ಮಲೆನಾಡಿನಲ್ಲಿ ಕರಾವಳಿ ಮಕ್ಕಳ ದ್ರೌಪದಿ ಪ್ರತಾಪ
Team Udayavani, Oct 12, 2018, 6:00 AM IST
ಎಲ್ಲೂರು ಶ್ರೀ ಪಂಚಾಕ್ಷರಿ ಮಕ್ಕಳ ಯಕ್ಷಗಾನ ತಂಡ ಹಾಸನ ಜಿಲ್ಲೆಯ ಆಲೂರಿನಲ್ಲಿ ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಡಂದಲೆ ರಾಮ ರಾಯರು ವಿರಚಿಸಿದ “ದ್ರೌಪದಿ ಪ್ರತಾಪ’ ಪ್ರಸಂಗವನ್ನು ಮೆಚ್ಚುಗೆಗೆ ಪಾತ್ರರಾದರು. ಹಾಡುಗಾರಿಕೆಯಲ್ಲಿ ಸೀತಾರಾಮ ಭಟ್, ಚೆಂಡೆ ಮದ್ದಳೆಯಲ್ಲಿ ಆನಂದ ಗುಡಿಗಾರ್ ಮತ್ತು ಚಕ್ರತಾಳದಲ್ಲಿ ಉದಯ ಪಾಟ್ಕರ್ ಸಹಕರಿಸಿದ್ದರು.
ದ್ರೌಪದಿಯಾಗಿ ಧನ್ಯಾ ಎಲ್ಲೂರು ಮತ್ತು ಶ್ರೀಲಕ್ಷ್ಮೀ ಎಲ್ಲೂರು ನೃತ್ಯ, ಅಭಿನಯ, ಮಾತುಗಾರಿಕೆಯಿಂದ ಗಮನ ಸೆಳೆದರು. ಭೀಮ ಮತ್ತು ವೀರಭದ್ರನಾಗಿ ಶ್ರೀಕಾಂತ ಎಲ್ಲೂರು, ಅರ್ಜುನ ಮತ್ತು ಚಂಡಿಯಾಗಿ ಸುನೀಲ್ ಎಲ್ಲೂರು, ಸುಭದ್ರೆ ಮತ್ತು ಕಾಳಿಯಾಗಿ ಶ್ರೀವಾಣಿ ಎಲ್ಲೂರು, ಹನುಮಂತನಾಗಿ ಶ್ರೇಯಸ್ ನಿಂಜೂರು, ಶ್ರೀಕೃಷ್ಣನಾಗಿ ವಿನೀತ್ ಎಲ್ಲೂರು, ಬಲರಾಮನಾಗಿ ಪ್ರಾಣೇಶ್ ಎಲ್ಲೂರು ಉತ್ತಮ ಅಭಿನಯದಿಂದ ಪಾತ್ರಗಳಿಗೆ ನ್ಯಾಯ ದೊರಕಿಸಿದ್ದಾರೆ. ದಿಶಾ ಎಲ್ಲೂರು (ನಾರದ),ಶ್ರೀಲತಾ ಎಲ್ಲೂರು (ಸಾತ್ಯಕಿ ಮತ್ತು ಭೃಂಗಿ), ಶ್ರೀವಿದ್ಯಾ ಎಲ್ಲೂರು (ಸಾಂಬ), ಶ್ರೀರಕ್ಷಾ ನಿಂಜೂರು (ಪ್ರದ್ಯುಮ್ನ), ರಶ್ಮಿ ನಿಂಜೂರು (ಈಶ್ವರ), ಸುಕುಮಾರ ನಿಂಜೂರು (ಭೃಕುಟಿ), ಶ್ರೀಲಕ್ಷ್ಮೀ ನಿಂಜೂರು (ಪಾರ್ವತಿ), ಪ್ರದರ್ಶನದ ಯಶಸ್ಸಿಗೆ ಕಾರಣರಾಗಿದ್ದಾರೆ.
ಸಾಂತೂರು ಶ್ರೀನಿವಾಸ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.