ಇಂದು ಒಡಿಶಾಗೆ ಅಪ್ಪಳಿಸಲಿದೆ ತಿತ್ಲಿ
Team Udayavani, Oct 11, 2018, 6:00 AM IST
ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ತಿತ್ಲಿ ಚಂಡಮಾರುತವು ಬುಧವಾರ ತೀವ್ರತೆ ಪಡೆದಿದ್ದು, ಗುರುವಾರ ಬೆಳಗ್ಗೆ 5.30ರ ವೇಳೆಗೆ ಒಡಿಶಾ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು 5 ಕರಾವಳಿ ಜಿಲ್ಲೆಗಳ 3 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.
ಗಾಳಿಯ ವೇಗ ಗಂಟೆಗೆ 160 ಕಿ.ಮೀ. ಇರಲಿದ್ದು, ಭಾರೀ ಮಳೆ ಹಾಗೂ ಹಾನಿ ಉಂಟಾಗುವ ಭೀತಿಯಿರುವ ಕಾರಣ, ಕರಾವಳಿ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಕರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡ ಮಾರುತದ ಪ್ರಭಾವದಿಂದಾಗಿ ಆಂಧ್ರ ಕರಾವಳಿ ಯಲ್ಲೂ ಭಾರೀ ಮಳೆಯಾಗಲಿದ್ದು, ಅಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದೇ ವೇಳೆ, ತಿತ್ಲಿ ಭೀತಿಯಿಂದಾಗಿ ಒಡಿಶಾದ ಜನತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಪೆಟ್ರೋಲ್ ಪಂಪ್ಗ್ಳಲ್ಲೂ ಬುಧವಾರ ಸರತಿ ಸಾಲು ಕಂಡುಬಂದಿದೆ. ಇನ್ನೊಂದೆಡೆ, 3 ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಸೋಮವಾರದಿಂದ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಒಂದು ಸಾವಿರ ಎನ್ಡಿಆರ್ಎಫ್ ಸಿಬ್ಬಂದಿಯನ್ನು ಒಡಿಶಾ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಕಳುಹಿಸಿದೆ. ಜೊತೆಗೆ, ಆಹಾರ ಸಾಮಗ್ರಿ ಹಾಗೂ ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಈ ರಾಜ್ಯಗಳಿಗೆ ಸೂಚಿಸಿದೆ. ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಪೂರ್ವ ಕರಾವಳಿ ರೈಲ್ವೆಯು ಒಡಿಶಾದ ಖುರ್ದಾ ರೋಡ್ ಮತ್ತು ಆಂಧ್ರದ ವಿಜಯನಗರಂ ನಡುವೆ ಸಂಚರಿಸುವ 8 ರೈಲುಗಳನ್ನು ರದ್ದು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.