ವಿಗ್‌ ಧರಿಸಿ ಅಂದ ನೋಡಾ

Team Udayavani, Oct 12, 2018, 1:02 PM IST

12-october-11.gif

ಫ್ರೀ ಹೇರ್‌ ಬಿಡೋಣವೆಂದರೆ ಕೂದಲೇ ಇಲ್ಲ. ಇನ್ನು ನೀಳ ಜಡೆ ಹಾಕೋಣವೆಂದರೂ ಕೂದಲಿರುವುದು ಚೋಟುದ್ದ. ಈ ಗುಂಗುರು ಕೂದಲಿನಲ್ಲಿ ಹೇರ್‌ಸ್ಟೈಲ್‌ ಮಾಡೋಕು ಆಗಲ್ಲ ಅಂತ ಬಸವಳಿದು ಕುಳಿತುಕೊಳ್ಳುತ್ತಿದ್ದರು ಹೆಣ್ಮಕ್ಳು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಸೀನ್‌ ಬಂದೇ ಇಲ್ಲ ಅಂತ ಖುಷಿಯೂ ಆಗಿದ್ದಾರೆ.

ಹೌದು. ಎಷ್ಟೇ ಗಿಡ್ಡ ಕೂದಲಿದ್ದರೂ, ಎಷ್ಟೇ ಗುಂಗುರು ಇದ್ದರೂ, ಅದನ್ನು ನೀಳವಾಗಿ ಕಾಣುವಂತೆ ಮಾಡುವ ಕೌಶಲಗಳು ಫ್ಯಾಶನ್‌ ಲೋಕದಲ್ಲಿ ನೋಡಿಯಾಯಿತು. ಇದೀಗ ಈ ಸಾಲಿಗೆ ಕಲರ್‌ಫುಲ್‌ ವಿಗ್‌ಗಳ ಸೇರ್ಪಡೆಯಾಗಿದೆ.

ಒಂದು ಕಾಲದಲ್ಲಿ ಕೂದಲಿಲ್ಲದವರು ಮಾತ್ರ ಧರಿಸುತ್ತಿದ್ದ ಈ ವಿಗ್‌ಗಳು ಪ್ರಸ್ತುತ ನೀಳ ಕೂದಲಿನ ಹೆಸರಿನಲ್ಲಿ ವೈವಿಧ್ಯ ಸ್ಟೈಲ್‌ನಲ್ಲಿ ಹೆಣ್ಮಕ್ಳ ಮುಡಿಯೇರಿದೆ. ಫ್ರೀ  ಹೇರ್‌ ಸಾಧ್ಯವಾಗುತ್ತಿಲ್ಲ ಎಂದು ಕೊರಗುವ ಗುಂಗುರು ಕೂದಲಿನ ಹುಡುಗಿಗೆ ಕೂದಲನ್ನು ಕಟ್ಟದೆ ಫ್ರೀ ಹೇರ್‌ ಬಿಟ್ಟು ಓಡಾಡಲು ಈ ವಿಗ್‌ಗಳು ಸಹಕಾರಿಯಾಗಿವೆ. ಚಿಕ್ಕ ಕೂದಲಿನ ಹುಡುಗಿಗೆ ನೀಳವಾದ ವಿಗ್‌ ಗಳೂ ದೊರೆಯುತ್ತಿವೆ. ಇದರಿಂದ ಕೂದಲಿನ ಬಗ್ಗೆ ಇದ್ದ ವ್ಯಾಮೋಹ ಇನ್ನೂ ಜಾಸ್ತಿಯಾಗಿದೆ.

ಸೂಪರ್‌ ಲುಕ್‌ ಎಷ್ಟೆಂದರೆ ಈ ವಿಗ್‌ಗಳನ್ನು ಹಣೆಯ ಭಾಗದಿಂದಲೇ ಇಡೀ ತಲೆ ಕವರ್‌ ಆಗುವಂತೆ ಧರಿಸಲೂ ಸಾಧ್ಯವಿದೆ. ಅದರಲ್ಲಿ ಜೋಡಿಸಲಾಗಿರುವ ಕ್ಲಿಪ್‌ ಗಳು, ಧರಿಸಿರುವುದು ವಿಗ್‌ ಎನ್ನುವುದನ್ನೂ ಮರೆ ಮಾಚುತ್ತದೆ. ಇದರಿಂದ ಹೆಣ್ಣು ಮಕ್ಕಳಿಗೆ ವಿಗ್‌ ಧರಿಸಿರುವುದು ಗೊತ್ತಾಗುತ್ತದೆ ಎಂಬ ಗೊಂದಲವೂ ಇಲ್ಲದಾಗುತ್ತದೆ.

ಬೇಕಾದಾಗ ಬಳಸಿಕೊಳ್ಳಬಹುದು.
ಈ ಮಾದರಿಯ ವಿಗ್‌ನಲ್ಲಿ ಕ್ಲಿಪ್‌ ಅಳವಡಿಸಿರುವುದರಿಂದ ಬೇಕಾದಾಗಫ್ರೀ ಹೇರ್‌, ಬೇಡವಾದಾಗ ಕೂದಲನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಅಲ್ಲದೆ, ಹೋಗಬೇಕಾದಲ್ಲಿ ಹೋಗಿ ಬಂದ ಬಳಿಕ ವಿಗ್‌ನ್ನು ತೆಗೆದಿಟ್ಟರೆ, ಎಷ್ಟು ಸಾರಿ ಬೇಕಾದರೂ ಬಳಸಿಕೊಳ್ಳಬಹುದು. ಆದರೆ ಇದು ನೈಜ ತಲೆಗೂದಲು ಅಲ್ಲವಾದ್ದರಿಂದ ಸಿಕ್ಕು ಆಗುವುದು ಬೇಗ. ಅದಕ್ಕಾಗಿ ಆಗಾಗ ಸಿಕ್ಕು ಬಿಡಿಸಿ, ಸರಿಯಾಗಿ ಬಾಚಿ ಇಡಬೇಕು. ಸಿಕ್ಕು ಆಗಿದ್ದಾಗ ನೇರ ಬಾಚಣಿಗೆ ಮುಖಾಂತರ ಕೂದಲು ಬಾಚಿದರೆ ಕೂದಲು ತುಂಡಾಗುವ ಸಾಧ್ಯತೆ ಇರುತ್ತದೆ.

ಚಂದಕ್ಕಿಂತ ಚಂದ..
ನಿಸರ್ಗದತ್ತವಾಗಿ ಬಂದ ಕೂದಲಿಗಿಂತ ಈ ವಿಗ್‌ ಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಸಮಾರಂಭ, ಪಾರ್ಟಿ ಅಥವಾ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಲಿಕೆಯಾಗುವಂತಹ ನಾಲ್ಕೈದು ವಿಗ್‌ ಗಳನ್ನು ಖರೀದಿಸಿಟ್ಟುಕೊಂಡರೆ, ಆಕರ್ಷಕ ಸೌಂದರ್ಯವನ್ನು ಪಡೆದುಕೊಳ್ಳಬಹುದು. ಅಲ್ಲದೆ, ಇದರಲ್ಲಿ ವೈವಿಧ್ಯ ಸ್ಟೈಲ್‌ ಗಳಿರುವುದರಿಂದ ಇದೊಂದು ಸೌಂದರ್ಯ ವರ್ಧಕ ಸಾಧನವೆಂದೇ ಹೇಳಬಹುದು. 

ಕಲರ್‌ಫುಲ್‌ ವಿಗ್‌
ಈಗೀಗ ತಲೆಗೂದಲಿಗೆ ಕಲರ್‌ ಹಾಕುವುದೂ ಟ್ರೆಂಡ್‌ ಆಗಿದೆ. ಅದಕ್ಕೆ ತಕ್ಕಂತೆ ಕಲರ್‌ಫುಲ್‌ ವಿಗ್‌ ಗಳೂ ಮಾರುಕಟ್ಟೆಯಲ್ಲಿವೆ. ಕೂದಲಿನ ಕೆಳಭಾಗದಲ್ಲಿ ಕರ್ಲಿಯಾಗಿರುವ, ಇಡೀ ಕೂದಲು ನೀಳ ಮತ್ತು ನೇರವಾಗಿರುವ, ಫುಲ್‌ ಕರ್ಲಿಯಾಗಿರುವ, ವಿವಿಧ ರೀತಿಯ ಕಟ್‌ಗಳನ್ನು ಹೊಂದಿರುವ ಸೇರಿದಂತೆ ನಾನಾ ವೆರೈಟಿಯ ವಿಗ್‌ ಗಳು ಇಂದು ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಂಡಿವೆ. ಇದರ ಬೆಲೆ ಸುಮಾರು 500 ರೂ.ಗಳಿಂದ ಒಂದು ಸಾವಿರ ರೂ.ಗಳವರೆಗೂ ಇದೆ.

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.