ಬೆಂಗ್ಳೂರಲ್ಲಿ ಮಲ್ಯ ಆಸ್ತಿ ಜಪ್ತಿಗೆ ಆದೇಶ
Team Udayavani, Oct 12, 2018, 6:00 AM IST
ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಅವರಿಂದ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಫೆರಾ) ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೆಹಲಿಯ ಕೋರ್ಟೊಂದು ಸೂಚಿಸಿದೆ. ಬೆಂಗಳೂರಿನಲ್ಲಿ ಮಲ್ಯಗೆ ಸೇರಿದ 159 ಸ್ಥಿರಾಸ್ತಿ ಪತ್ತೆ ಮಾಡಲಾಗಿದೆ. ಅವುಗಳಲ್ಲಿ ಕೆಲವನ್ನು ಇ.ಡಿ.ಯ ಮುಂಬೈ ವಿಭಾಗ ಜಪ್ತಿ ಮಾಡಿದೆ. ಕೆಲವು ಹರಾಜಿಗೆ ಸಿದ್ಧವಾಗಿವೆ. ಹೀಗಾಗಿ ಗೊಂದಲ ಉಂಟಾಗಿತ್ತು. ಇದೀಗ ಕೋರ್ಟ್ ಎಲ್ಲಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ.
ಕೈಬಿಡುತ್ತಾ ಐಶಾರಾಮಿ ಬಂಗಲೆ?: ಸ್ವಿಜರ್ಲೆಂಡ್ನ ಯುಬಿಎಸ್ ಗ್ರೂಪ್ನಿಂದ ಸುಮಾರು 199 ಕೋಟಿ ರೂ. ಸಾಲ ಪಡೆದಿರುವ ವಿಜಯ್ ಮಲ್ಯರಿಂದ ಸಾಲ ಮರುಪಾವತಿ ಯಾಗದ ಹಿನ್ನೆಲೆಯಲ್ಲಿ ಲಂಡನ್ನ ಬೇಕರ್ ಸ್ಟ್ರೀಟ್ ಸ್ಟೇಷನ್ನಲ್ಲಿರುವ ಮಲ್ಯ ಅವರ ಬಂಗಲೆಯನ್ನು ವಶಕ್ಕೆ ತೆಗೆದುಕೊಳ್ಳಲು ಯುಬಿಎಸ್ ಗ್ರೂಪ್ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.