ಅವಕಾಶವಾದಿ ಮೈತ್ರಿಗೆ ಕರ್ನಾಟಕ ಸಾಕ್ಷಿ: ಮೋದಿ

Team Udayavani, Oct 11, 2018, 6:00 AM IST

q-22.jpg

ಮೈಸೂರು/ಹೊಸದಿಲ್ಲಿ: ವಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ರಚಿಸಲು ಉದ್ದೇಶಿಸಿದ್ದ ಮಹಾಮೈತ್ರಿಕೂಟ ಒಂದು ವಿಫ‌ಲ ಐಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು. ಪರಸ್ಪರ ಜಗಳವಾಡುವ ಪಕ್ಷಗಳು ಅಧಿಕಾರ ಸಿಗುತ್ತದೆ ಎಂದಾದರೆ ಒಂದಾಗುತ್ತವೆ. ಅದಕ್ಕೆ ಕರ್ನಾಟಕದಲ್ಲಿ ರಚನೆಯಾಗಿರುವ ಸರಕಾರವೇ ಸಾಕ್ಷಿ ಎಂದು ಹೇಳಿದರು. ಈ ಮೂಲಕ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ರಚನೆಯಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟವನ್ನು ಪರೋಕ್ಷವಾಗಿ ಟೀಕಿಸಿದರು. ಇಂಥ ಮೈತ್ರಿಯ ಯತ್ನಗಳು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಮಾಡಿಕೊಳ್ಳಲು ಪ್ರಯತ್ನಗಳು ಮುಂದು ವರಿದಿವೆ. ಅದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಜನರಿಗೆ ಅರಿವು ಮಾಡಿಕೊಡಬೇಕು ಎಂದು ಹೇಳಿದರು.

ಬುಧವಾರ ಮೋದಿ ಆ್ಯಪ್‌ ಮೂಲಕ ಮೈಸೂರು, ಆಗ್ರಾ, ದಾಮೋಹ್‌, ಕರೌಲಿ-ಧೋಲ್ಪುರ್‌, ರಾಯ್‌ಪುರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್‌ ವಿರುದ್ಧ ಟೀಕೆ ಗುಜರಾತ್‌ನಿಂದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳ ಕಾರ್ಮಿಕರನ್ನು ಬಡಿದು ಅಟ್ಟಲಾಗುತ್ತದೆ ಎಂಬ ಕಾಂಗ್ರೆಸ್‌ ಆರೋಪವನ್ನು ಪರೋಕ್ಷ ವಾಗಿ ಪ್ರಸ್ತಾವಿಸಿದ ಪ್ರಧಾನಿ ಮೋದಿ, ಬಿಜೆಪಿ ಎಲ್ಲರನ್ನೂ ಒಟ್ಟುಗೂಡಿಸಿ ಮುಂದುವರಿಯುವ ಬಗ್ಗೆ ಮಾತನಾಡುತ್ತಿದ್ದರೆ, ಕಾಂಗ್ರೆಸ್‌ ಸಮಾಜವನ್ನು ಒಡೆಯುವ ಮಾತುಗಳನ್ನಾಡುತ್ತಿದೆ. ಐದು ರಾಜ್ಯ ಗಳಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ. ಅದಕ್ಕೆ ಅನುಸಾರವಾಗಿ ಸಣ್ಣ-ಸಣ್ಣ ವಿಚಾರಗಳಿಗೆ ಸಂಬಂಧಿಸಿ ದಂತೆ ಕಾಂಗ್ರೆಸ್‌ ಜನರ ನಡುವೆ ಜಗಳ ತಂದಿಡಲಿದೆ ಎಂದು ಆರೋಪಿಸಿದರು.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಮೂರು ರಾಜ್ಯಗಳನ್ನು ರಚಿಸಿದರು. ಆದರೆ ಕಾಂಗ್ರೆಸ್‌ ಆಂಧ್ರ ಪ್ರದೇಶವನ್ನು ವಿಭಜಿಸಿ, ಒಂದೇ ಭಾಷೆ ಮಾತನಾಡುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಪರಸ್ಪರ ಕಚ್ಚಾಡುವಂತೆ ಮಾಡಿತು ಎಂದು ವಾಗ್ಧಾಳಿ ನಡೆಸಿದರು. 

ಸೋಲಿಸುವುದು ಹೆಗ್ಗಳಿಕೆ ಅಲ್ಲ
ಬಿಜೆಪಿ ಕಾರ್ಯಕರ್ತರು, ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿಯನ್ನು ಸೋಲಿಸಿದರೆ ಅದನ್ನು ಹೆಮ್ಮೆ ಎಂದು ಪರಿಗಣಿಸಬಾರದು. ಜನರ ಸೇವೆ ಮಾಡಲು ಸಿಕ್ಕಿದ ಅವಕಾಶ ಎಂದು ಪರಿಗಣಿಸಬೇಕು. ಪರಾಜಿತ ಅಭ್ಯರ್ಥಿಗಳನ್ನು ಹೀಯಾಳಿಸ ಬಾರದು ಎಂದು ಪಕ್ಷದ ನಾಯಕರು, ಕಾರ್ಯ ಕರ್ತರಿಗೆ ಪ್ರಧಾನಿ ಕಿವಿಮಾತು ಹೇಳಿದರು.

ಕಠಿನ ಪರಿಶ್ರಮ ಇರಲಿ
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್‌ಕುಮಾರ್‌ ಗೌಡ ಅವರ “ಮಾದರಿ ಕಾರ್ಯಕರ್ತನಾಗುವುದು ಹೇಗೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮನಸ್ಸಿನಲ್ಲೂ ತಾನೊಬ್ಬ ಆದರ್ಶ ಕಾರ್ಯ ಕರ್ತ ಆಗಬೇಕೆಂಬ ಬಯಕೆ ಇದ್ದರೂ ಇದ ಕ್ಕಾಗಿ ಸಾಕಷ್ಟು ಪರಿಶ್ರಮವಹಿಸಬೇಕಿದೆ. ಎಂದರು.

“ಅಂ.ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಒಳ್ಳೆಯ ಹೆಸರು ಬಂದಲ್ಲಿ ಜನಜೀವನ ಸುಧಾರಿಸುವುದೇ?’ ಎಂಬ ಎನ್‌.ಆರ್‌. ಕ್ಷೇತ್ರದ ಬ್ಲಾಕ್‌ ಅಧ್ಯಕ್ಷ ಮುರಳೀ ಧರ್‌ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಜನಜೀವನ ಸುಧಾರಿಸಿದರೆ ಅಂ.ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಬೆಲೆ ಸಿಗುತ್ತದೆ. ದೇಶದ ಬೆಲೆ ಹೆಚ್ಚಾದರೆ ಜನರಿಗೆ ಅನುಕೂಲವಾಗುತ್ತದೆ ಎಂದರು.

ಟಾಪ್ ನ್ಯೂಸ್

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.