ಸವಣೂರು: ಅನಾಥವಾಗಿದೆ ಕೃಷಿ ಇಲಾಖೆ ಕಟ್ಟಡ
Team Udayavani, Oct 10, 2018, 11:19 AM IST
ಸವಣೂರು: ಸವಣೂರು ಮುಖ್ಯ ಪೇಟೆಯ ಸಮೀಪವೇ ಇರುವ ಕೃಷಿ ಇಲಾಖೆಯ ಕಟ್ಟಡವು ಯಾವುದೇ ಉಪಯೋಗವಿಲ್ಲದೆ ಅನಾಥವಾಗಿದೆ. ಈ ಕುರಿತು ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರವು ಹಲವು ಉದ್ದೇಶಗಳಿಗೆ ವಿವಿಧೆಡೆ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಬಳಿಕ ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಹಾಗೇ ಬಿಟ್ಟುಬಿಡುವ ಮೂಲಕ ಪಾಳು ಬೀಳುವಂತಾಗಿದೆ. ಸರ್ವೆ ನಂಬರ್ 161/1ಸಿ1(ಪಿ1) ಇದರಲ್ಲಿ 1.39 ಎಕ್ರೆ ಸರಕಾರಿ ಜಮೀನು ಇದ್ದು, ಅದರಲ್ಲೇ ಈ ಕಟ್ಟಡ ಇದೆ.
ಇಲಾಖೆ ಆಸಕ್ತಿ ವಹಿಸುತ್ತಿಲ್ಲ
ಇಲ್ಲಿನ ಕೃಷಿ ಇಲಾಖೆಯ 2 ಕಟ್ಟಡಗಳು ಉಪಯೋಗವಿಲ್ಲದೆ ಪಾಳು ಬಿದ್ದಿದ್ದು, ಉಪಯೋಗ ಶೂನ್ಯವಾಗಿವೆ.ಆದರೆ ಇಂತಹ ಕಟ್ಟಡಗಳನ್ನು ಸದುಪಯೋಗವಾಗುವಂತೆ ಮಾಡುವಲ್ಲಿ ಇಲಾಖೆ ಆಸಕ್ತಿ ವಹಿಸುತ್ತಿಲ್ಲ. ಈ ಕಟ್ಟಡ ಹುಳು ಹುಪ್ಪಟೆಗಳ ವಾಸಸ್ಥಾನವಾಗಿದೆ. ಕಟ್ಟಡದ ಸುತ್ತಲೂ ಪೊದೆಗಳು ಆವರಿಸಿ ಪಾಳು ಬಿದ್ದಂತಾಗಿದೆ.
ಖಾಸಗಿ ರಸ್ತೆ ನಿರ್ಮಾಣ
ಸರಕಾರಿ ಜಾಗದಲ್ಲಿರುವ ಈ 2 ಕಟ್ಟಡಗಳ ಮಧ್ಯೆ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿದ್ದಾರೆ. ಈ ಕುರಿತೂ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಮಾತು ಕೇಳಿಬಂದಿದೆ.
ಇಲ್ಲಿರುವ ಸರಕಾರಿ ಜಾಗದಲ್ಲಿ ಪಂಚಾಯತ್‌ನಿಂದ ರಾಜೀವ ಗಾಂಧಿ ಸೇವಾ ಕೇಂದ್ರ ನಿರ್ಮಾಣ ಕುರಿತು ಜಾಗವನ್ನು ಗ್ರಾ.ಪಂ. ಹೆಸರಿಗೆ ನೀಡುವಂತೆ ಕಂದಾಯ ಇಲಾಖೆಗೆ ಕೇಳಿಕೊಂಡರೂ ಈವರೆಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದು ಗ್ರಾಮ ಪಂಚಾಯತ್ ತಿಳಿಸಿದೆ.
ದಾಸ್ತಾನಿಗೆ ಅನ್ಯ ಸ್ಥಳ
ಕೃಷಿ ಇಲಾಖೆಯಿಂದ ಸಾರ್ವಜನಿಕರಿಗೆ ಕೃಷಿಕರಿಗೆ ವಿತರಿಸುವ ಸುಣ್ಣ, ಪೈಪು ಸಹಿತ ವಿವಿಧ ಪರಿಕರಗಳನ್ನು ಇತರ ಖಾಸಗಿ ಕಟ್ಟಡದಲ್ಲಿ ತಂದು ಇಡಲಾಗುತ್ತಿದೆ. ಆದರೆ ಇಲಾಖೆಯದ್ದೇ ಕಟ್ಟಡ ಇರುವಾಗ ಅದನ್ನು ದುರಸ್ತಿಗೊಳಿಸಿ ಅದರಲ್ಲೇ ದಾಸ್ತಾನು ಇರಿಸದೆ ಬೇರೆ ಕಟ್ಟಡದಲ್ಲಿ ಇರಿಸಲಾಗುತ್ತಿದೆ.
ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ
ಕಟ್ಟಡ ಮತ್ತು ಜಾಗವನ್ನು ಗ್ರಾ.ಪಂ.ಗೆ ಹಸ್ತಾಂತರಿಸಿದರೆ ದುರಸ್ತಿ ಮಾಡಿ ವಿವಿಧ ಉದ್ದೇಶಗಳಿಗೆ ಬಳಸಬಹುದು. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಗ್ರಾ.ಪಂ.ನಿಂದ ನಿರ್ಣಯ ಕೈಗೊಳ್ಳುತ್ತೇವೆ. ಕೃಷಿ ಇಲಾಖೆಯ ಕಟ್ಟಡದ ಮಧ್ಯೆ ಸರಕಾರಿ ಜಾಗದಲ್ಲಿ ಖಾಸಗಿಯವರು ರಸ್ತೆ ನಿರ್ಮಾಣ ಮಾಡಿದ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಈವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
– ಸತೀಶ್ ಬಲ್ಯಾಯ,
ಸವಣೂರು ಗ್ರಾ.ಪಂ. ಸದಸ್ಯರು
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.