ಕೋಸ್ಟಲ್‌ನಿಂದ ಹಾಲಿವುಡ್‌ಗೆ!
Team Udayavani, Oct 11, 2018, 2:30 PM IST
ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ ಕಲಾವಿದರು ಹಲವರಿದ್ದಾರೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ… ಹೀಗೆ ಹೆಸರಿನ ಪಟ್ಟಿ ದೊಡ್ಡದಿದೆ. ಇದೇ ರೀತಿ ಮಾರ್ಷೆಲ್ ಆರ್ಟ್ ಮೂಲಕ ಹೆಸರು ಮಾಡಿ, ಖ್ಯಾತ ಸಿನೆಮಾ ನಿರ್ದೇಶಕ, ಮೂಲತಃ ಕಾರ್ಕಳ ನಿವಾಸಿ ಚೀತಾ ಯಜ್ಞೆಶ್ ಶೆಟ್ಟಿ ಅವರು ಕೂಡ ಬಾಲಿವುಡ್‌ನಲ್ಲಿ ಸಾಕಷ್ಟು ಸಿನೆಮಾ ಮಾಡಿ ಸುದ್ದಿಯಾಗಿದ್ದರು.
ವಿಶೇಷವೆಂದರೆ ಬಾಲಿವುಡ್‌ನಲ್ಲಿ ಖ್ಯಾತಿ ಪಡೆಯುವ ಕಾಲಕ್ಕೆ ಈಗ ಹಾಲಿವುಡ್‌ನ ಆಫರ್ ಅವರಿಗೆ ಬಂದಿದ್ದು, ಬರೋಬ್ಬರಿ 100 ಕೋಟಿ ರೂ. ಬಜೆಟ್‌ನಲ್ಲಿ ಸಿನೆಮಾ ರೆಡಿ ಮಾಡಲು ಸಿದ್ಧರಾಗಿದ್ದಾರೆ. ಅಂದಹಾಗೆ ಅವರ ನಿರ್ದೇಶನದ ಹಾಲಿವುಡ್‌ನ ‘ಹಿ ಈಸ್ ಬ್ಯಾಕ್’ ಸಿನೆಮಾ ಸೆಟ್ಟೇರಲಿದೆ. ಜನವರಿಯಲ್ಲಿ ಶೂಟಿಂಗ್ ಆರಂಭಿಸಲಿರುವ ಈ ಸಿನೆಮಾ ಮುಂದಿನ ವರ್ಷಾಂತ್ಯಕ್ಕೆ ಜಗತ್ತಿನಾದ್ಯಂತ ತೆರೆ ಕಾಣುವ ನಿರೀಕ್ಷೆಯಲ್ಲಿದೆ. ಹಾಲಿವುಡ್ ನ ಪ್ರಖ್ಯಾತ ನಟ ಬ್ರೂಸ್ಲಿ ಅವರ ಪ್ರೇರಣೆಯಿಂದ ಬದಲಾಗುವ ಯುವಕನೊಬ್ಬನ ಕಥೆಯಾಧಾರಿತವಾಗಿ ‘ಹಿ ಈಸ್ ಬ್ಯಾಕ್’ ಸಿನೆಮಾ ರೂಪುಗೊಳ್ಳಲಿದೆ. ಥೈಯ್ಲಾಂಡ್, ರಷ್ಯಾ, ಯುಎಸ್‌ಎಯಲ್ಲಿ ಈ ಸಿನೆಮಾ ಶೂಟಿಂಗ್ ಕಾಣಲಿದೆ.
ಅಪಘಾನಿಸ್ತಾನದ ಅಬ್ಟಾಸ್ ಆಲಿಝಾದಾ ಅವರು ಬ್ರೂಸ್ಲಿ ರೀತಿಯಲ್ಲಿ ಅಭಿನಯಿ ಸಲಿದ್ದಾರೆ. ಬಾಹುಬಲಿ ಸಿನೆಮಾದಲ್ಲಿ ತಾಂತ್ರಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕೆಲವರನ್ನು ಬಿಟ್ಟು ಉಳಿದಂತೆ ಚಿತ್ರತಂಡದಲ್ಲಿ ಪೂರ್ಣ ಹಾಲಿವುಡ್‌ನ ಟೀಮ್ ಇರಲಿದೆ. ಬ್ರೂಸ್ಲಿ ಅವರಿಂದ ಪ್ರೇರಣೆ ಪಡೆದ ಅಭಿಮಾನಿಯೊಬ್ಬ ಬ್ರೂಸ್ಲಿ ರೀತಿಯಲ್ಲಿ ಬದಲಾಗುವ ಕಥೆಯನ್ನು ಸಿನೆಮಾವಾಗಿ ಮಾಡಲಾಗುತ್ತಿದೆ. ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಸಿನೆಮಾ ಮಾಡಿರುವ ತನಗೆ ಹಾಲಿವುಡ್ ಸಿನೆಮಾ ಮಾಡಬೇಕು ಎಂಬ ತುಡಿತವಿದ್ದ ಹಿನ್ನೆಲೆಯಲ್ಲಿ ಹೊಸ ಅವಕಾಶ ದೊರೆತಿದೆ. ಹಾಲಿವುಡ್‌ನಲ್ಲಿ ಈಗಾಗಲೇ ಸಿನೆಮಾವು ಹೊಸ ನಿರೀಕ್ಷೆ ಮೂಡಿಸಿದ್ದು, ಚೀನಾ ಸೇರಿದಂತೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ಎನ್ನುತ್ತಾರೆ ಯಜ್ಞೆಶ್ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.