ಕೆಜಿಎಫ್ ಬಿಡುಗಡೆ ಮುಂದಕ್ಕೆ?
Team Udayavani, Oct 9, 2018, 11:39 AM IST
ಯಶ್ ನಾಯಕರಾಗಿರುವ “ಕೆಜಿಎಫ್’ ನವೆಂಬರ್ 16 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿಕೊಂಡಿತ್ತು. ಆದರೆ, ಈಗ ಗಾಂಧಿನಗರದಿಂದ ಸುದ್ದಿಯೊಂದು ಬಂದಿದೆ. ಅದು “ಕೆಜಿಎಫ್’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿರುವ ಕುರಿತಾಗಿ. ಗಾಂಧಿನಗರದ ಮೂಲಗಳ ಪ್ರಕಾರ “ಕೆಜಿಎಫ್’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಡಿಸೆಂಬರ್ 21 ಅಥವಾ 28ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡುವ ಹೊಂಬಾಳೆ ಫಿಲಂಸ್‌ನ ಕಾರ್ತಿಕ್, “ಸದ್ಯ ಈ ಬಗ್ಗೆ ನಾನು ಏನನ್ನೂ ಹೇಳಲಾಗದು. ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ’ ಎಂದಷ್ಟೇ ಹೇಳುತ್ತಾರೆ. ಯಶ್‌ಗೆ ಡಿಸೆಂಬರ್ ತಿಂಗಳು ಲಕ್ಕಿ ಎಂಬ ಮಾತೂ ಇದೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಅವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ.
ಈಗ “ಕೆಜಿಎಫ್’ ಕೂಡಾ ಡಿಸೆಂಬರ್‌ಗೆ ಹೋಗಿರುವುದರಿಂದ ಮತ್ತೂಮ್ಮೆ ಅದೃಷ್ಟದ ಮಾತು ಓಡಾಡುತ್ತಿದೆ. ಎಲ್ಲಾ ಓಕೆ ಬಿಡುಗಡೆ ಮುಂದಕ್ಕೆ ಹೋಗಲು ಕಾರಣವೇನು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಅದಕ್ಕೆ ಸ್ಪಷ್ಟ ಉತ್ತರವಿಲ್ಲ. ಚಿತ್ರದ ಕೆಲವು ದೃಶ್ಯಗಳನ್ನು ರೀಶೂಟ್ ಮಾಡಲು ಚಿತ್ರತಂಡ ಮುಂದಾಗಿದೆ ಎಂಬೆಲ್ಲಾ ಸುದ್ದಿಗಳು ಓಡಾಡುತ್ತಿದೆ. ಎಲ್ಲದಕ್ಕೂ ಸ್ಪಷ್ಟ ಉತ್ತರ ಸದ್ಯದಲ್ಲೇ ಸಿಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.