ಮನೆ ಸಾಲ ಬೇಕು ಅಂದ್ರೆ ಇವೆಲ್ಲ ಇರಲೇ ಬೇಕು
Team Udayavani, Oct 8, 2018, 2:34 PM IST
ನಿಮಗೆ ಸ್ವಂತ ಮನೆ ಕಟ್ಟುವ ಕನಸಿದೆಯೇ ಹಾಗಾದರೆ ನಾವು ಸಾಲವನ್ನು ಕೊಡುತ್ತೇವೆ ಎಂದು ಇಲ್ಲದ ಸಾಲದ ಕನಸನ್ನು ಬಿತ್ತುವ ಕೆಲಸವನ್ನು ಬ್ಯಾಂಕ್‌ಗಳು ನಿರಂತರವಾಗಿ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ನಿಮ್ಮಲ್ಲಿ ಏಳುವ ಪ್ರಶ್ನೆ, ಯಾವ ಯಾವ ಉದ್ದೇಶಗಳಿಗೆ ಮನೆ ಸಾಲ ಸಿಗುತ್ತೆ ಅನ್ನುವುದು. ಕೆಲವರಿಗಂತೂ ಈಗಾಗಲೇ ಖರೀದಿಸಿದ ಸೈಟು ಇದೆ. ಅದರಲ್ಲಿ ಮನೆ ಕಟ್ಟಬೇಕು.
ಅದಕ್ಕಾಗಿ ಹಣ ಬೇಕಿರುತ್ತದೆ. ಕೆಲವರಲ್ಲಿ ಸೈಟೂ ಇರುವುದಿಲ್ಲ. ಮನೆಯೂ ಇಲ್ಲ, ಆದರೆ ಸೈಟನ್ನೂ ಖರೀದಿಸಿ ಮನೆಯನ್ನೂ ನಿರ್ಮಿಸಬೇಕು ಅನ್ನೋ ಉದ್ದೇಶ ಇರುತ್ತದೆ. ಇನ್ನು ಕೆಲವರದು ಪಟ್ಟಣದಲ್ಲಿ ಫ್ಲ್ಯಾಟ್ ಖರೀದಿಸಬೇಕು ಅದಕ್ಕೆ ಲೋನು ಸಿಗಬಹುದೇ- ಎಂಬ ಪ್ರಶ್ನೆ. ಹೀಗೆ ಬಗೆ ಬಗೆಯ ಕಾರಣಗಳಿಗಾಗಿ ಹಣ ಬೇಕಿದೆ ಅನ್ನುವವರ ಪಟ್ಟಿ ಬೆಳೆಯುತ್ತದೆ.
ಬ್ಯಾಂಕ್ ಗಳಲ್ಲಿ ಮನೆ ಕಟ್ಟುವ/ಕೊಳ್ಳುವ ಒಂದೇ ಉದ್ದೇಶಕ್ಕೆ ಅಗತ್ಯವಿರುವ ಎಲ್ಲ ಬಗೆಯ ಸಾಲಗಳು ಸಿಗುತ್ತವೆ. ಆದರೆ ಪ್ರತಿ ಬ್ಯಾಂಕ್‌ಗಳು ನಿಮ್ಮ ವರಮಾನವನ್ನು ಗುರಿಯಾಗಿರಿಸಿಯೇ ಸಾಲ ಕೊಡುವುದು. ಜತೆಗೆ, ಕಂತುಗಳನ್ನು ತೀರಿಸಲು ನಿಮಗೆ ಸಾಧ್ಯವಿರಬೇಕು. ದಾಖಲೆಗಳು ಪಕ್ಕಾ ಇರಬೇಕು. ಯಾವುದೇ ಹಣಕಾಸು ಸಂಸ್ಥೆಯಲ್ಲಿ ನೀವು ಸುಸ್ಥಿದಾರರಾಗಿರಬಾರದು. ನಿಮ್ಮ ಅರ್ಥ ವ್ಯವಸ್ಥೆ ಹಳಿತಪ್ಪಿರಬಾರದು.
ನೀವು ಈ ಹಿಂದೆ ಬೇರೆ ಬ್ಯಾಂಕ್‌ನಲ್ಲಿ ಬೇರೆ ಉದ್ದೇಶಕ್ಕೆ ಸಾಲ ಪಡೆದಿದ್ದು, ಅದು ಮಧ್ಯದಲ್ಲಿ ಎನ್‌ಪಿಎ ಆಗಿದ್ದು ತದನಂತರ ಅದನ್ನು ಕಟ್ಟಿ ಮುಗಿಸಿದ್ದರೆ ಇವೆಲ್ಲವನ್ನೂ ಬ್ಯಾಂಕಿಗೆ ಹೇಳುವ ಸಿಬಿಲ್ ರಿಪೋರ್ಟ್ ಎಂಬ ಹೊಸ ಅಸ್ತ್ರ ಬ್ಯಾಂಕಿನವರ ಬಳಿ ಇರುತ್ತದೆ. ಅದರ ಮೂಲಕ ನಿಮ್ಮ ಸಾಲದ ಮರುಪಾವತಿಯ ತಾಕತ್ತನ್ನು ಲೆಕ್ಕಹಾಕಿ ತಿಳಿಯುತ್ತಾರೆ. ಅಲ್ಲಿ ನಿಮ್ಮ ಮರುಪಾವತಿಯಲ್ಲಿನ ಪ್ರಾಮಾಣಿಕತೆಗೆ ಸಿಕ್ಕ ಅಂಕದ ಆಧಾರದ ಮೇಲೆ ನಿಮ್ಮ ಮುಂದಿನ ಸಾಲಗಳ ಹಾದಿ ನಿರ್ಧಾರವಾಗುತ್ತದೆ.
ಈ ದಾಖಲೆಗಳು ಬೇಕು
ಬ್ಯಾಂಕಿನಿಂದ ಸಾಲ ಪಡೆಯಲು ಹೊರಟಾಗ ನಿಮ್ಮ ಬಳಿ ಪಾಸ್‌ಪೋರ್ಟ್ ಅಳತೆಯ ಮೂರು ಭಾವಚಿತ್ರ ಇರಬೇಕು. ಗುರುತಿನ ಪುರಾವೆಗಾಗಿ ಸ್ವಯಂ ದೃಢೀಕೃತ ಪಾನ್ ಕಾರ್ಡ್ ಪ್ರತಿ, ಎನ್‌ಆರ್‌ಐ ಗ್ರಾಹಕರಾಗಿದ್ದರೆ ಪಾಸ್ ಪೋರ್ಟ್ ಪ್ರತಿ, ಐದು ಲಕ್ಷದೊಳಗಿನ ಸಾಲಕ್ಕೆ ಪಾನ್‌ಕಾರ್ಡ್ ಇಲ್ಲದಿದ್ದಲ್ಲಿ ಆಧಾರ್ ಕಾರ್ಡ್‌ನ ಪ್ರತಿ ಕೊಡಬೇಕು.
ಯಾವುದೇ ವರಮಾನವಿಲ್ಲದ ಸಹ ಸಾಲಗಾರರ ಪಾನ್‌ಕಾರ್ಡ್ ಇಲ್ಲದಿದ್ದಲ್ಲಿ ಆಧಾರ್‌ನ ಪ್ರತಿ ಬೇಕು. ಈಗ ವಾಸವಿರುವ ಮನೆಯ ವಿಳಾಸ ದೃಢೀಕರಿಸಲು ಪುರಾವೆ. ಆಧಾರ್ ಟೆಲಿಫೋನ್ ಬಿಲ್, ವೋಟರ್ ಐಡಿ, ಗ್ಯಾಸ್ ಬಿಲ್ ಇತರೆ ದಾಖಲೆಗಳು ಅಗತ್ಯವಾಗಿಬೇಕು.
ಸ್ವಂತ ಉದೋಗಸ್ಥರಿಗೆ
ನೀವು ಬಿಸ್ ನೆಸ್ ಮಾಡುತ್ತಿದ್ದರೆ ಅಲ್ಲಿನ ವಿಳಾಸದ ಪುರಾವೆ, ನಿಮ್ಮ ಬ್ಯಾಂಕ್ ಖಾತೆಯ ಕಳೆದ ಆರು ತಿಂಗಳ ವಹಿವಾಟಿನ ಸ್ಟೇಟ್‌ಮೆಂಟ…, ಬ್ಯಾಂಕಿನವರು ನಿಗದಿಪಡಿಸಿದ ನಮೂನೆಯಲ್ಲಿ ನಿಮ್ಮ ಅಸೆಟ್ಸ… ಮತ್ತು ಲಯಾಬಿಲಿಟಿ (ನಿಮ್ಮ ಆಸ್ತಿ ಮತ್ತು ಸಾಲಗಳ) ಪಟ್ಟಿ ಕೊಡಬೇಕು. ಇತರರು ಮೂರು ವರ್ಷದ ಇನ್ಕಂ ಟ್ಯಾಕ್ಸ್ ರಿಟರ್ನ್ ನೀಡಬೇಕು.
ಸಂಬಳ ಪಡೆಯುವವರಾದರೆ ಇತ್ತೀಚಿನ ತಿಂಗಳ ವೇತನದ ಪಟ್ಟಿ, ಸಂಬಳದಾರರ ಕಳೆದ ಎರಡು ವರ್ಷದ ಫಾರಂ- 16 ಅಥವಾ ಎರಡು ವರ್ಷದ ಇನ್ಕಂ ಟ್ಯಾಕ್ಸ್ ರಿಟರ್ನ್ ಕೊಡಬೇಕು. ಇವಿಷ್ಟು ಸಾಲ ಪಡೆಯುವವರು ತಮ್ಮನ್ನು ಹಾಗೂ ತಮ್ಮ ಆದಾಯವನ್ನು ದಾಖಲೆಗಳ ಮೂಲಕ ಪ್ರೂವ್ ಮಾಡಿಕೊಳ್ಳುವುದು ಒಳಿತು.
ಆಸ್ತಿಯ ದಾಖಲೆ ಪಕ್ಕಾ ಇರಬೇಕು
ಸಾಲ ಪಡೆಯಲು ಪ್ರಮುಖ ಜಾಮೀನುದಾರನಂತಿರುವ ಕೊಳ್ಳುವ ಮನೆ/ ಸೈಟಿನ ದಾಖಲೆಗಳೂ ಕೂಡ ಪಕ್ಕಾ ಆಗಿರಬೇಕು. ಇಲ್ಲಿ, ನಮ್ಮ ಆದಾಯದ ಮೂಲಗಳನ್ನು ಹೇಗೆ ಖಚಿತ ಪಡಿಸುತ್ತೇವೋ ಹಾಗೆಯೇ, ಕಟ್ಟಡದ ರೆವಿನ್ಯೂ ದಾಖಲೆಗಳನ್ನು ನೀಡಬೇಕಾಗುತ್ತದೆ. ಅವುಗಳೆಂದರೆ ಮಾರಾಟದ ಕರಾರು ಪತ್ರ, ಸೇಲ್ಡೀಡ್, ಮನೆ ಕಟ್ಟಲಿರುವ ಸೈಟು ಅಥವಾ ಖರೀದಿಸುವ ಮನೆಗೆ ಸಂಬಂಧಿಸಿದ ಮೂಲ ಪತ್ರಗಳು ಅಥವಾ ಸಬ್ ರಿಜಿಸ್ಟ್ರಾರ್ ಅವರಿಂದ ಪಡೆದ ದೃಢೀಕೃತ ಪ್ರತಿಗಳು. ಸೈಟು/ಮನೆ ಬೇರೆ ಯಾರಿಗೂ ಪರಭಾರೆಯಾಗಿಲ್ಲ ಎಂಬ ಬಗ್ಗೆ 13 ವರ್ಷಗಳ ಇ.ಸಿ. ಸರ್ಟಿಫಿಕೇಟ್ -ಮನೆ/ಸೈಟಿಗೆ ಕಟ್ಟಿದ ಕಂದಾಯದ ರಸೀದಿಗಳು- ಖಾತೆಯ ನಕಲು ಇವೆಲ್ಲ ಇರಬೇಕು.
ಒಂದೊಮ್ಮೆ ವ್ಯವಸಾಯ ಭೂಮಿಯನ್ನು ವ್ಯವಸಾಯೇತರಕ್ಕಾಗಿ ಪರಿವರ್ತಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಕನ್ವರ್ಷನ್ ದಾಖಲೆಗಳು ಇರಬೇಕು. ಇವಿಷ್ಟು, ಕೊಳ್ಳುವ ಮನೆಗೆ ಸಾಲ ಪಡೆಯುವಾಗ ಸಿದ್ಧ ಮಾಡಿಕೊಳ್ಳಬೇಕಾದ ದಾಖಲೆಗಳು. ಇದಲ್ಲದೇ ನೀವು ಮನೆ ಕಟ್ಟಬಹುದು ಅಂತ ಸ್ಥಳೀಯ ಸಂಸ್ಥೆಗಳು ನೀಡುವ ಅನುಮೋದನೆಗಳನ್ನೂ ಬ್ಯಾಂಕ್‌ಗಳು ಕೇಳುತ್ತವೆ.
ವಯಸ್ಸು ಮತ್ತು ಸಾಲ ವರ್ಗಾವಣೆ
ಬ್ಯಾಂಕ್‌ಗಳು 65 ವರ್ಷ ವಯಸ್ಸಿನ ತನಕ ಸಾಲ ನೀಡುತ್ತವೆ. ಆದರೆ ಒಂದು ಸಲ ಸಾಲ ಪಡೆದರೆ 70ರ ವಯಸ್ಸಿನ ತನಕ ಮರುಪಾವತಿಯ ಮಾಡಬಹುದು. ಉದಾಹರಣೆಗೆ- 58ರ ವಯಸ್ಸಲ್ಲಿ ಸಾಲ ಮಾಡಿದರೆ, ನಿಮಗೆ 12 ವರ್ಷ ಮರುಪಾವತಿ ಸಮಯ ಇರುತ್ತದೆ. ಒಂದು ಪಕ್ಷ ನಿಮ್ಮ ವಯಸ್ಸು 60 ದಾಟಿದೆ ಅಂತಿಟ್ಟುಕೊಳ್ಳಿ, ಐವತ್ತು ವರ್ಷ ಒಳಗಿನವರನ್ನು ನಿಮ್ಮ ಜತೆ ಸೇರಿಸಿಕೊಂಡು ಜಂಟಿಯಾಗಿ ಸಾಲ ಮಾಡಿದರೆ, ಸಾಲದ ಮೊತ್ತ ಹೆಚ್ಚಾಗುತ್ತದೆ.
ಹೀಗೆ ಪಡೆದ ಸಾಲವನ್ನು ಇನ್ನೊಂದು ಬ್ಯಾಂಕಿಗೆ ವರ್ಗಾಯಿಸಬೇಕು. ಇದಕ್ಕೆ ಸಾಲ ಪಡೆದ ಸಂಸ್ಥೆಯಲ್ಲಿ ಸಾಲ ಸುಸ್ತಿಯಾಗಿಲ್ಲ ಎಂಬ ಬಗ್ಗೆ ದೃಢೀಕರಣ ಕೊಡಬೇಕು. ಹಾಗೆಯೇ, ಬಾಕಿ ಇರುವ ಸಾಲದ ಮೊತ್ತ, ಅದಕ್ಕೆ ನೀಡಿರುವ ದಾಖಲೆಗಳ ವಿವರ, ಪ್ರತಿಗಳನ್ನು ನೀಡಬೇಕು. ಟೇಕ್‌ಒವರ್ ಮಾಡಿದ ಅನಂತರ ಮತ್ತೊಮ್ಮೆ ಬ್ಯಾಂಕಿಗೆ ನೋಂದಣಿ ಮಾಡಿಸಿಕೊಳ್ಳುತ್ತದೆ. ಇದರ ಖರ್ಚು ವೆಚ್ಚವನ್ನೂ ಸಾಲ ಪಡೆದವರು ಭರಿಸಬೇಕಾಗುತ್ತದೆ.
ಇದೆಲ್ಲಕ್ಕೂ ಸಾಲ
ಮನೆಯನ್ನು ಕಟ್ಟಲು ಖರೀದಿಸುವ ಸೈಟಿಗೆ
ಈಗಾಗಲೇ ಬೇರೊಬ್ಬರು ಕಟ್ಟಿರುವ ಹಳೆ/ಹೊಸ ಮನೆಯನ್ನು ನೀವು ಖರೀದಿಸುವುದಾದರೆ
ನಿಮ್ಮ ಸೈಟಿನಲ್ಲಿ ಮನೆ ಅಥವಾ ಫ್ಲ್ಯಾಟ್ ನಿರ್ಮಿಸಲು.
ಈಗಾಗಲೇ ಇರುವ ಮನೆಯನ್ನು ಎಕ್ಸ್‌ಟೆನ್ಷನ್ ಮಾಡಲು
ಈಗಿರುವ ಮನೆಯನ್ನು ರಿಪೇರಿ ಮಾಡಿಸಲು
ಈಗಾಗಲೇ ಬೇರೊಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಇರುವ ಮನೆ ಸಾಲವನ್ನು ನಿಮ್ಮ ಬ್ಯಾಂಕಿಗೆ ವರ್ಗಾಯಿಸಿಕೊಳ್ಳಲು.
ಮನೆಯ ಒಳಾಂಗಣ ನವೀಕರಣ ಹಾಗೂ ಫರ್ನಿಚರ್ ಮತ್ತು ಉಪಕರಣಗಳನ್ನು
ಅಳವಡಿಸಲು
ಈಗಾಗಲೇ ನಿಮ್ಮ ಹಣದಲ್ಲಿ ಖರೀದಿಸಿದ, ಕಟ್ಟಿಸಿದ ಖರ್ಚುವೆಚ್ಚಗಳನ್ನು ಮನೆ ಕಟ್ಟಿ
ಮುಗಿಸಿದ ಹನ್ನೆರಡು ತಿಂಗಳ ಒಳಗೆ ನೀವು ವಾಪಸ್ ಪಡೆಯಲು
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡು ಮನೆ ಸಾಲಗಳನ್ನು ನೀಡಬಹುದು ಮೂರನೇ ಮನೆ
ಸಾಲ ಬೇಕಾದಲ್ಲಿ ಅದು ಕಮರ್ಷಿಯಲ್ ಆಗುವುದರಿಂದ ಅದರ ಬಡ್ಡಿ ದರ ಬೇರೆ ತೆರನಾಗಿರುತ್ತದೆ.
ಮನೆಸಾಲಕ್ಕೆ ಪಡೆಯುವ ವೈಯಕ್ತಿಕ ವಿಮಾ ಕಂತಿಗೂ ಮನೆ ಸಾಲ ಸಿಗುತ್ತದೆ.
ರಾಮಸ್ವಾಮಿ ಕಳಸವಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.