ಏರಿಂಡಿಯಾದಿಂದ 5,000 ಕೋಟಿ ಬಾಕಿ: ವೈಮಾನಿಕ ಇಂಧನ ಪೂರೈಕೆ ಅಮಾನತು
Team Udayavani, Oct 8, 2018, 6:48 PM IST
ಹೊಸದಿಲ್ಲಿ : ಏರಿಂಡಿಯಾ ವಿಮಾನ ಸಂಸ್ಥೆ ತೈಲ ಮಾರಾಟ ಕಂಪೆನಿಗಳಿಗೆ 5,000 ಕೋಟಿ ರೂ. ಪಾವತಿ ಬಾಕಿ ಇರಿಸುವ ಕಾರಣಕ್ಕೆ ತೈಲ ಮಾರಾಟ ಸಂಸ್ಥೆಗಳು ಏರಿಂಡಿಯಾ ಸಂಸ್ಥೆಯ ದೇಶೀಯ ಹಾರಾಟದ ವಿಮಾನಗಳಿಗೆ ವೈಮಾನಿಕ ಇಂಧನ ಪೂರೈಕೆಯನ್ನು (ಎಟಿಎಫ್) ಅಮಾನತುಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಏರಿಂಡಿಯಾ ವಿಮಾನಯಾನ ಸಂಸ್ಥೆಯ ದೇಶೀಯ ವಿಮಾನ ಹಾರಾಟದ ಎಂಟು ಪ್ರಮುಖ ತಾಣಗಳಾಗಿರುವ ಮೊಹಾಲಿ, ಪಟ್ನಾ, ಪುಣೆ, ತಿರುವನಂತಪುರ, ಲಕ್ನೋ, ವಿಶಾಖಪಟ್ಟಣ, ಕೊಯಮುತ್ತೂರು ಮತ್ತು ಜೈಪುರ ಕ್ಕೆ ತೈಲ ಮಾರಾಟ ಸಂಸ್ಥೆಗಳು ವೈಮಾನಿಕ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿರುವುದಾಗಿ ಮೂಲಗಳು ಬಹಿರಂಗಪಡಿಸಿವೆ. ಇಂದು ಸೋಮವಾರ ಸಂಜೆ 4 ಗಂಟೆಯ ಬಳಿಕದಲ್ಲಿ ಎಟಿಎಫ್ ಪೂರೈಕೆ ಅಮಾನತು ನಿರ್ಧಾರ ಜಾರಿಗೆ ಬಂದಿರುವುದಾಗಿ ವರದಿಯಾಗಿದೆ.
ಏರಿಂಡಿಯಾ ಸಂಸ್ಥೆ ತೈಲ ಮಾರಾಟ ಕಂಪೆನಿಗಳಿಗೆ ಒಟ್ಟು 5,000 ಕೋಟಿ ರೂ. ಪಾವತಿಯನ್ನು ಬಾಕಿ ಇರಿಸಿದೆ. ಈ ಸಂಬಂಧ ಅದು ದಿನಂಪ್ರತಿ 20 ಕೋಟಿ ರೂ.ಗಳನ್ನು ಪಾವತಿಸುತ್ತಿದೆ. ಹಾಗಿದ್ದರೂ ಏರಿಂಡಿಯಾ ಮಾಡುತ್ತಿರುವ ದೈನಂದಿನ 20 ಕೋಟಿ ರೂ. ಪಾವತಿ ಕೂಡ ಕ್ರಮಬದ್ಧವಾಗಿಲ್ಲ. ಹಾಗಾಗಿ ಎಟಿಎಫ್ ಪೂರೈಕೆಯನ್ನು ತೈಲ ಮಾರಾಟ ಕಂಪೆನಿಗಳು ಅಮಾನತುಗೊಳಿಸಿವೆ.
ಈ ನಡುವೆ ಏರಿಂಡಿಯಾ ಸಂಸ್ಥೆ ತನಗೆ ತತ್ಕ್ಷಣಕ್ಕೆ 2,000 ಕೋಟಿ ರೂ. ಬಂಡವಾಳ ಒದಗಿಸುವಂತೆ ಕೇಂದ್ರ ಸರಕಾರವನ್ನು ಸಂಪರ್ಕಿಸಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.