ಆಕಾಶದಿಂದ ಕೆಳಗಿಳಿದ ಚಾಕಲೇಟು ಡಬ್ಬ


Team Udayavani, Oct 11, 2018, 6:00 AM IST

q-4.jpg

ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ನಡುವಿನ ಯುದ್ಧದಲ್ಲಿ “ಚೋಶಿನ್‌ ರಿಸರ್‌ವಾಯರ್‌ ಸಮರ’ ಪ್ರಮುಖವಾದುದು. 1950ರಲ್ಲಿ ನಡೆದ ಈ ಯುದ್ಧದಲ್ಲಿ ಚೀನಾ ಮತ್ತು ಅಮೆರಿಕ ಕೂಡಾ ಧುಮುಕಿತ್ತು. ಸುಮಾರು 17 ದಿನಗಳ ಕಾಲ ಶೀತಲ ವಾತಾವರಣದಲ್ಲಿ ಭೀಕರ ಕಾಳಗ ನಡೆದಿದ್ದನ್ನು ಅನೇಕ ಹಿರಿಯ ಸೈನಿಕರು ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಮೆರಿಕ ಸೈನ್ಯದ ತುಕಡಿಯೊಂದು ಶತ್ರುಗಳ ಮೇಲೆ ಶೆಲ್‌ ಬಾಂಬ್‌ ಧಾಳಿಯಲ್ಲಿ ತೊಡಗಿತ್ತು. ನಿರ್ಣಾಯಕ ಹಂತದಲ್ಲಿ ಅವರ ಬಳಿ ಇದ್ದ ಶೆಲ್‌ಗ‌ಳ ದಾಸ್ತಾನು ಖಾಲಿಯಾಗತೊಡಗಿತ್ತು. ಕಮಾಂಡರ್‌ ರೇಡಿಯೊ ಆಪರೇಟರ್‌ನನ್ನು ಕರೆದು ಸೇನಾ ನೆಲೆಯನ್ನು ಸಂಪರ್ಕಿಸಿ ಆದಷ್ಟು ಬೇಗ ಶೆಲ್‌ಗ‌ಳನ್ನು ಸರಬರಾಜು ಮಾಡಲು ತಿಳಿಸೆಂದು ಆಜ್ಞಾಪಿಸಿದ. ಆಪರೇಟರ್‌ ಸೈನಿಕ ಅದರಂತೆಯೇ ಸೇನಾ ನೆಲೆಯನ್ನು ಸಂಪರ್ಕಿಸಿ “ಚಾಕಲೇಟ್‌ ಖಾಲಿಯಾಗಿದೆ. ಆದಷ್ಟು ಬೇಗನೆ ಸಪ್ಲೆ„ ಮಾಡಿ. ಗಿರಾಕಿಗಳು ಕಾದಿದ್ದಾರೆ’ ಎಂದ. ಅಸಲಿಗೆ ಯುದ್ಧಕಾಲದಲ್ಲಿ ಫೋನ್‌ ಕರೆಗಳನ್ನು ಕದ್ದಾಲಿಸುವುದು ಸಾಮಾನ್ಯವಾಗಿರುವುದರಿಂದ ಸಂಕೇತ ಭಾಷೆಗಳನ್ನು ಬಳಸುತ್ತಾರೆ. ಇದರಿಂದ ಶತ್ರುಗಳು ಕದ್ದಾಲಿಸಿದರೂ ಅವರಿಗೆ ಅದು ಅರ್ಥವಾಗುವುದಿಲ್ಲ. ಅಮೆರಿಕ ಸೇನೆಯಲ್ಲಿ  ಬಾಂಬ್‌ ಶೆಲ್‌ಗ‌ಳಿಗೆ ಕೋಡ್‌ ವರ್ಡ್‌ “ಚಾಕಲೇಟ್‌’ ಎಂಬುದಾಗಿತ್ತು. ಇತ್ತ ಶೆಲ್‌ಗ‌ಳು ಯಾವಾಗ ಬಂದಾವೆಂದು ಸೈನಿಕರು ಕಾದರು. ಅಷ್ಟರಲ್ಲಿ ವಿಮಾನವೊಂದು ಬಂದಿತು. ದೊಡ್ಡ ಡಬ್ಬವನ್ನು ಪ್ಯಾರಾಚೂಟ್‌ ಮುಖಾಂತರ ಸುರಕ್ಷಿತವಾಗಿ ಇಳಿಸಿ ಅದು ಹಾರಿ ಹೋಯಿತು. ಸೈನಿಕರು ಡಬ್ಬ ತೆರೆದು ನೋಡಿದರೆ ಅದರಲ್ಲಿ ಶೆಲ್‌ಗ‌ಳಿಗೆ ಬದಲಾಗಿ ನಿಜಕ್ಕೂ ಚಾಕಲೇಟ್‌ಗಳಿದ್ದುವಂತೆ. ತಲೆ ಕೆಡಿಸಿಕೊಳ್ಳುವ ಸರದಿ ಅಮೆರಿಕನ್‌ ಸೈನಿಕರದಾಯಿತು. “ಚಾಕಲೇಟ್‌’ ಕೋಡ್‌ ವರ್ಡನ್ನು ಬೇಧಿಸಲು ಸಾಧ್ಯವಾಗದೆ ಹತಾಶರಾದ ಶತ್ರು ಸೈನ್ಯದವರೇ ಈ ಕೃತ್ಯದ ಹಿಂದಿರುವರೆಂದು ಅಮೆರಿಕನ್ನರು ತಿಳಿದರು.

ಹವನ

ಟಾಪ್ ನ್ಯೂಸ್

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.