ಆಡಳಿತ ವರದಿ ಮಂಡಿಸುವ ಇರಾದೆ ಹೊಂದಿದ್ದ ರಮೀಳಾ
Team Udayavani, Oct 7, 2018, 12:51 PM IST
ಬೆಂಗಳೂರು: ಬಿಬಿಎಂಪಿಯಲ್ಲಿ ಕಳೆದ ಎಂಟು ವರ್ಷಗಳಿಂದ ಮಂಡನೆಯಾಗದ ಆಡಳಿತ ವರದಿ ಮಂಡಿಸುವ ಇರಾದೆಯನ್ನು ಗುರುವಾರ ನಿಧನರಾದ ಉಪಮೇಯರ್ ರಮೀಳಾ ಉಮಾಶಂಕರ್ ಹೊಂದಿದ್ದರು.
ಉಪಮೇಯರ್ ಆಗಿ ಆಯ್ಕೆಯಾದ ಬಳಿಕ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದ ರಮೀಳಾ ಅವರು, ಅಧಿಕಾರಿಗಳು ಆಡಳಿತ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿ ಮಂಡನೆಗೆ ಸಹಕರಿಸುತ್ತಿಲ್ಲ. ನನ್ನ ಅವಧಿಯಲ್ಲಿ ಪಾಲಿಕೆ ಸಭೆಯ ಮುಂದೆ ವರದಿ ಮಂಡಿಸಲು ತೀರ್ಮಾನಿಸಿದ್ದೇನೆ.
ಅದಕ್ಕೆ ಅಗತ್ಯ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದ್ದರು. ಆಯುಕ್ತರಿಗೆ ಉಪಮೇಯರ್ ಬರೆದಿದ್ದ ಪತ್ರ ಶನಿವಾರ ಬಹಿರಂಗವಾಗಿದೆ. ಸೆ.27ರಂದು ಉಪಮೇಯರ್ ಆಗಿ ಆಯ್ಕೆಯಾದ ರಮೀಳಾ ಅವರು ಬುಧವಾರ (ಅ.3) ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಆಯುಕ್ತರಿಗೆ ಪತ್ರ ಬರೆದಿದ್ದರು.
“ಕರ್ನಾಟಕ ಪೌರ ನಿಗಮನಗಳ ಅಧಿನಿಯಮ 1976ರ ಸೆಕ್ಷನ್ 61ರ ಮೂರನೇ ಉಪಕಾಯ್ದೆ ಅನುಸಾರ ಉಪಮೇಯರ್ ಆಡಳಿತ ಮತ್ತು ಲೆಕ್ಕ ಪರಿಶೋಧಾನ ವರದಿಗಳನ್ನು ಪಾಲಿಕೆಯ ಸಭೆಯ ಮುಂದೆ ಮಂಡಿಸಬೇಕಾಗಿರುತ್ತದೆ. 2010-11ನೇ ಸಾಲಿನಲ್ಲಿ ಆಡಳಿತ ವರದಿ ಮಂಡನೆ ಆಗಿದ್ದು, ಅದರ ನಂತರ ಒಮ್ಮೆಯೂ ಮಂಡನೆ ಆಗಿಲ್ಲ. ಹಿಂದಿನ ಉಪಮೇಯರ್ ಕೂಡ ಈ ಬಗ್ಗೆ ಗಮನಸೆಳೆದಿದ್ದಾರೆ. ಆದರೆ ಅಧಿಕಾರಿಗಳು ಸಹಕರಿಸಿಲ್ಲ’ ಎಂದು ರಮೀಳಾ ಉಲ್ಲೇಖೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.