ನವರಾತ್ರಿಯಲ್ಲಿ ‘ಮಾರ್ನಮಿ ವೇಷ’ದ ಸೊಗಸು


Team Udayavani, Oct 11, 2018, 12:08 PM IST

11-october-8.gif

ಕಾಣಿಯೂರು: ನವರಾತ್ರಿ ಸಂದರ್ಭದಲ್ಲಿ ಎಲ್ಲ ಕಡೆಗಳಲ್ಲಿ ಮಾರ್ನಮಿ ವೇಷದ ಸೊಗಸು. ಬೀದಿ ಬೀದಿಯಲ್ಲೂ ಹುಲಿ ಕುಣಿತ, ಸಿಂಹ ಕುಣಿತ, ಕರಡಿ ಕುಣಿತ, ಯಕ್ಷಗಾನ ವೇಷಗಳು ಲಯಬದ್ಧವಾಗಿ ಸಾಗುತ್ತ ಎಲ್ಲೆಡೆ ರಂಗು ತುಂಬುತ್ತಿವೆ. ಮಹಾನವಮಿ ಎಂದರೆ ಥಟ್ಟನೆ ಹುಲಿ ವೇಷದ ನೆನಪು. ನವರಾತ್ರಿ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ತಾಸೆ (ತಮಟೆ) ಸದ್ದಿನ ಅನುರಣನ. ಥೇಟ್‌ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ.

ಹಬ್ಬದ ಸಡಗರ
ದಕ್ಷಿಣ ಕನ್ನಡದಲ್ಲಿ ನವರಾತ್ರಿಯ ಅಷ್ಟೂ ದಿನ ಮಾರ್ನಮಿ ವೇಷಗಳದ್ದೇ ಒಡ್ಡೋಲಗ. ತುಳುವಿನಲ್ಲಿ ಮಾರ್ನಮಿ ಅಂದರೆ ಮಹಾನವಮಿ ಅಂತರ್ಥ. ನವರಾತ್ರಿ ಕಾಲಿಡುತ್ತಿದ್ದಂತೆಯೇ ಊರು ಊರುಗಳಲ್ಲೂ ಸದ್ದು ಗದ್ದಲ. ಡೊಳ್ಳು ಬಡಿಯುವ ಸದ್ದು, ಮತ್ತೆಲ್ಲೋ ಬ್ಯಾಂಡ್‌ ಬಾಜಾ. ‘ಓ, ಮಾರ್ನೆಮಿ ವೇಷ ಬಂತು’ ಎಂದು ಜನರೆಲ್ಲ ಅತ್ತ ನೋಡುತ್ತಾರೆ. ಹಬ್ಬದ ಸಡಗರವನ್ನು ಮನ-ಮನೆಗೂ ತುಂಬಿಸುವ ವೇಷಗಳ ಆಗಮನವಾಗುವುದು ಹೀಗೆ.

ಹುಲಿ ಕುಣಿತದ ವರಸೆ
ಹುಲಿವೇಷ ನೋಡಲು ವಿಶಿಷ್ಟ. ತಾಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆಗಳು ಒಂದಕ್ಕಿಂತ ಒಂದು ಆಕರ್ಷಕ. ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಕಸರತ್ತುಗಳೇ ಹುಲಿವೇಷದ ಗತ್ತು. ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ, ಎಂಟು ಪೌಲ ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.

ಮರಿ ಹುಲಿ ಇದ್ದರೆ ಕಳೆ
ಹುಲಿವೇಷ ಧರಿಸಿದವರು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಪ್ರದರ್ಶನ ನೀಡುತ್ತಾರೆ. ಬಿಸಿಲೇರಿದರೆ ವಿಶ್ರಾಂತಿ. ಹುಲಿ ವೇಷಧಾರರಿಗೆ ಹೆಜ್ಜೆಗಾರಿಕೆಯ ಪರಿಚಯ ಇರಬೇಕಾಗುತ್ತದೆ. ಇಲ್ಲದಿದ್ದರೆ ಹುಲಿ ಕುಣಿತಕ್ಕೆ ಕಳೆ ಬರುವುದಿಲ್ಲ. ಹಲಗೆ ತಮಟೆಯ ವಾದ್ಯಗಳ ಗತ್ತಿಗೆ ತಕ್ಕಂತೆ ಹುಲಿ ವೇಷಧಾರಿ ಕುಣಿಯುತ್ತಾನೆ. ಮರಿ ಹುಲಿ ಜತೆಗಿದ್ದರೆ ಕುಣಿತಕ್ಕೆ ಹೆಚ್ಚಿನ ಕಳೆ ಬರುತ್ತದೆ. ಮೇಲಿಂದ ಮೇಲೆ ಗಿರಕಿ ಹೊಡೆಯುತ್ತಾ ಹುಲಿಯಂತೆ ನಟನೆ ಮಾಡುತ್ತಾ ಕೆಲವರ ಮೇಲೇರಿ ಹೋಗುವಂತೆ ಮಾಡಿ ಅಂಜಿಸುತ್ತ ಜನರನ್ನು ರಂಜಿಸುತ್ತಾರೆ. ವಾದ್ಯಗಳ ಬಡಿತದ ಜತೆಗೆ ಕುಣಿತವೂ ತೀವ್ರವಾಗುತ್ತದೆ. ಇವರು ಊರೂರು ಸುತ್ತಿ, ಮನೆ ಮನೆಗೆ ಹೋಗಿ ತಮ್ಮ ಕುಣಿತದಿಂದ ಜನರನ್ನು ರಂಜಿಸಿ ಸಂಭಾವನೆ ಪಡೆದುಕೊಳ್ಳುತ್ತಾರೆ.

ತಮಾಷೆಯ ಅಭಿನಯ
ಒಂದು ತಂಡದಲ್ಲಿ 3-4 ಹುಲಿಗಳಾದರೂ ಇರುತ್ತವೆ. ಹುಲಿಗಳನ್ನು ಬೇಟೆಯಾಡುವ ಒಬ್ಟಾತ ಕೋವಿ ಹಿಡಿದಿರುತ್ತಾನೆ. ಹುಲಿವೇಷ ತೊಟ್ಟವರು ತಾಸೆ (ಬಡಿಯುವ ವಾದ್ಯ), ಡೊಳ್ಳಿನ ಪೆಟ್ಟಿಗೆ ಲಯಬದ್ಧವಾಗಿ ಕುಣಿಯುವುದನ್ನು ನೋಡುವಾಗ ರೆಪ್ಪೆ ಬಡಿಯುವುದೂ ಮರೆತುಹೋಗುತ್ತದೆ. ಹುಲಿಯಂತೆಯೇ ಪಟ್ಟೆ ಪಟ್ಟೆ ಬಣ್ಣ ಬಳಿದುಕೊಂಡ ಈ ವೇಷಧಾರಿಗಳಿಗೆ ಹುಲಿಯ ದೇಹಭಾಷೆ, ಆಂಗಿಕ ಅಭಿನಯವೂ ಕರಗತ. ಕುಣಿಯುತ್ತ ನಡೆಯುತ್ತ ದಾರಿಯ ಪಕ್ಕ ನಿಂತ ಮಕ್ಕಳನ್ನೊಮ್ಮೆ ಬೆದರಿಸುವುದು, ಸಾಲುಗಟ್ಟಿರುವ ಸಾರ್ವಜನಿಕರ ಮೇಲೆ ಎರಗಿದಂತೆ ಮಾಡುವುದೂ ನಡೆಯುತ್ತದೆ. ಆಗಜನರ ಗುಂಪು ಒಮ್ಮೆ ‘ಹೋ’ ಎನ್ನುತ್ತದೆ. ಆದರೆ, ಇವೆಲ್ಲ ತಮಾಷೆಗಾಗಿ.

ಬಣ್ಣಗಾರಿಕೆಯೇ ಮುಖ್ಯ
ಹುಲಿವೇಷದಲ್ಲಿ ಬಣ್ಣಗಾರಿಕೆಗೆ ಮಹತ್ವ. ಮೈಗೆಲ್ಲ ಹಳದಿ, ಕಪ್ಪು ಬಣ್ಣದ ಪಟ್ಟೆಗಳನ್ನು ಅಥವಾ ಚುಕ್ಕೆಗಳನ್ನು ಬಳಿದುಕೊಂಡು, ಹುಲಿಯ ಮುಖವಾಡ ಧರಿಸಿರುತ್ತಾನೆ. ಕೆಲವರು ತಲೆಯ ಭಾಗಕ್ಕೆ ಹುಲಿಯ ಕಿವಿಯಾರವನ್ನು ಕಟ್ಟಿಕೊಂಡು ಉಳಿದೆಲ್ಲ ಭಾಗಕ್ಕೆ ಬಣ್ಣವನ್ನೇ ಹಚ್ಚಿಕೊಳ್ಳುತ್ತಾರೆ. ಕೈಗಳಿಗೆ ಹುಲಿ ಉಗುರನ್ನು ಹೋಲುವ ಮೊನಚಾದ ದೊಡ್ಡ ಉಗುರುಗಳನ್ನು ಧರಿಸುತ್ತಾರೆ. ಈ ಉಗುರಿಗೆ ಹಿಪ್ಪೆಕಾಯಿ ತೊಗಟೆಯನ್ನು ಬಳಸುವುದುಂಟು. ನಾರಿನಿಂದ ಮಾಡಿದ ಬಾಲವನ್ನು ಕಟ್ಟಿಕೊಂಡಿರುತ್ತಾರೆ. ಹುಲಿ ವೇಷದ ಸಿದ್ಧತೆಗೆ ಕನಿಷ್ಠ ಮೂರು ತಾಸುಬೇಕು ಎನ್ನುತ್ತಾರೆ ಕಲಾವಿದರು.

ನೋಡುವುದೇ ಚಂದ
ಹುಲಿವೇಷ ಧರಿಸಿದ ಕಲಾವಿದ ತಮಟೆಯ ಗತ್ತಿಗೆ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾನೆ. ಅವನ ಸೊಂಟಕ್ಕೆ ಪಟ್ಟಿಯೊಂದನ್ನು ಕಟ್ಟಿ, ಅದಕ್ಕೆ ಹಗ್ಗವನ್ನು ಸೇರಿಸಿ ಮೂವರು ಹಿಡಿದಿರುತ್ತಾರೆ. ಗೆಜ್ಜೆ ಕಟ್ಟಿದ ಉದ್ದವಾದ ಕೋಲನ್ನು ಹಿಡಿದುಕೊಳ್ಳಲು ವೇಷಧಾರಿ ಮುಂದೆ ಜಿಗಿಯುವಾಗ ಹಗ್ಗವನ್ನು ಹಿಡಿದಿರುವವರು ಅವನನ್ನು ಹಿಂದಕ್ಕೆ ಎಳೆಯುತ್ತಾರೆ. ಬಲವಾದ ಇಬ್ಬರು ಹೆಗಲ ಮೇಲೆ ಹೊತ್ತ ಉದ್ದವಾದ ಎರಡು ಬಿದಿರಿನ ಗಳಗಳ ಮೇಲೆ ಹುಲಿ ವೇಷಧಾರಿ ಕುಪ್ಪಳಿಸುತ್ತಾ ಕುಣಿಯುವುದು, ಲಾಗ ಹಾಕುವುದು ನೋಡುವುದೇ ಚಂದ.

ದೇವರ ಮುಂದೆ ಕುಣಿತ 
ಹುಲಿ ಕುಣಿತದಂತೆಯೇ ಕರಡಿ ವೇಷವೂ ಬರುತ್ತದೆ. ಇದರಲ್ಲಿಯೂ ಬೇಟೆಯಾಡುವವನು, ವಾದ್ಯದವರ ತಂಡ ಇರುತ್ತದೆ. ವೇಷಗಳ ಕುಣಿತ ಆರಂಭವಾಗುವುದು ದೇವಸ್ಥಾನದಿಂದ. ದೇವರ ಮುಂದೆ ಕುಣಿದ ಬಳಿಕ ಪೇಟೆ ಬೀದಿಗಳಿಗೆ, ಮನೆ ಮನೆಗಳಿಗೆ ತೆರಳುತ್ತಾರೆ. ಹತ್ತು ದಿನಗಳ ಕುಣಿತದ ಕೊನೆಯಲ್ಲಿ ವೇಷ ಕಳಚುವ ಮುನ್ನ ಕೊನೆಯ ಕುಣಿತವೂ ದೇವರ ಮುಂದೆಯೇ ನಡೆಯುತ್ತದೆ.ಕುಣಿತ ಮೆಚ್ಚಿ ಜನರು ಕೊಟ್ಟ ಹಣದಲ್ಲಿ ಸ್ವಲ್ಪ ಭಾಗವನ್ನು ದೇವರಿಗೆ ಕಾಣಿಕೆ ಹಾಕುತ್ತಾರೆ. ಈ ಕುಣಿತದ ಹಿಂದೆ ದೈವೀ ಸಮರ್ಪಣೆಯ ನಂಬಿಕೆಯೂ ಇರುವುದು ವಿಶೇಷ. 

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.