ಗರ್ಲ್ ಫ್ರೆಂಡ್ ಖರ್ಚಿಗಾಗಿ 10,000 ರೂ.ಕದ್ದ ಗೂಗಲ್ ಟೆಕ್ಕಿ arrest
Team Udayavani, Oct 11, 2018, 11:40 AM IST
ಹೊಸದಿಲ್ಲಿ: ತನ್ನ ಗರ್ಲ್ ಫ್ರೆಂಡ್ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ 10,000 ರೂ.ಗಳನ್ನು ಕದ್ದ ಆರೋಪದ ಮೇಲೆ ಗೂಗಲ್ ಉದ್ಯೋಗಿ, 24ರ ಹರೆಯದ ಇಂಜಿನಿಯರ್, ಗಾರ್ವಿತ್ ಸಾಹಿನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹರಿಯಾಣದ ಅಂಬಾಲಾ ಜಿಲ್ಲೆಯವನೆಂದು ತಿಳಿದುಬಂದಿದೆ.
ಕಳೆದ ಸೆ.11ರಂದು ಬಹು ರಾಷ್ಟ್ರೀಯ ಕಂಪೆನಿಗಳ ಹಿರಿಯ ಎಕ್ಸಿಕ್ಯುಟಿವ್‌ಗಳಿಗಾಗಿ ಇಲ್ಲಿನ ತಾಜ್ ಪ್ಯಾಲೇಸ್‌ನಲ್ಲಿ ಐಬಿಎಂ ಮತ್ತು ಮಾಧ್ಯಮ ಸಂಸ್ಥೆಗಳು ಜತೆಗೂಡಿ ಕಾನ್ಫರೆನ್ಸ್ ಏರ್ಪಡಿಸಿದ್ದವು. ಕಾನ್ಫರೆನ್ಸ್ ವೇಳೆ ದೇವಯಾನಿ ಜೈನ್ ಎಂಬಾಕೆ ತನ್ನ ಕೈಚೀಲದಿಂದ 10,000 ರೂ. ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಕೇಸು ದಾಖಲಿಸಿದ ಬಳಿಕ ಕಾನ್ಫರೆನ್ಸ್ ಹಾಲ್‌ನಲ್ಲಿದ್ದ ಸಿಸಿಟಿಸಿ ಕ್ಯಾಮೆರಾದ ಚಿತ್ರಿಕೆಯನ್ನು ಪರಿಶೀಲಿಸಿದರು. ಆಗ ಅವರಿಗೆ ಕೈಚೀಲದಿಂದ ವ್ಯಕ್ತಿಯೊಬ್ಬ ಹಣ ಕದಿಯುತ್ತಿರುವ ದೃಶ್ಯ ಕಂಡು ಬಂತು. ಕಾನ್ಫರೆನ್ಸ್ ಆಮಂತ್ರಿತರ ಪಟ್ಟಿಯನ್ನು ಪರಿಶೀಲಿಸಿದ ಪೊಲೀಸರಿಗೆ ಹಣ ಕದ್ದ ವ್ಯಕ್ತಿ ಯಾರೆಂಬುದು ಖಚಿತವಾಗಿ ಅವರು ಆರೋಪಿ ಗಾರ್ವಿತ್ ನನ್ನು ಅರೆಸ್ಟ್ ಮಾಡಿದರು.
“ನನಗೆ ತೀವ್ರ ಹಣದ ಅಡಚಣೆ ಇತ್ತು. ಗರ್ಲ್ ಫ್ರೆಂಡ್ ಖರ್ಚು ವೆಚ್ಚ ನಿಭಾಯಿಸಲು ತತ್‌ಕ್ಷಣಕ್ಕೆ ಹಣ ಬೇಕಾಗಿತ್ತು. ಹಾಗಾಗಿ ನಾನು ಹಣ ಕದ್ದೆ ” ಎಂದು ಗಾರ್ವಿತ್ ಪೊಲೀಸರಲ್ಲಿ ಒಪ್ಪಿಕೊಂಡ. ಪೊಲೀಸರು ಆತನ ವಶದಲ್ಲಿದ್ದ ಕದ್ದ ಹಣದ ಪೈಕಿ 3,000 ರೂ.ಗಳನ್ನು ವಶಪಡಿಸಿಕೊಂಡರು ಎಂದು ಪೊಲೀಸ್ ಡೆಪ್ಯುಟಿ ಕಮಿಷವನರ್ ಮಧುರ್ ವರ್ಮಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.