ವಿಜಯ್ ಹಜಾರೆ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ
Team Udayavani, Oct 8, 2018, 11:46 AM IST
ನಡಿಯಡ್ (ಗುಜರಾತ್): ಉತ್ತರಾಖಂಡದ ಆರಂಭಕಾರ ಕರ್ಣ್ವೀರ್ ಕೌಶಲ್ “ವಿಜಯ್ ಹಜಾರೆ’ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಕ್ಕಿಂ ವಿರುದ್ಧ ಶನಿವಾರ ನಡೆದ “ಪ್ಲೇಟ್ ಗ್ರೂಪ್’ ಪಂದ್ಯದಲ್ಲಿ ಅವರು 202 ರನ್ ಬಾರಿಸಿ ಮೆರೆದರು. ಈ ಪಂದ್ಯವನ್ನು ಉತ್ತರಾಖಂಡ 199 ರನ್ನುಗಳಿಂದ ಜಯಿಸಿತು.
ಕೌಶಲ್ 135 ಎಸೆತಗಳಿಂದ ಈ ಬ್ಯಾಟಿಂಗ್ ಸಾಹಸ ಪ್ರದರ್ಶಿಸಿದರು. ಈ ಸಂದರ್ಭ 18 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಸಿಡಿದವು. ಇದರೊಂದಿಗೆ ಮುಂಬಯಿ ಪರ ಅಜಿಂಕ್ಯ ರಹಾನೆ ಬಾರಿಸಿದ 187 ರನ್ನುಗಳ ದಾಖಲೆ ಪತನಗೊಂಡಿತು. ಅವರು 2007-08ರ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಈ ಸಾಧನೆಗೈದಿದ್ದರು.
7 ಪಂದ್ಯಗಳಿಂದ 3 ಶತಕ
“ನಾನು ದ್ವಿಶತಕದ ನಿರೀಕ್ಷೆಯಲ್ಲೇ ಇರಲಿಲ್ಲ. ಕೇವಲ 30 ರನ್ ಅಗತ್ಯವಿದ್ದಾಗ ನಾನು ಇದನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಮೂಡಿತು. ಪೂರ್ತಿಗೊಂಡಾಗ ಬಹಳ ಖುಷಿಯಾಯಿತು. ಡ್ರೆಸ್ಸಿಂಗ್ ರೂಮಿಗೆ ಬಂದ ಬಳಿಕವೇ ಇದು ದಾಖಲೆ ಎಂಬುದು ನನಗೆ ತಿಳಿಯಿತು’ ಎಂದು 27ರ ಹರೆಯದ ಕೌಶಲ್ ಹೇಳಿದರು. ಇದೇ ಕೂಟದಲ್ಲಿ ಬಿಹಾರ್ ವಿರುದ್ಧ ಪದಾರ್ಪಣೆ ಮಾಡಿದ ಕೌಶಲ್, ಈಗಾಗಲೇ 7 ಪಂದ್ಯಗಳಿಂದ 3 ಶತಕ ಬಾರಿಸಿದ್ದಾರೆ.
ಕೌಶಲ್ ತಮ್ಮ ಜತೆಗಾರ ವಿನೀತ್ ಸಕ್ಸೇನಾ ಜತೆಗೂಡಿ ಮೊದಲ ವಿಕೆಟಿಗೆ 296 ರನ್ ಪೇರಿಸಿದರು. ಈ ಸಂದರ್ಭದಲ್ಲಿ ದಿಲ್ಲಿ ಆರಂಭಿಕರಾದ ಶಿಖರ್ ಧವನ್-ಆಕಾಶ್ ಚೋಪ್ರಾ ಅವರ 277 ರನ್ನುಗಳ ಜತೆಯಾಟದ ದಾಖಲೆ ಪತನಗೊಂಡಿತು. ಇವರು 2007-08ರಲ್ಲಿ ಪಂಜಾಬ್ ವಿರುದ್ಧ ಈ ಸಾಧನೆಗೈದಿದ್ದರು. ವಿನೀತ್ ಸಕ್ಸೇನಾ ಗಳಿಕೆ 100 ರನ್. ಉತ್ತರಾಖಂಡ ಎರಡೇ ವಿಕೆಟಿಗೆ 366 ರನ್ ಪೇರಿಸಿದರೆ, ಸಿಕ್ಕಿಮ್ 6ಕ್ಕೆ 167 ರನ್ ಗಳಿಸಿ ಶರಣಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.