ಮಗುವಲ್ಲ ಇದು ಹೂವು!
Team Udayavani, Oct 11, 2018, 6:00 AM IST
ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸುತ್ತಿಟ್ಟಾಗ ಎಷ್ಟು ಮುದ್ದುದ್ದಾಗಿ ಕಾಣುತ್ತಲ್ವ? ಈ ಆರ್ಕಿಡ್ ಹೂವುಗಳೂ ಅಷ್ಟೇ ಮುದ್ದು. ಯಾಕಂದ್ರೆ, ಅರಳಿ ನಿಂತ ಈ ಹೂವುಗಳು ಥೇಟ್ ಬಟ್ಟೆಯಲ್ಲಿ ಸುತ್ತಿ ನಿದ್ದೆ ಮಾಡುತ್ತಿರುವ ಮಗುವಿನಂತೆಯೇ ಕಾಣುತ್ತವೆ…
“ಆಂಗೋಲಾ ಯೂನಿಫ್ಲೋರ’ ಎಂಬ ವೈಜ್ಞಾನಿಕ ಹೆಸರುಳ್ಳ ಹೂಗಳನ್ನು ಅರಳಿಸುವ ಆರ್ಕಿಡ್ ಸಸ್ಯಗಳು, ತಮ್ಮ ಹೂವುಗಳಿಂದಾಗಿಯೇ ಜಗತøಸಿದ್ಧವಾಗಿವೆ. ಯಾಕಂದ್ರೆ, ಈ ಹೂವುಗಳ ಆಕಾರ, ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿಟ್ಟಂತೆ ಕಾಣಿಸುತ್ತದೆ. “ದೋಣಿ ಆರ್ಕಿಡ್’ ಎಂದು ಕರೆಯಲ್ಪಡುವ ಈ ಸಸ್ಯ, ವೆನೆಜುವೇಲಾ, ಕೊಲಂಬಿಯಾ, ಈಕ್ವೆಟಾರ್, ಬೊಲಿಯಾ ಮತ್ತು ಪೆರುವಿನ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ.
ಹೆಸರು ಬಂದದ್ದು ಹೇಗೆ?
ಸಸ್ಯಶಾಸ್ತ್ರಜ್ಞರಾದ ಲೋಪೆಜ್ ಮತ್ತು ಆಂಟೋನಿಯೋ ಜಿಮೇನಜ್‌ರವರು 1777-1788ರವರೆಗೆ ಚಿಲಿ ಹಾಗೂ ಪೆರು ಪ್ರದೇಶಗಳಲ್ಲಿ ಅಧ್ಯಯನಕ್ಕಾಗಿ ಹೋಗಿದ್ದಾಗ, ಈ ಸಸ್ಯವನ್ನು ಮೊದಲ ಬಾರಿಗೆ ಗುರುತಿಸಿದರು. 1798ರವರೆಗೂ ಯಾವುದೇ ವರ್ಗೀಕರಣಕ್ಕೆ ಒಳಗಾಗದಿದ್ದ ಈ ಆರ್ಕಿಡ್ ಪ್ರಬೇಧಕ್ಕೆ, ಪೆರುವಿನ ಗಣಿ ವಿಭಾಗದ ಡೈರೆಕ್ಟರ್ ಜನರಲ್ ಆಗಿದ್ದ “ಫ್ರಾನ್ಸಿಸ್ಕೋ ಡಿ ಆಂಗುಲೋ’ ಗೌರವಾರ್ಥ ಅವರ ಹೆಸರನ್ನೇ ಇಡಲಾಯ್ತು.
ಒಂದು ಕೊಂಬೆಗೆ ಒಂದೇ ಹೂವು
ಈ ಸಸ್ಯದ ಬೆಳವಣಿಗೆಗೆ ಅತಿ ಉಷ್ಣಾಂಶದ ಅಗತ್ಯ ಇರುವುದಿಲ್ಲ. ಶೀತ ಹವೆಯಿದ್ದರೂ ಸಾಕು, ಹುಲುಸಾಗಿ ಬೆಳೆಯುತ್ತದೆ. ಸರಾಸರಿ 18-24 ಇಂಚುಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಈ ಸಸ್ಯ, ಒಂದು ಮೀಟರ್‌ಗೂ ಜಾಸ್ತಿ ಉದ್ದವಿರುವ ತೆಳುವಾದ ಎಲೆಗಳನ್ನು ಹೊಂದಿರುತ್ತದೆ. ಇದರ ಗೆಡ್ಡೆಯ ಮೇಲೆ ಮೂರರಿಂದ ನಾಲ್ಕು ಎಲೆಗಳು ಬೆಳೆಯುತ್ತವೆ. ಈ ಜಾತಿಯ ಆರ್ಕಿಡ್‌ನ ಹೂಗಳು ವಿಶೇಷವಾದ ಸಂಕೀರ್ಣತೆ ಹೊಂದಿದ್ದು, ದೊಡ್ಡಗಾತ್ರದಲ್ಲಿ ಇರುತ್ತವೆ. ಬಿಳಿ ಮತ್ತು ಹಳದಿ ಬಣ್ಣದ ಹೂಗಳು, ನೋಡಲು ಮಗುವಿನಂತೆ ಕಾಣುವುದಲ್ಲದೆ, ದಾಲಿcನ್ನಿಯಂತೆ ಸುವಾಸನೆ ಬೀರುತ್ತವೆ. ಮೇಣದಂತ ರಚನೆಯುಳ್ಳ ಈ ಹೂವುಗಳು ಚಳಿಗಾಲ ಮತ್ತು ಬೇಸಿಗೆಯಲ್ಲಿ ಅರಳುತ್ತಿರುತ್ತವೆ. ಒಂದು ಕೊಂಬೆಗೆ ಒಂದೇ ಹೂವು ಅರಳುವುದು ವಾಡಿಕೆ.
ಪ.ನಾ.ಹಳ್ಳಿ. ಹರೀಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.