ವಾಹನ ನಿಯಂತ್ರಿಸದಿದ್ದರೆ ಬೆಂಗಳೂರಿಗೆ ಹೊಗೆ


Team Udayavani, Oct 8, 2018, 12:22 PM IST

vahana.jpg

ಬೆಂಗಳೂರು: ರಾಜ್ಯದ ವಾಹನಗಳ ಸಂಖ್ಯೆ ಈಗ ಎರಡು ಕೋಟಿ ದಾಟಿದೆ. ಇದರಲ್ಲಿ ಶೇ.40ರಷ್ಟು ವಾಹನಗಳು ಬೆಂಗಳೂರಿನಲ್ಲೇ ಇವೆ. ಅದರಲ್ಲೂ ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಆ ವಾಹನಗಳು ಸಂಚರಿಸಲು ಇರುವ ರಸ್ತೆಗಳ ಸಂಖ್ಯೆ ಮಾತ್ರ ಏರಿಕೆ ಆಗಿಲ್ಲ! ಹೌದು, ನಗರದಲ್ಲಿ ಪ್ರತಿ ಇಬ್ಬರಿಗೆ ಒಂದು ವಾಹನ ಇದೆ. 2012ರಲ್ಲಿ ವಾಹನಗಳ ಸಂಖ್ಯೆ 41.50 ಲಕ್ಷ ಇತ್ತು.

ಈಗ ಅದೇ ರಸ್ತೆಗಳಲ್ಲಿ 74 ಲಕ್ಷ ವಾಹನಗಳು ಓಡಾಡುತ್ತಿವೆ. ಈ ಮಧ್ಯೆ ಹೊರಗಡೆಯಿಂದ ನಿತ್ಯ ಸಾವಿರಾರು ವಾಹನಗಳು ಬಂದುಹೋಗುತ್ತವೆ. ಆದರೆ, ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಪ್ರತ್ಯೇಕ ರಸ್ತೆ ಸೇರ್ಪಡೆಯಾಗಿಲ್ಲ. ಕೇವಲ ವಿಸ್ತರಣೆ ಮತ್ತು ಅಲ್ಲಲ್ಲಿ ಬೆರಳೆಣಿಕೆಯಷ್ಟು ಫ್ಲೈಓವರ್‌ಗಳು ನಿರ್ಮಾಣವಾಗಿವೆ. ಇದು ಪರಿಸರ ಮಾಲಿನ್ಯ, ದಟ್ಟಣೆ-ಧೂಳು, ಅನಾರೋಗ್ಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

74 ಲಕ್ಷದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ 51.50 ಲಕ್ಷ ಇದ್ದರೆ, ಕಾರುಗಳ ಸಂಖ್ಯೆ 15 ಲಕ್ಷಕ್ಕೂ ಅಧಿಕ. ಈ ಕಾರುಗಳಲ್ಲಿ ಬಹುತೇಕ ಡೀಸೆಲ್‌ ವಾಹನಗಳೇ ಇವೆ. ಇವೆಲ್ಲವೂ ಒಮ್ಮೆಲೆ ರಸ್ತೆಗಿಳಿದಾಗ ದಟ್ಟಣೆಯಿಂದ ವೇಗಮಿತಿ ಕಡಿಮೆ ಆಗುತ್ತದೆ. ಇದರಿಂದ ಹೊಗೆ ಉಗುಳುವ ಪ್ರಮಾಣ ಕೂಡ ಏರಿಕೆ ಆಗುತ್ತದೆ. ಇದೇ ಕಾರಣಕ್ಕೆ ನಗರದ ವಾಯು ಮಾಲಿನ್ಯದಲ್ಲಿ ಶೇ.42ರಷ್ಟು ವಾಹನಗಳ ಪಾಲೂ ಇದೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಏರಿಕೆ ಆಗುತ್ತಲೇ ಇದೆ.

ನೋಂದಣಿಗೆ ಕಡಿವಾಣ ಅತ್ಯಗತ್ಯ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂಲಗಳ ಪ್ರಕಾರ ಅಂದಾಜು 50 ರಸ್ತೆಗಳಲ್ಲಿ ಸುಮಾರು 100 ಕಿ.ಮೀ.ನಷ್ಟು ವಿಸ್ತರಣೆಯಾಗಿದೆ. ಸುಮಾರು ಹತ್ತು ಗ್ರೇಡ್‌ ಸಪರೇಟರ್‌ಗಳು ಸೇರಿದಂತೆ 20ಕ್ಕೂ ಅಧಿಕ ಫ್ಲೈಓವರ್‌ಗಳು ಸೇರ್ಪಡೆಗೊಂಡಿವೆ. ಈ ಮಧ್ಯೆ 42.3 ಕಿ.ಮೀ ಉದ್ದದ “ನಮ್ಮ ಮೆಟ್ರೋ’ ಬಂದಿದೆ. ಆದರೆ, ಈಗಿರುವ ವಾಹನಗಳಿಗೆ ಇದು ಸಾಕಾಗುತ್ತದೆಯೇ? ಉತ್ತರ- ಇಲ್ಲ.

ನೋಂದಣಿ ಮಾಡಿದ ವಾಹನಗಳಲ್ಲದೆ, ನೋಂದಣಿಯಾಗದ ವಾಹನಗಳ ಸಂಖ್ಯೆಯೂ ಸುಮಾರು 4ರಿಂದ 5 ಲಕ್ಷ ಇರುತ್ತದೆ. ಅಂದರೆ ಒಟ್ಟಾರೆ ನಗರದಲ್ಲಿರುವ ವಾಹನಗಳ ಸಂಖ್ಯೆ 78 ಲಕ್ಷ ಎನ್ನಬಹುದು. ಇದರಲ್ಲಿ ಶೇ.15ರಷ್ಟು ಬೇರೆ ಕಡೆಗಳಲ್ಲಿ ಪಾರ್ಕಿಂಗ್‌ ಹಾಗೂ ಶೇ.15ರಷ್ಟು ನಿತ್ಯ ಉಪಯೋಗಿಸದೆ ಇರಬಹುದು. ಇನ್ನು 14ರಿಂದ 15 ಸಾವಿರ ಕಿ.ಮೀ ರಸ್ತೆಯಲ್ಲಿ ಹೆಚ್ಚೆಂದರೆ 18ರಿಂದ 20 ಲಕ್ಷ ವಾಹನಗಳು ಸಂಚರಿಸಲು ಸಾಧ್ಯವಿದೆ. ಆದರೆ, ಇದರ ಮೂರು ಪಟ್ಟು ಈಗ ಓಡಾಡುತ್ತಿವೆ.

ಸಹಜವಾಗಿಯೇ ಇದು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಸಾರಿಗೆ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ. ನಿತ್ಯ 4ರಿಂದ 5 ಸಾವಿರ ವಾಹನಗಳ ನೋಂದಣಿ ಆಗುತ್ತಿದೆ. ಮೊದಲು ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ವಾಹನಗಳ ನೋಂದಣಿ ಪ್ರಮಾಣವನ್ನು ನಿತ್ಯ 500ಕ್ಕೆ ಸೀಮಿತಗೊಳಿಸಬೇಕು. ವಾಹನಗಳ ನಿಲುಗಡೆಗೆ ತೆರಿಗೆ ವಿಧಿಸಬೇಕು. ಹೆಚ್ಚು ದಟ್ಟಣೆ ಇರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಶುಲ್ಕ ನಿಗದಿಪಡಿಸಬೇಕು. ಇಂತಹ ಹಲವು ಕ್ರಮಗಳಿಂದ ವಾಹನಗಳ ಓಟಕ್ಕೆ ಕಡಿವಾಣ ಬೀಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ನಿರ್ವಹಣಾ ವ್ಯವಸ್ಥೆ ಸರಿಯಾಗಿಲ್ಲ: ನೋಂದಣಿಯಾದ ಎಲ್ಲ ವಾಹನಗಳಲ್ಲಿ ಕೆಲವು ನಿಗದಿತ ಅವಧಿ ಮೀರಿ ಗುಜರಿಗೆ ಹಾಕುವ ಸ್ಥಿತಿ ತಲುಪಿವೆ. ಇವು ಉಳಿದೆಲ್ಲವುಗಳಿಗಿಂತ ಹೆಚ್ಚು ಹೊಗೆ ಉಗುಳುತ್ತವೆ. ಆದರೆ, ಅಂತಹ ವಾಹನಗಳಿಗೆ ಕಡಿವಾಣ ಇಲ್ಲ. ಇತ್ತೀಚಿನ ದಿನಗಳಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಕಾರುಗಳ ಟ್ರೆಂಡ್‌ ಹೆಚ್ಚುತ್ತಿದ್ದು, ಅದರಲ್ಲೂ ಡೀಸೆಲ್‌ ಆಧಾರಿತ ವಾಹನಗಳು ಹೆಚ್ಚು ರಸ್ತೆಗಿಳಿಯುತ್ತಿವೆ. ಪರಿಣಾಮ ವಾಯುಮಾಲಿನ್ಯ ನಿರಂತರವಾಗಿ ಏರಿಕೆ ಕ್ರಮದಲ್ಲಿ ಸಾಗಿದೆ. ಆದರೆ, ಇದೆಲ್ಲವನ್ನೂ ನಿರ್ವಹಣೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದು ಅಜೀಂ ಪ್ರೇಮ್‌ಜಿ ಫಿಲಾಂಥಪಿಕ್‌ ಇನಿಷಿಯೇಟಿವ್ಸ್‌ (ಎಪಿಪಿಐ) ಪ್ರಧಾನ ವ್ಯವಸ್ಥಾಪಕ ಯೋಗೇಶ್‌ ಬೇಸರ ವ್ಯಕ್ತಪಡಿಸುತ್ತಾರೆ.  

ನಗರದಲ್ಲಿ 60 ಲಕ್ಷ ಜನ ಪ್ರಯಾಣಿಸುತ್ತಿದ್ದು, ಈ ಪೈಕಿ 3ರಿಂದ 4 ಲಕ್ಷ ಜನ ಮಾತ್ರ ಮೆಟ್ರೋದಲ್ಲಿ ಹೋಗುತ್ತಾರೆ. ಉಳಿದವರು ಬಸ್‌, ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಲೆಕ್ಕಹಾಕಿದರೆ, ಹತ್ತು ಸಾವಿರ ಬಸ್‌ಗಳ ಅವಶ್ಯಕತೆ ಇದೆ. ಆದರೆ, ಬಿಎಂಟಿಸಿಯ 6,300 ಬಸ್‌ಗಳಿವೆ. ಹಾಗೊಂದು ವೇಳೆ ಉಳಿದ 3,700 ಬಸ್‌ ಖರೀದಿಸಿದರೂ ಈಗಿರುವ ರಸ್ತೆಗಳಲ್ಲಿ ಅವುಗಳ ಕಾರ್ಯಾಚರಣೆಯೇ ಸವಾಲಾಗಿದೆ ಎನ್ನುತ್ತಾರೆ ಬಿಎಂಟಿಸಿ ಸಂಚಾರ ವಿಭಾಗದ ಅಧಿಕಾರಿಗಳು. 

ಟಾಪ್‌ 5ರಲ್ಲಿ ಬೆಂಗಳೂರಿಗೆ 3ನೇ ಸ್ಥಾನ: ಅತಿ ಹೆಚ್ಚು ವಾಹನಗಳನ್ನು ಹೊಂದಿದ ದೇಶದ ಟಾಪ್‌ ಐದು ನಗರಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ! ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ದೆಹಲಿ ಮತ್ತು ಮುಂಬೈ ಇದ್ದು, ಹೈದರಾಬಾದ್‌ ಮತ್ತು ಅಹಮದಾಬಾದ್‌ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ವಾಹನಗಳ ನೋಂದಣಿಗೆ ಕಡಿವಾಣ ಬೀಳದಿದ್ದರೆ, ಅಲ್ಪಾವಧಿಯಲ್ಲಿ ಮುಂಬೈ ಅನ್ನು ಹಿಂದಿಕ್ಕಲಿದೆ.  

ಮೆಟ್ರೋ ವಿಳಂಬ ನಿರಾಸೆ: ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸಲು ಮತ್ತು ಆ ಮೂಲಕ ಖಾಸಗಿ ವಾಹನಗಳಿಗೆ ಬ್ರೇಕ್‌ ಹಾಕುವಲ್ಲಿ “ನಮ್ಮ ಮೆಟ್ರೋ’ ಪ್ರಮುಖ ಪಾತ್ರ ವಹಿಸಲಿದೆ. ಆದರೆ, ಯೋಜನೆ ವಿಳಂಬದಿಂದ ಜನ ಅನಿವಾರ್ಯವಾಗಿ ಖಾಸಗಿ ವಾಹನಗಳತ್ತ ಮುಖಮಾಡುತ್ತಿದ್ದಾರೆ. ಸಕಾಲದಲ್ಲಿ ಮೆಟ್ರೋ ಸೇವೆ ಲಭ್ಯವಾದರೆ, ಜನ ಖಾಸಗಿ ವಾಹನಗಳ ಮೊರೆಹೋಗುವುದು ತಪ್ಪಲಿದೆ. ಇದಕ್ಕೆ ಮೊದಲ ಹಂತದ ಯೋಜನೆಯೇ ಸಾಕ್ಷಿ.  

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ ವಿವಿಧೆಡೆ ಮಾಲಿನ್ಯ ಮಾಪನ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲೆಲ್ಲಾ ಇತ್ತೀಚಿನ ವರ್ಷಗಳಲ್ಲಿ ಇಳಿಕೆ ಕ್ರಮದಲ್ಲಿದ್ದರೂ ರಾಷ್ಟ್ರೀಯ ಮಿತಿಗೆ ಹೋಲಿಸಿದಾಗ, ಕೆಲವೆಡೆ ದುಪ್ಪಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಕಾರ ಉಸಿರಾಡುವಾಗ ದೇಹ ಸೇರಲ್ಪಡುವ ದೂಳಿನ ಕಣಗಳ ಪ್ರಮಾಣ ಹೀಗಿದೆ.  

ಪ್ರದೇಶ    2014-15    2015-16    2016-17    ರಾಷ್ಟ್ರೀಯ ಮಿತಿ
ಐಟಿಪಿಎಲ್‌    230    180    130    60
ಯಲಹಂಕ (ಕೈಗಾರಿಕಾ ಪ್ರದೇಶ)    121    100    111    60
ಪೀಣ್ಯ (ಕೈಗಾರಿಕಾ ಪ್ರದೇಶ)    144    127    109    60
ಮೈಸೂರು ರಸ್ತೆ    209    119    107    60
ಯಶವಂತಪುರ    129    105    93    60
ಸೆಂಟ್ರಲ್‌ ಸಿಲ್ಕ್ ಬೋರ್ಡ್‌    189    165    132    60
ವಿಕ್ಟೋರಿಯಾ ಆಸ್ಪತ್ರೆ    162    135    127    60
ವೈಟ್‌ಫೀಲ್ಡ್‌    69    75    83    
60 ಸಿಟಿ ರೈಲು ನಿಲ್ದಾಣ    67    104    102    60
ಬಾಣಸವಾಡಿ    85    84    80    60
ದೊಮ್ಮಲೂರು    80    80    120    60
ಕೆ.ಆರ್‌. ವೃತ್ತ    –    –    86    60 

ರಸ್ತೆಗಳ ವಿವರ 800 ಚದರ ಕಿ.ಮೀ ನಗರದ ಒಟ್ಟು ವಿಸ್ತೀರ್ಣ  72 ಲಕ್ಷ  ನಗರದಲ್ಲಿರುವ ವಾಹನಗಳು 93,000 ಬೆಂಗಳೂರಿನಲ್ಲಿರುವ ರಸ್ತೆಗಳು 14,000 ಕಿ.ಮೀ ನಗರದಲ್ಲಿರುವ ರಸ್ತೆಗಳ ಉದ್ದ  100 ಕಿ.ಮೀ ಕಳೆದ ಐದು ವರ್ಷಗಳಲ್ಲಿ ವಿಸ್ತರಣೆಯಾದ ರಸ್ತೆ ಉದ್ದ  50 ಐದು ವರ್ಷಗಳಲ್ಲಿ ವಿಸ್ತರಣೆಯಾದ ರಸ್ತೆಗಳು

ಮಾಲಿನ್ಯದಲ್ಲಿ ಯಾವ್ಯಾವುದರ ಪಾಲು ಎಷ್ಟು?
ವಾಹನಗಳು    ಶೇ.42 ರಸ್ತೆಯ ಧೂಳು    ಶೇ.20 ನಿರ್ಮಾಣ ಕಾಮಗಾರಿ    ಶೇ.14 ಕೈಗಾರಿಕೆ    ಶೇ.14 ಜನರೇಟರ್‌ಗಳು    ಶೇ.7  

ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ನೋಂದಣಿಯಾದ ವಾಹನಗಳ ವಿವರ (ಆರ್ಥಿಕ ವರ್ಷದ ಅಂತ್ಯಕ್ಕೆ)  
ವರ್ಷ    ನಗರದಲ್ಲಿನ ವಾಹನಗಳು    ರಾಜ್ಯದಲ್ಲಿನ ವಾಹನಗಳು
2012    41,56,132    1,09,09,601
2013    45,91,176    1,20,63,686
2014    50,50,057    1,33,35,106
2015    55,59,730    1,47,84,961
2016    61,12,897    1,62,91,984
2017    68,33,080    1,78,72,242
2018 (ಜುಲೈ ಅಂತ್ಯಕ್ಕೆ)    74,06,202    1,93,84,846 

ಆರೋಗ್ಯದ ಮೇಲೂ ಪರಿಣಾಮ: ವಾಯುಮಾಲಿನ್ಯದಿಂದ ಕಳೆದೆರಡು ದಶಕಗಳಲ್ಲಿ ನಗರದಲ್ಲಿ ನಿರಂತರ ಕೆಮ್ಮಿನಿಂದ ಬಳಲುತ್ತಿರುವವರ ಸಂಖ್ಯೆ ಮೂರುಪಟ್ಟು ಏರಿಕೆಯಾಗಿದೆ ಎಂದು ಮುಖ್ಯ ಶ್ವಾಸಕೋಶ ತಜ್ಞ ಡಾ.ಎಚ್‌.ಪರಮೇಶ್‌ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಿರುವುದನ್ನು ಇಲ್ಲಿ ಸ್ಮರಿಸಬಹುದು.   ನಗರದಲ್ಲಿ 1999ರಲ್ಲಿ ನಿರಂತರ ಕೆಮ್ಮಿನಿಂದ (chronic cough) ಬಳಲುತ್ತಿರುವವರ ಪ್ರಮಾಣ ಶೇ.8ರಷ್ಟಿತ್ತು.

ಈಗ ಶೇ.21.5ಕ್ಕೆ ಏರಿಕೆಯಾಗಿದೆ. ಅದೇ ರೀತಿ, 1979ರಲ್ಲಿ ಶೇ.8ರಷ್ಟಿದ್ದ ಅಸ್ತಮಾರೋಗಿಗಳ ಪ್ರಮಾಣ ಈಗ ಶೇ.26.5ಕ್ಕೆ ಏರಿಕೆಯಾಗಿದೆ. ಶೇ.27.35ರಷ್ಟು ಜನ ಕಣ್ಣು ಉಜ್ಜುವುದು, ಶೇ.42.45ರಷ್ಟು ಜನ ಗೊರಕೆ, ಶೇ.17ರಷ್ಟು ಹಲ್ಲುಕಡಿಯುವುದು, ಶೇ.43.4ರಷ್ಟು ಬಾಯಿಯಿಂದ ಉಸಿರಾಡುವುದು ಕಂಡುಬಂದಿದೆ ಎಂದು ಡಾ.ಪರಮೇಶ್‌ ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದಾರೆ.  

ರಿಮೋಟ್‌ ಸೆನ್ಸಿಂಗ್‌ ಅಗತ್ಯ: ಮಿತಿ ಮೀರಿ ಹೊಗೆ ಉಗುಳುವ ವಾಹನಗಳ ಮೇಲೆ ನಿಗಾ ಇಡಲು ರಿಮೋಟ್‌ ಸೆನ್ಸಿಂಗ್‌ ತಂತ್ರಜ್ಞಾನ ಬಳಕೆ ಅಗತ್ಯವಿದೆ ಎಂದು ಯೋಗೇಶ್‌ ಅಭಿಪ್ರಾಯಪಡುತ್ತಾರೆ. ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಈ ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ.

ರಸ್ತೆ ಬದಿಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಿ, ಅದರ ವಾಹನಗಳು ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಹೊಗೆ ಉಗುಳುವುದು, ವೇಗ, ಎಕ್ಸಿಲೇಟರ್‌ ಮತ್ತಿತರ ಅಂಶಗಳ ಮೇಲೆ ನಿಗಾ ಇಡಲು ಸಾಧ್ಯವಿದೆ. ಸಾವಿರಾರು ವಾಹನಗಳ ದತ್ತಾಂಶಗಳನ್ನು ಹೀಗೆ ಏಕಕಾಲದಲ್ಲಿ ಪಡೆಯಬಹುದು. ಈ ತಂತ್ರಜ್ಞಾನದ ಅವಶ್ಯಕತೆ ಬೆಂಗಳೂರಿನಲ್ಲೂ ಇದೆ ಎಂದು ಅವರು ತಿಳಿಸುತ್ತಾರೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.