ಮೈನವಿರೇಳಿಸಿದ ಗ್ರಾವೆಲ್ ಫೆಸ್ಟ್ ಕಾರ್ ರೇಸ್
Team Udayavani, Oct 8, 2018, 11:28 AM IST
ಮೈಸೂರು: ಚಾಮುಂಡಿಬೆಟ್ಟದ ಸುಂದರ ಪ್ರಕೃತಿಯ ಮಡಿಲಲ್ಲಿರುವ ಲಲಿತ ಮಹಲ್ ಹೆಲಿಪ್ಯಾಡ್ ಅಂಗಳ ಆಕರ್ಷಕ ರೇಸ್ ಕಾರುಗಳ ಬೋರ್ಗರೆತಕ್ಕೆ ಸಾಕ್ಷಿಯಾಯಿತು. ವಿವಿಧ ಬಗೆಯ ಕಾರುಗಳಲ್ಲಿ ಅಬ್ಬರಿಸಿ, ಧೂಳೆಬ್ಬಿಸಿದ ಕಾರು ಚಾಲಕರು, ದಸರಾ ಅಂಗವಾಗಿ ನಡೆದ ಕಾರ್ ರೇಸ್‌ನಲ್ಲಿ ತಮ್ಮ ಶರವೇಗದ ಚಾಲನಾ ಕೌಶಲ ಪ್ರದರ್ಶಿಸಿ ವೀಕ್ಷಕರನ್ನು ರೋಮಾಂಚನಗೊಳಿಸಿದರು.
ವಿಶ್ವವಿಖ್ಯಾತ ದಸರಾ ಮಹೋತ್ಸವದ ಆಕರ್ಷಣೆ ಹೆಚ್ಚಿಸಿ, ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾವೆಲ್ ಫೆಸ್ಟ್ ಕಾರ್ ರೇಸ್ ನೋಡುಗರಿಗೆ ಭರ್ಜರಿ ರಸದೌತಣ ನೀಡಿತು. ಒಬ್ಬರನ್ನು ಹಿಂದಿಕ್ಕಿ ಮತ್ತೂಬ್ಬರು ಗೆಲ್ಲಲು ನಡೆಸಿದ ಪೈಪೋಟಿ ಕ್ರೀಡಾಸಕ್ತರಿಗೆ ಹೊಸದೊಂದು ಥ್ರಿಲ್ ನೀಡಿತು.
ರೇಸ್‌ಗಾಗಿ ನಿರ್ಮಿಸಿದ್ದ ಟ್ರ್ಯಾಕ್‌ನಲ್ಲಿ ಶರವೇಗದಲ್ಲಿ ಕಾರು ಚಾಲನೆ ಮಾಡುತ್ತ ಧೂಳೆಬ್ಬಿಸಿ ಮುನ್ನುಗ್ಗುತ್ತಿದ್ದರೆ ದೃಶ್ಯಗಳು ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ಇನ್ನು ರೋಮಾಂಚನಕಾರಿ ಕಾರ್ ರೇಸ್ ವೀಕ್ಷಿಸಲು ಆಗಮಿಸಿ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ. ಹರ್ಷೋದ್ಘಾರದ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದರು.
8 ವಿಭಾಗಗಳಲ್ಲಿ ಸ್ಪರ್ಧೆ: ದಸರೆಯ ಅಂಗವಾಗಿ ನಡೆದ ಆಕರ್ಷಕ ಗ್ರಾವೆಲ್ ಫೆಸ್ಟ್ ಕಾರ್ ರೇಸ್‌ನಲ್ಲಿ ಕಾರುಗಳ ಸಿಸಿ ಸಾಮರ್ಥ್ಯಕ್ಕೆ ತಕ್ಕಂತೆ 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. 1100 ಸಿಸಿ, 1400 ಸಿಸಿ, ಇಂಡಿಯನ್ ಓಪನ್ ಕ್ಲಾಸ್, ಮೈಸೂರ್ ಲೋಕಲ್ ನಾವೀಸ್ ಓಪನ್, ಎಸ್‌ಯುವಿ ಕ್ಲಾಸ್, ಅನ್ ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್ ಸೇರಿದಂತೆ ಒಟ್ಟು 8 ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
168 ಸ್ಪರ್ಧಿಗಳು ಭಾಗಿ: ರೇಸ್‌ನಲ್ಲಿ ಡೆನ್ ತಿಮ್ಮಯ್ಯ, ಚೇತನ್ ಶಿವರಾಮ್, ಬೋಪಯ್ಯ, ಡೀನ್ ಧ್ರುವ ಚಂದ್ರಶೇಖರ್, ಸಹೇಮ್ ಕರೀಂ ಸೇರಿದಂತೆ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಹಾಗೂ ಮೈಸೂರು, ಮಡಿಕೇರಿ, ಮಂಗಳೂರು, ಹಾಸನ, ಚಿಕ್ಕಮಂಗಳೂರು, ಮೂಡಿಗೇರೆ ಸೇರಿದಂತೆ ಒಟ್ಟು 168 ಸ್ಪರ್ಧಿಗಳು ಭಾಗವಹಿಸಿ ತಮ್ಮ ಚಾಲನಾ ಕಲೆ ಪ್ರದರ್ಶಿಸಿದರು.
13 ಮಹಿಳಾ ರೇಸರ್‌ಗಳು: ಹೆಲಿಪ್ಯಾಡ್ ಅಂಗಳದಲ್ಲಿ ನಡೆದ ರೋಮಾಂಚಕ ಕಾರ್ ರೇಸ್‌ನಲ್ಲಿ ಪುರುಷ ಸ್ಪರ್ಧಿಗಳ ಜತೆಗೆ 13 ಮಹಿಳಾ ರೇಸರ್‌ಗಳು ಎಲ್ಲರ ಗಮನ ಸೆಳೆದರು. ಪುರುಷರಿಗಿಂತ ನಾವೇನು ಕಮ್ಮಿಯಿಲ್ಲ ಎಂಬಂತೆ ರೇಸ್ ಸೂಟ್ ಧರಿಸಿ ತಮ್ಮ ನೆಚ್ಚಿನ ಕಾರಿನಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಾ ಧೂಳೆಬ್ಬಿಸಿದರು. ಚಿತ್ರ ನಟಿ ರೇಖಾ ಸೇರಿದಂತೆ ಬೆಂಗಳೂರು, ಹಾಸನ ಹಾಗೂ ಮೈಸೂರಿನ 13 ಮಹಿಳಾ ರೇಸರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೋಡುಗರ ಹುಬ್ಬೇರುವಂತೆ ಮಾಡಿದರು.
ಕಿಕ್ಕೇರಿಸಿದ ಡಿಜೆ ಸದ್ದು: ಕಾರ್ ರೇಸ್ ವೀಕ್ಷಿಸಲು ನೆರೆದಿದ್ದ ಪ್ರೇಕ್ಷಕರಿಗೆ ಕಾರುಗಳು ಸದ್ದಿನೊಂದಿಗೆ ಡಿಜೆ ಸದ್ದು ಕಿಕ್ಕೇರಿಸಿತು. ಹೊಗೆ ಉಗುಳುತ್ತ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸಿ ಸಾಗುತ್ತಿದ್ದರೆ ಇತ್ತ ಹಿನ್ನೆಲೆಯಿಂದ ಬರುತ್ತಿದ್ದ ಡಿಜೆ ಹಾಡಿನ ಸದ್ದು ನೋಡುಗರಲ್ಲಿ ಮತ್ತಷ್ಟು ಆಸಕ್ತಿ ಕೆರಳಿಸಿತು.
ಪ್ರೇಕ್ಷಕರ ವೀಕ್ಷಣೆಗೆ ಅನುಕೂಲವಾಗಲೆಂದೆ ದೊಡ್ಡ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ನೇರವಾಗಿ ವೀಕ್ಷಣೆ ಮಾಡಲಾಗದವರು ಎಲ್‌ಇಡಿ ಪರದೆಯಲ್ಲಿ ರೇಸ್ ವೀಕ್ಷಿಸಿ ಖುಷಿ ಪಟ್ಟರು. ಇದಕ್ಕೂ ಮುನ್ನ ಕಾರ್ ರೇಸ್‌ಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.