ಮಾತಿನಲ್ಲೆ ಮೋಡಿ ಮಾಡಿ, ಹೊಸ ಬದುಕು ರೂಪಿಸಿಕೊಳ್ಳಿ
Team Udayavani, Oct 10, 2018, 4:04 PM IST
ಪ್ರಾಣೇಶ್, ಪ್ರೊ| ಕೃಷ್ಣೇಗೌಡ, ನರಸಿಂಹ ಮೂರ್ತಿ, ಸುಧಾ ಬರಗೂರು, ಇಂಧುಮತಿ, ರಿಚರ್ಡ್ ಲೂಯಿಸ್ ಹೀಗೆ ಸ್ಟ್ಯಾಂಡಿಂಗ್ ಕಾಮಿಡಿಯನ್ಸ್ ಗಳ ಮಾತು ಕೇಳಿ ಹೊಟ್ಟೆ ತುಂಬ ನಕ್ಕು ಮನಸ್ಸು ರಿಲಾಕ್ಸ್ ಮಾಡಿಕೊಳ್ಳುತ್ತೇವೆ. ಯಾವುದೋ ಸಂದರ್ಭದಲ್ಲಿ ಇವರ ಮಾತಿ ನಿಂದ ಪ್ರೇರಣೆ ಪಡೆದು ನಗೆ ಚಟಾಕಿ ಹಾರಿಸಿ ಎಲ್ಲರ ಮೆಚ್ಚುಗೆಯನ್ನೂ ಪಡೆದಿದ್ದೇವೆ. ಕಾಮಿಡಿ ಮಾಡುವ ಸಣ್ಣದೊಂದು ಆಸೆ ಮನದಲ್ಲಿದ್ದರೂ ಸಾಕು ಮಾತಿನ ಮೂಲಕ ಮೋಡಿ ಮಾಡಲು ಸಿದ್ಧರಾಗಬಹುದು.
ಹಾಸ್ಯ ಎನ್ನುವುದು ಒಂದು ವಿದ್ಯೆ ಅಥವಾ ಕಲೆ. ಇದನ್ನು ಎಲ್ಲರೂ ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಮುಖ್ಯವಾಗಿ ಬೇಕಿರು ವುದು ಆಸಕ್ತಿ ಅಥವಾ ಹವ್ಯಾಸ. ಹಾಗಿದ್ದರೆ ಮಾತ್ರ ಇಂತಹ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಬಹುದು.
ಹಾಸ್ಯ ನಾವು ಹುಟ್ಟಿಸುವುದಲ್ಲ. ಅದು ತನ್ನಿಂತಾನೆ ಬೆಳೆಸಿಕೊಳ್ಳಬೇಕು. ಏಕೆಂದರೆ ಒಮ್ಮೆ ವೇದಿಕೆ ಏರಿದ ಮೇಲೆ ಇಲ್ಲಿ ಪ್ರತಿಯೊಂದು ಮಾತುಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ನಿಷ್ಕಲ್ಮಶ ಮನಸ್ಸಿನಿಂದ ಪಕ್ಷ, ಜಾತಿ, ಧರ್ಮದಿಂದ ದೂರದಲ್ಲಿರುವುದೇ ಹಾಸ್ಯ. ಏಕೆಂದರೆ ಇಲ್ಲಿ ಎಲ್ಲವೂ ಇದರ ಪರಿಧಿಯೊಳಗೆ ಬರುವ ಕಾರಣ ಬೇಧ, ಭಾವ ಮಾಡುವ ಹಾಗಿಲ್ಲ.
ಅವಕಾಶಗಳು ಸಾವಿರಾರು
ಹಾಸ್ಯ ಎನ್ನುವುದು ಯಾವುದನ್ನೂ ಬಿಟ್ಟಿಲ್ಲ. ಆದ್ದರಿಂದ ಇದು ಎವರ್‌ಗ್ರೀನ್ ಎಂದೆನ್ನಬಹುದು. ಸ್ಟ್ಯಾಂಡಿಂಗ್ ಕಾಮಿಡಿಯನ್ ಆಗಿ ಕಾರ್ಯಕ್ರಮಗಳನ್ನು ನೀಡಬಹುದು. ಪ್ರತ್ಯೇಕ ಗುಂಪನ್ನು ರಚಿಸಿ ಸುತ್ತಾಡುತ್ತಾ ಕಾರ್ಯಕ್ರಮ ಕೊಡಬಹುದು. ಟಿ.ವಿ. ಮಾಧ್ಯಮದ ಮೂಲ ಕವೂ ಕಾಮಿಡಿ ಶೋ ನೀಡಬಹುದು. ರಿಯಾಲಿಟಿ ಶೋ, ಕಾಮಿಡಿ ಶೋಗಳಲ್ಲಿ ಭಾಗವಹಿಸಬಹುದು. ಇದು ಒಂದು ಸ್ವತಂತ್ರ ವಿದ್ಯೆ ಎನ್ನಬಹುದು. ಮಾತ್ರವಲ್ಲದೆ ಪಾರ್ಟ್ ಟೈಮ್, ಫುಲ್ ಟೈಮ್ ಆಗಿ ಇದರಲ್ಲಿ ತೊಡಗಿಸಿಕೊಳ್ಳಬಹುದು.
ಸ್ಟಾಂಡಿಂಗ್ ಕಾಮಿಡಿಯನ್ ಆಗಬೇಕಿದ್ದರೆ ಇದಕ್ಕಾಗಿ ಪ್ರತ್ಯೇಕ ತರಗತಿಗಳಿಲ್ಲ. ಇನ್ನೊಬ್ಬರ ಮಾತುಗಳನ್ನು ಕೇಳಿಕೊಂಡು, ಅದನ್ನು ತಮ್ಮದೇ ಆದ ಭಾಷೆಯಲ್ಲಿ ವೀಕ್ಷಕರಿಗೆ ತಲುಪಿಸಬಹುದು. ಕಾಮಿಡಿ ಶೋಗಳನ್ನು ಹೆಚ್ಚಾಗಿ ನೋಡುವುದು, ಕಾಮಿಕ್ಸ್ ಪುಸ್ತಕಗಳನ್ನು ಓದುವ ಮೂಲಕವೂ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬಹುದು.
ಹಾಸ್ಯಗಾರನಿಗೆ ಇವು ಅವಶ್ಯ
ಹಾಸ್ಯಗಾರನಿಗೆ ಮುಖ್ಯವಾಗಿ ಜ್ಞಾನ, ಭಾಷೆ, ಸಾಹಿತ್ಯ, ಸಂಗೀತ, ಪ್ರಚಲಿತ ವಿದ್ಯಮಾನ, ವಿಮರ್ಶೆ, ಗ್ರಹಿಕೆ, ಕ್ರಿಯಾಶೀಲತೆ, ಸೃಜನಶೀಲತೆ, ವರ್ಣನೆ, ಟೀಕೆ ಜತೆಗೆ ನವರಸಗಳನ್ನು ಅರಿತಿರಬೇಕು. ದೇಶ ಸುತ್ತಬೇಕು- ಕೋಶ ಓದಬೇಕು. ಜತೆಗೆ ವಾಕ್ ಚಾತುರ್ಯ ಹೊಂದಿರಬೇಕು. ಸರಳ ಮಾತುಗಳಿಂದ, ಹಾವ ಭಾವದಿಂದ ತಮ್ಮ ಬಾಡಿ ಲ್ಯಾಂಗ್ವೇಜ್ ಮುಖಾಂತರ ನೆರೆದವರ ಮನಸ್ಸು ಮುಟ್ಟುವಂತಿರಬೇಕು.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.