ಮನೆಗೊಂದು ಹೊಸ ಅಲಂಕಾರ
Team Udayavani, Oct 13, 2018, 1:29 PM IST
ಮನೆಯನ್ನು ಸದಕಾಲ ಸುಂದರವಾಗಿ ಇಟ್ಟುಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಅಲಂಕಾರಿಕವಾಗಿ ಕೋಣೆಯನ್ನು ಇಟ್ಟುಕೊಳ್ಳುವುದೂ ಕೂಡ ಒಂದು ವಿಶೇಷತೆ ಅದು ನಿಮ್ಮ ವ್ಯಕ್ತಿತ್ವ ಹಾಗೂ ಕೌಶಲ್ಯವನ್ನು ತೋರ್ಪಡಿಸುತ್ತದೆ. ಅದು ಇನ್ನೊಬ್ಬರಿಗೆ ಕೌತುಕವಾಗಿ ಕಾಣುವಂತಿರಬೇಕು, ಅದಲ್ಲದೆ ನೀವು ವಿಶ್ರಾಂತಿ ಪಡೆಯಲು ಹಾಗೂ ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯಬೇಕು ಎಂದು ಕೊಂಡಿರುತ್ತಿರಿ ಅದಕ್ಕೆ ತಕ್ಕಂತೆ ನಿಮ್ಮ ಕೊಠಡಿ, ಮನೆಯನ್ನು ತಯಾರು ಮಾಡುವುದು ನಿಮ್ಮನ್ನು ಇನ್ನಷ್ಟು ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುವಂತೆ ಮಾಡುತ್ತದೆ.
ಕೋಣೆಗಳಿಗೆ ನೀಡಿ ಬಣ್ಣದ ಹೊಳಪು
ನಿಮ್ಮ ಕೋಣೆಗಳಿಗೆ ನೀಡುವ ಬಣ್ಣಗಳನ್ನು ನಿಮ್ಮ ಮೂಡ್ ಗಳನ್ನು ಬದಲಿಸುತ್ತದೆ ತಿಳಿ ಹಸಿರು ಅಥವಾ ಮಣ್ಣಿನ ರೀತಿಯ ಬಣ್ಣಗಳು ಈಗ ಟ್ರೇಂಡಿಯಾಗಿದ್ದು ಇವುಗಳು ನಿಮ್ಮನ್ನು ವಿಶ್ರಾಂತ ಸ್ಥಿತಿಯಲ್ಲಿ ಮನಸ್ಸು ನೆಮ್ಮದಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಕೆಲವು ಜೈವಿಕ ಬಣ್ಣಗಳು ಕೊಠಡಿಯ ಅಲಂಕಾರವನ್ನು ಹೆಚ್ಚಿಸುವುದಲ್ಲದೆ ಒತ್ತಡಗಳನ್ನು ಕಡಿಮೆ ಮಾಡುವ ಒಂದು ಸರಳ ವಿಧಾನವೂ ಆಗಿದೆ. ಗೋಡೆಗಳ ಮೇಲೆ ನಿಮಗೆ ಇಷ್ಟ ಬದಂತಹ ನೈಜ ಚಿತ್ರಗಳನ್ನು ಬಿಡಿಸುವುದು ಉದಾಹರಣೆಗೆ ಕೆಲವರಿಗೆ ಗೊಂಬೆಗಳೆಂದರೆ ಬಲು ಅಚ್ಚು ಮೆಚ್ಚು ಇನ್ನು ಕೆಲವರಿಗೆ ಗಿಡ, ಬಳ್ಳಿ ಇನ್ನು ಕೆಲವರಿಗೆ ಆಕರ್ಷಕ ಚಿತ್ತಾರೆ ಹೀಗೆ ಹತ್ತು ಹಲವು ಬಗೆಗಳಿಂದ ನಿಮ್ಮ ಕೊಠಡಿಯನ್ನು ಅಲಂಕರಿಸಿಕೊಳ್ಳಬಹುದು.
ಕೊಠಡಿಗೆ ನೀಡಿ ಪ್ರಕೃತಿ ಸುವಾಸನೆ
ನೀವು ನಿಮ್ಮ ಮಲಗುವ ಕೋಣೆಗಳಲ್ಲಿ ನಿಮ್ಮ ಹೆಚ್ಚಿನ ಸಮಯ ಕಳೆಯುತ್ತಿದ್ದೀರಿ ಎಂದರೆ ಅದನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಿ ಕೊಂಡರೆ ಅದು ನಿಮ್ಮ ಒತ್ತಡದ ಸಂದರ್ಭ ದಲ್ಲಿ ಅಧಿಕ ನೆಮ್ಮದಿ ನೀಡುತ್ತದೆ. ನೀವು ಬಹಳ ದಣಿದು ಕೆಲಸ ಮುಗಿಸಿ ಬರುವಾಗ ನಿಮ್ಮ ಕೋಣೆ ನಿಮ್ಮ ಮೂಡ್ ಬದಲಿಸುವಂತಿರಬೇಕು, ನಿಮ್ಮ ಆಯಾಸಗಳನ್ನು ಮರೆಸುವಂತಿರಬೇಕು ಆದ ಕಾರಣ ಕೊಠಡಿಯಿಂದ ಬರುವ ಪರಿಮಳ ನಿಮ್ಮ ಮನಸ್ಸನ್ನು ಆನಂದಗೊಳಿಸುತ್ತದೆ.
ಬಾಲ್ಕನಿಯನ್ನು ಸಸ್ಯಗಳೊಂದಿಗೆ ಅಲಂಕರಿಸಿ
ನೀವು ಹೆಚ್ಚು ಸಮಯ ಕಳೆಯುವ ಮತ್ತೊಂದು ಸ್ಥಳವೆಂದರೆ ಬಾಲ್ಕನಿ. ಬೆಳಿಗ್ಗೆ ಎದ್ದ ಕೂಡಲೇ ಅಥವಾ ಸಂಜೆ ಸಮಯಗಳಲ್ಲಿ ಕಾಫಿ ಕುಡಿಯುತ್ತಾ ಸಮಯ ಕಳೆಯುವವರು ಹಲವಾರು ಮಂದಿ ಅಲ್ಲಿ ಸಸ್ಯಗಳನ್ನು ಬೆಳೆಸುವುದರಿಂದ ನೋಡಲು ಸುಂದರವಾಗಿ ಕಾಣುವುದಲ್ಲದೆ ನೆಮ್ಮದಿಯ ವಾತಾವರಣವನ್ನು ನೀಡುತ್ತದೆ. ಅಥವಾ ವಾಲ್ಹಂಗ್‌ಗಳನ್ನು ಬಾಲ್ಕ ನಿಗಳಲ್ಲಿ ಲಗತ್ತಿಸಬಹುದು ಅಥವಾ ಸಸ್ಯಗಳ ಚಿತ್ರಗಳನ್ನು ಬಿಡಿಸಿಕೊಳ್ಳಬಹುದು ಇದು ನಿಮಗೆ ನೈಜ ಪ್ರಕೃತಿಯ ನೆಮ್ಮದಿ ನೀಡಿ ಒತ್ತಡಗಳನ್ನು ದೂರವಾಗಿಸುತ್ತದೆ.
ಉಳಿದ ಸ್ಪೇಸ್ ಗಳಿಗೆ ಹೊಸ ರೂಪ ನೀಡಿ
ನಿಮ್ಮ ಮನೆ ಅಥವಾ ನಿಮ್ಮ ಕೋಣೆಯಲ್ಲಿ ಬೇಡದ ಸ್ಪೇಸ್ ಗಳಿವೆ ಎಂದಾದರೆ ಅಂತಹ ಜಾಗಗಳಲ್ಲಿ ವಿಭಿನ್ನ ರೀತಿಯ ಸಾಮಾನುಗಳನ್ನು ಬಳಸುವುದು. ಉದಾಹರಣೆಗೆ ಬೀನ್ ಗಳನ್ನು ಬಳಸುವುದು, ಮಡಚಿಡಬಹುದಾದ ಪೀಠೊಪಕರಣಗಳನ್ನು ಹೆಚ್ಚು ಬಳಸುವುದು ಅಥವಾ ವಿಭಿನ್ನವಾಗಿ ರಚಿಸಿದ ವಸ್ತುಗಳು, ಗರಿಗಳು, ಮರಳಿನಿಂದ ಮಾಡಿದ ಉಪಕರಣಗಳು ಮುಂತಾದ ಸೂಕ್ಷ್ಮ ವಸ್ತುಗಳು ನಿಮ್ಮ ಕೋಣೆಯನ್ನು ವಿಭಿನ್ನ ರೀತಿಯಲ್ಲಿ ತೋರ್ಪಡಿಸುತ್ತದೆ.
ಪ್ರೀತಿ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.