“ನಾನೂ ಕಿರುಕುಳ ಅನುಭವಿಸಿದ್ದೆ’ ಮಿ ಟೂ ಚಳವಳಿಗೆ ಜ್ವಾಲಾ ಸಾಥ್
Team Udayavani, Oct 11, 2018, 6:00 AM IST
ಹೊಸದಿಲ್ಲಿ: ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕೂಡ ಸಾಮಾಜಿಕ ಜಾಲಾತಾಣದಲ್ಲಿ ತಾನು ಅನುಭವಿಸಿದ “ಮಾನಸಿಕ ಕಿರುಕುಳ’ದ ಬಗ್ಗೆ ಬರೆದುಕೊಂಡು ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ “ಮಿ ಟೂ’ ಚಳವಳಿಗೆ ಸಾಥ್ ನೀಡಿದ್ದಾರೆ.
“ನಾನು ಅನುಭವಿಸಿದ ಮಾನಸಿಕ ಕಿರುಕುಳದ ಬಗ್ಗೆ ಮಾತನಾಡುವ ಸಮಯ ಬಂದಿದೆ. 2006ರಲ್ಲಿ ಈ ವ್ಯಕ್ತಿ ಮುಖ್ಯಸ್ಥನಾದ ಬಳಿಕ ರಾಷ್ಟ್ರೀಯ ಚಾಂಪಿಯನ್ ಆಗಿದ್ದರೂ ನನ್ನನ್ನೂ ರಾಷ್ಟ್ರೀಯ ತಂಡದಿಂದ ಹೊರಗಿಟ್ಟರು. ರಿಯೋ ಒಲಿಂಪಿಕ್ಸ್‌ಗಾಗಿ ನಾನು ತಂಡಕ್ಕೆ ಮತ್ತೆ ಮರಳಿದೆ. ಪುನಃ ರಾಷ್ಟ್ರೀಯ ತಂಡದಿಂದ ಹೊರಗಿಡಲಾಯಿತು. ನಾನು ಬ್ಯಾಡ್ಮಿಂಟನ್‌ಗೆ ನಿವೃತ್ತಿ ಹೇಳಲು ಇದು ಕೂಡ ಒಂದು ಕಾರಣ’ ಎಂದು ಜ್ವಾಲಾ ಹೇಳಿದರು.
ಹೆತ್ತವರಿಗೂ ಬೆದರಿಕೆ, ಕಿರುಕುಳ!
“ನನ್ನ ಗಮನಾರ್ಹ ಪ್ರದರ್ಶನದ ಹೊರತಾಗಿಯೂ 2006ರಿಂದ 2016 ವರೆಗೆ ನಾನು ರಾಷ್ಟ್ರೀಯ ತಂಡದಲ್ಲಿ ಖಾಯಂ ಆಗಿ ಉಳಿಯಲಿಲ್ಲ. ಆಗಿಂದಾಗ್ಗೆ ರಾಷ್ಟ್ರೀಯ ತಂಡದಿಂದ ಹೊರಹಾಕುತ್ತಿದ್ದರು. 2009ರಲ್ಲಿ ನಾನು ರಾಷ್ಟ್ರೀಯ ತಂಡಕ್ಕೆ ಮರಳಿ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನ ಗಳಿಸಿದ್ದೆ. ನನ್ನಿಂದ ಆ ವ್ಯಕ್ತಿ ಏನೂ ದಕ್ಕದ ಸಂದರ್ಭದಲ್ಲಿ ಹೆತ್ತವರಿಗೆ ಬೆದರಿಕೆ ಹಾಗೂ ಕಿರುಕುಳ ನೀಡಿದ್ದ. ಎಲ್ಲ ರೀತಿ ಯಲ್ಲೂ ನನ್ನನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದ. ರಿಯೋ ಒಲಿಂಪಿಕ್ಸ್ ಬಳಿಕ ನನ್ನೊಂದಿಗೆ ಮಿಶ್ರ ತಂಡದಲ್ಲಿ ಆಡಬೇಕಾಗಿದ್ದ ಆಟಗಾರನಿಗೂ ಬೆದರಿಕೆಯೊಡ್ಡಿದ್ದ. ಇದಾದ ಬಳಿಕ ನನ್ನನ್ನು ತಂಡದಿಂದಲೇ ಹೊರಹಾಕಿದರು’ ಎಂದು ಜ್ವಾಲಾ ಗುಟ್ಟಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.