‘ಉಚ್ಛ ನ್ಯಾಯಾಲಯ ತೀರ್ಪು ಮರುಪರಿಶೀಲಿಸಲಿ’
Team Udayavani, Oct 13, 2018, 12:01 PM IST
ವಿಟ್ಲ : ಧರ್ಮದ ಉಳಿವು ಆಗಬೇಕು. ನಂಬಿಕೆಗೆ ಧಕ್ಕೆಯಾಗಬಾರದು. ಭಕ್ತಿ, ಭಾವುಕತೆಗೆ ಏಟು ನೀಡುವಾಗ ಎದ್ದು ನಿಲ್ಲಬೇಕು. ಇದು ಶಾಂತಿಯುತ ಹೋರಾಟ. ಉಚ್ಚ ನ್ಯಾಯಾಲಯ ತೀರ್ಪು ಮರುಪರಿಶೀಲಿಸಿ, ಭಕ್ತರಿಗೆ ಒಳಿತು ಮಾಡಲಿ. ವಿಜಯದಶಮಿಗೆ ಒಳ್ಳೆಯ ಸುದ್ದಿ ಬರಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಶುಕ್ರವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶಬರಿಮಲೆ ಉಳಿಸಿ, ಪಾವಿತ್ರ್ಯ ರಕ್ಷಿಸಿ ಎಂಬ ಉದ್ದೇಶದಲ್ಲಿ ಏರ್ಪಡಿಸಿದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿ ಶ್ರೇಷ್ಠ
ಉಪ್ಪಳ ಕೊಂಡೆಯೂರು ಶ್ರೀ ಯೋಗಾನಂದ ಆಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಶಬರಿ ಮಲೆಗೆ ತೆರಳಲು ಪುರುಷರೂ ಮಂಡಲ ಪರ್ಯಂತ ವ್ರತಾಚರಣೆ ಮಾಡಬೇಕೆಂಬ ನಿಯಮವಿದೆ. ಮಹಿಳೆಯರು ತೆರಳಬಾರದೆಂದು ಎಲ್ಲೂ ಹೇಳಿಲ್ಲ. 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ತೆರಳುವುದು ಬೇಡವೆಂಬ ನಿಯಮವಿದೆ. ಸ್ತ್ರೀಯರಿಗೆ ಪುರುಷರಿಗಿಂತ ಹೆಚ್ಚು ಗೌರವ ನೀಡಿದ ಭಾರತೀಯ ಸಂಸ್ಕೃತಿ ಶ್ರೇಷ್ಠ ಎಂದರು.
ಪಾವಿತ್ರ್ಯ ಉಳಿಸಲು ಹೋರಾಟ
ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ, ದೇಗುಲಗಳ ಬ್ರಹ್ಮಕಲಶದ ಸಂದರ್ಭ ನಿರ್ಣಯ ಕೈಗೊಳ್ಳಲಾಗುತ್ತದೆ. ನಿಬಂಧನೆ, ನಿರ್ಣಯ, ಸಂಪ್ರದಾಯ, ಕಟ್ಟು ಕಟ್ಟಳೆ ಪಾಲನೆ ಮಾಡುವ ಜವಾಬ್ದಾರಿ ಇರುತ್ತದೆ. ಅದು ವ್ಯಕ್ತಿ ವಿರೋಧವಲ್ಲ. ಸೀಮೆ ಕಟ್ಟುಪಾಡುಗಳು, ಸಂಪ್ರದಾಯಗಳು ಉಳಿಯಬೇಕು. ಅಯ್ಯಪ್ಪ ದೇವರ ಸನ್ನಿಧಾನದ ಪಾವಿತ್ರ್ಯ ಉಳಿಸುವ ನಿಟ್ಟಿನಲ್ಲಿ ಹೋರಾಡಬೇಕು ಎಂದರು.
ನಂಬಿಕೆಗೆ ಅಡ್ಡಿ ಸರಿಯಲ್ಲ
ಕನ್ಯಾನ ಗ್ರಾಮದ ಬಾಳೆಕೋಡಿ ಶ್ರೀ ಕಾಶಿಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ, 48 ದಿನಗಳ ವ್ರತಾಚರಣೆ ಮಾಡಿ, ಅಯ್ಯಪ್ಪ ಸನ್ನಿ ಧಾನಕ್ಕೆ ತೆರಳಿದ ಭಕ್ತನಿಗೆ ಸನ್ಯಾಸವೆಂದರೇನೆಂದು ಅರ್ಥೈಸಲು ಸಾಧ್ಯವಾಗುತ್ತದೆ. ಅಯ್ಯಪ್ಪನ ಸನ್ನಿಧಾನಕ್ಕೆ ವರ್ಣಬೇಧ, ವರ್ಗ ಬೇಧಗಳಿಲ್ಲ. ನಂಬಿಕೆಗೆ ಅಡ್ಡಿ ಉಂಟುಮಾಡುವುದು ಸರಿಯಲ್ಲ ಎಂದರು.
ಹಿಂದೂ ಸಮಾಜ ಒಗ್ಗೂಡಲಿ
ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ಆಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸನಾತನ ಧರ್ಮದ ಮೇಲೆ ನಡೆಯುವ ಆಘಾತಕಾರಿ ವಿಷಯ ಬೇಸರ ತರಿಸುತ್ತದೆ. ಹಿಂದೂ ಸಮಾಜ ಒಗ್ಗೂಡಲಿ ಎಂದರು. ಕಾಸರಗೋಡಿನ ನ್ಯಾಯವಾದಿ ಶ್ರೀಕಾಂತ್ ಕಾಸರಗೋಡು, ಮಹಿಳಾ ಪ್ರಮುಖರಾದ ಹೇಮಲತಾ ಮಾತನಾಡಿದರು.
ಗೌರವ ಮಾರ್ಗದರ್ಶಕ, ವಿಟ್ಲ ಅಯ್ಯಪ್ಪ ದೇವಸ್ಥಾನದ ನಾರಾಯಣ ಯಾನೆ ಬಟ್ಟುಸ್ವಾಮಿ, ವಿಟ್ಲ ಶ್ರೀ ಭಗವತೀ ಭಕ್ತ ವೃಂದದ ಮೋನಪ್ಪ ಗುರುಸ್ವಾಮಿ, ಶಬರಿಮಲೆ ಪಾವಿತ್ರ್ಯ ಉಳಿಸಿ ವಿಟ್ಲ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಅರುಣ ಎಂ. ವಿಟ್ಲ, ಕಾರ್ಯಾಧ್ಯಕ್ಷ ಬಿ.ಕೆ. ರವಿ ದಲ್ಕಾಜೆ, ಪ್ರಧಾನ ಕಾರ್ಯದರ್ಶಿ ಶಿವಾನಂದ ರೈ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು. ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಪಟ್ಲ ಸ್ವಾಗತಿಸಿ, ರಮಾನಾಥ ವಿಟ್ಲ ಪ್ರಸ್ತಾವಿಸಿದರು. ಹರೀಶ್ ಕೆ. ನಿರೂಪಿಸಿದರು. ಕಾರ್ಯದರ್ಶಿ ಪ್ರವೀಣ್ ವಿಟ್ಲ ವಂದಿಸಿದರು.
ಮೆರವಣಿಗೆಗೆ ತಡೆ
ಹೋರಾಟ ಸಮಿತಿ ನೇತೃತ್ವದಲ್ಲಿ ವಿಟ್ಲ ಜೈನ ಬಸದಿಯಿಂದ ದೇಗುಲದ ವರೆಗೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ಪೊಲೀಸ್ ಇಲಾಖೆ ಮೆರವಣಿಗೆಗೆ ಅವಕಾಶವಿಲ್ಲ ಎಂದು ತಿಳಿಸಿತು. ವಾಗ್ವಾದಗಳು ನಡೆದು ಬಳಿಕ ಮೆರವಣಿಗೆ ಆರಂಭವಾಯಿತು. ಒಡಿಯೂರು ಶ್ರೀ ಆಶೀರ್ವಚನ ನೀಡಿ, ಮೆರವಣಿಗೆ ತಡೆಯುವ ಪ್ರಸಂಗವಿರಲಿಲ್ಲ. ಇದು ಶಾಂತಿಯ ಹೋರಾಟ. ಇಲ್ಲಿ ಸಂಘರ್ಷಗಳಿಲ್ಲ. ಮರು ಪರಿಶೀಲನೆಗಾಗಿ ನ್ಯಾಯಯುತ ಹೋರಾಟ ಅಷ್ಟೇ ಎಂದರು. ಇದನ್ನೇ ಇತರ ಸಂತವರೇಣ್ಯರು ಉಲ್ಲೇಖೀಸಿದರು.
ಸ್ತ್ರೀಯರಿಗೆ ಹೆಚ್ಚು ಸ್ಥಾನಮಾನ
ಈ ಮಣ್ಣಿನಲ್ಲಿ ಸ್ತ್ರೀಯರಿಗೆ ಪುರುಷರಿಗಿಂತ ಹೆಚ್ಚು ಸ್ಥಾನಮಾನ ನೀಡಲಾಗಿದೆ. ಮಹಿಳೆಯರ ಪ್ರವೇಶ ನಿಷೇಧಿಸುವ ಸಂಪ್ರದಾಯವಲ್ಲ. 10ರಿಂದ 50 ವರ್ಷದ ನಡುವಿನ ಮಹಿಳೆಯರು ತೆರಳಬಾರದೆಂಬ ನಿಯಮವಿದೆ. ಇಂದಿಗೂ ಅದೇ ಸಂಪ್ರದಾಯವನ್ನು ಉಳಿಸಿಕೊಂಡು ಬರಲಾಗಿದೆ ಮತ್ತು ಮಹಿಳೆಯರು ಇಂದಿಗೂ ಈ ನಿಯಮವನ್ನು ಮೀರಿ ಶಬರಿಮಲೆ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ.
– ಶ್ರೀ ಗುರುದೇವಾನಂದ ಸ್ವಾಮೀಜಿ
ಒಡಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.