ ಸಿಟ್‌ ಔಟ್‌ – ಬಾಲ್ಕನಿಯ ಮಾದರಿಯ ಅರೆ ತೆರೆದ ಸ್ಥಳ ಮಾಡಿಕೊಳ್ಳಲು ಒಂದು ಅಡಿ ಆಫ್ ಸೆಟ್‌ ಅಂದರೆ ಬೆಡ್‌ ರೂಮ್‌ ಅನ್ನು ಒಂದು ಅಡಿ ಒಳಗೆ ಮಾಡಿಕೊಳ್ಳಿ.

ಈಗಾಗಲೇ ಬಿಡಲು ನಿರ್ಧರಿಸಿರುವ ಎರಡು ಅಡಿಗೆ ಈ ಒಂದು ಅಡಿ ಸೇರಿದರೆ ಒಟ್ಟು ಮೂರು ಅಡಿ ಸಿಕ್ಕಂತೆ ಆಗುತ್ತದೆ. ಇದು ರೂಮಿನ ಉದ್ದಕ್ಕೂ ಇದ್ದರೆ ನಮಗೆ ಸಣ್ಣದೊಂದು ಗಾರ್ಡನ್‌ ಮಾಡಲೂ ಕೂಡ ಆಗುತ್ತದೆ ಹಾಗೂ ಈ ಹಸಿರು ನಮ್ಮ ಮನೆಗೂ ಪಕ್ಕದ ಮನೆಗೂ ಮಧ್ಯೆ ಒಂದು ಹಸಿರು ಗೋಡೆಯಂತೆ ಕಾರ್ಯ ನಿರ್ವಹಿಸಿ ಅಕ್ಕಪಕ್ಕದವರಿಂದ ಆಗಬಹುದಾದ ಕಿರಿಕಿರಿಯಿಂದ ಮುಕ್ತಿ ದೊರಕುವಂತೆ ಮಾಡುತ್ತದೆ. 

ಅರೆ ತೆರೆದ ಸ್ಥಳಗಳು: ಸಣ್ಣ ಸ್ಥಳಗಳ ಸೂರು ತೀರಾ ಹತ್ತು ಅಡಿ ಇರಲೇಬೇಕು ಎಂದೇನೂ ಇಲ್ಲ. ಮೂರು ಅಡಿ ಅಗಲ, ಹತ್ತು ಅಡಿ ಉದ್ದದ ಬಾಲ್ಕನಿಗೆ ಏಳು ಅಡಿ ಸೂರಿದ್ದರೆ ಸಾಕು. ಇದನ್ನೂ ಕೂಡ ನಾವು ರಕ್ಷಣೆಗೆಂದು ಉಕ್ಕಿನ ಸರಳುಗಳಿಂದ ಮಾಡಿದ ಗ್ರಿಲ್‌ ಅಳವಡಿಸಿ ಸೂರಿಗೆ ಪಾಲಿ ಕಾಬೊನೇಟ್‌ ಶೀಟಿನ ಇಲ್ಲವೆ ಗಾಜಿನ ಹಲಗೆಯನ್ನು ಬಳಸಿ ಬೆಳಕು ಗಾಳಿ ಧಾರಾಳವಾಗಿ ಬರುವಂತೆ ಮಾಡಿಕೊಳ್ಳಬಹುದು.

ಸಿಟ್‌ ಔಟ್‌/ಬಾಲ್ಕನಿಯ ಸುತ್ತಲೂ ಇರುವ ಗ್ರಿಲ್‌ ಮೇಲೆ ಹಸಿರು ಬಳ್ಳಿಗಳನ್ನು ಹಬ್ಬಿಸಬಹುದು ಅಥವಾ ಈಗ ಲಭ್ಯರುವ ಸಣ್ಣಸಣ್ಣ ಹೂಕುಂಡಗಳನ್ನು ನೇತು ಹಾಕಿದರೂ ನಮ್ಮ ಖಾಸಗಿತನ ರಕ್ಷಿಸುವ ಹಸಿರು ಗೋಡೆ ನಿರ್ಮಾಣ ಆಗುತ್ತದೆ. ನಿಮಗೆ ಕಸೂತಿ ಕೆಲಸ, ಟೈಲರಿಂಗ್‌ ಮೆಶೀನ್‌ ಇತ್ಯಾದಿ ಇಡಬೇಕೆಂದರೂ ಸಹ ಈ ಸ್ಥಳ ಉಪಯುಕ್ತ ಆಗುತ್ತದೆ. ಮನೆಯ ಒಳಗೆ ಕಿಕ್ಕಿರಿಸಿಕೊಳ್ಳದೆ, ಮೇಶೀನಿನ ಸದ್ದುಗದ್ದಲ ಇಲ್ಲದೆ ಅರೆ ತೆರೆದ ಸ್ಥಳದಲ್ಲಿ ನಮ್ಮ ಕಾರ್ಯ ಮಾಡಿಕೊಳ್ಳಬಹುದು.

ಮೆಶೀನಿನ ಮೇಲೆ ನೀರು ಬೀಳದಂತೆ, ಒಂದು ಭಾಗವನ್ನು ಅಂದರೆ ಸೂರಿನಂತೆ ಗೋಡೆಯನ್ನೂ ಗಾಜಿನಿಂದ ಮುಚ್ಚಿಕೊಳ್ಳಬಹುದು. ಇತರೆ ಮೂರು ಕಡೆ ತೆರೆದ ಸ್ಥಳ ಇರುವುದರಿಂದ, ನಮ್ಮ ಯಂತ್ರಕ್ಕೆ ರಕ್ಷಣೆ ಸಿಗುತ್ತದೆ. ಗಾಳಿ ಬೆಳಕಿಗೆ ತೊಂದರೆಯೂ ಆಗುವುದಿಲ್ಲ. ಅದೇ ರೀತಿಯಲ್ಲಿ ವ್ಯಾಯಾಮ ಸೈಕಲ್‌, ಕಸರತ್ತು ಮಾಡಲು ಉಪಯೋಗಿಸುವ ಡಂಬಲ್ಸ್‌ ಇತ್ಯಾದಿಯನ್ನೂ ಇಲ್ಲಿ ಇಡುವುದರ ಜೊತೆಗೆ ಈ ಅರೆ ತೆರೆದ ಸ್ಥಳ ಯೋಗ ಇತ್ಯಾದಿ ಮಾಡಲೂ ಕೂಡ ಉಪಯೋಗಿಸಬಹುದು. ಹೆಚ್ಚು ಬಳಕೆಗೆ ಅರೆ ತೆರೆದ ಸ್ಥಳ ಲಭ್ಯ ಆಗಬೇಕೆಂದರೆ, ನಮ್ಮ ಬಳಕೆ ಆಧರಿಸಿ ಇನ್ನೂ ಒಂದೆರಡು ಅಡಿ ಅಗಲವೂ ಮಾಡಿಕೊಳ್ಳಬಹುದು.

ಯುಟಿಲಿಟಿ – ತಯಾರಿ: ನಮ್ಮಲ್ಲಿ ಮನೆಗಳಲ್ಲಿ ಹಿತ್ತಲು ವಿಶೇಷವಾದ ಸ್ಥಾನ ಪಡೆದಿದೆ. ಸಣ್ಣ ನಿವೇಶನಗಳಲ್ಲೂ ಒಂದಷ್ಟು ತೆರೆದ ಸ್ಥಳ ಬಿಟ್ಟುಕೊಂಡರೆ ಅದೇ ಹಿತ್ತಲಿನಂತೆ ಕಾರ್ಯ ನಿರ್ವಹಿಸುತ್ತದೆ. ಮನೆಯ ಹಿಂದೆ ಕೇವಲ ಎರಡು ಅಡಿ ಬಿಡಲು ನಿರ್ಧರಿಸಿದ್ದರೆ, ಇಷ್ಟು ಕಡಿಮೆ ಸ್ಥಳದಲ್ಲಿ ಯುಟಿಲಿಟಿ ಮಾಡಲು ಕಷ್ಟ ಆಗುತ್ತದೆ. ಕಡೆಪಕ್ಷ ಮೂರು ಅಡಿಯಾದರೂ ಇರಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಓಪನ್‌ ಕಿಚನ್‌ ಹೆಚ್ಚು ಜನಪ್ರಿಯವಾಗಿದ್ದು, ಕಿಚನ್‌ ಅಗಲವನ್ನು ಒಂದು ಅಡಿ ಕಡಿಮೆ ಮಾಡಿಕೊಂಡರೂ ತೊಂದರೆ ಏನೂ ಆಗುವುದಿಲ್ಲ. ತೆರೆದ ಕಿಚನ್‌ ಸಣ್ಣ ನಿವೇಶನಗಳಿಗೆ ಹೇಳಿಮಾಡಿಸಿದಂತೆ ಇದ್ದರೂ ಈ ಮಾದರಿಯ ಕಿಚನ್‌ ದೊಡ್ಡ ನಿವೇಶನಗಳಲ್ಲೂ ಫ್ಯಾಷನ್‌ ಆಗಿದೆ. ಯುಟಿಲಿಟಿ ಸಾಮಾನ್ಯವಾಗಿ ಅಡುಗೆ ಮನೆಯ ಹಿಂಭಾಗ ಬರುವುದರಿಂದ ಕಿಚನ್‌ ಸ್ಥಳವನ್ನು ಒಂದು ಅಡಿ ಆಫ್ ಸೆಟ್‌ ಮಾಡಿದರೆ, ನಾವು ಬಿಡಲು ನಿರ್ಧರಿಸಿರುವ ಎರಡು ಅಡಿ ಮೂರು ಅಡಿ ಆಗಿ ವಿಸ್ತಾರಗೊಂಡು ಯುಟಿಲಿಟಿಗೆ ಸಾಲುತ್ತದೆ.  

ಹೆಚ್ಚಿನ ಮಾಹಿತಿಗೆ ಫೋನ್‌: 98441 32826

* ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.