ಅಪೂರ್ವ ಕನಸುಗಳ್
Team Udayavani, Oct 14, 2018, 6:00 AM IST
ನಟಿ ಅಪೂರ್ವ ಸಿಕ್ಕಾಪಟ್ಟೆ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ವಿಕ್ಟರಿ-2 ಚಿತ್ರ. ಹೌದು, ರವಿಚಂದ್ರನ್ ಅವರ ಅಪೂರ್ವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಈಗ ಸಿಕ್ಕಾಪಟ್ಟೆ ಬಿಝಿ. ಕೈ ತುಂಬಾ ಸಿನಿಮಾಗಳಿವೆ. ಸದ್ಯ ಅಪೂರ್ವ ನಾಲ್ಕು ಸಿನಿಮಾಗಳಲ್ಲಿ ಬಿಝಿ. ರವಿಚಂದ್ರನ್ ಅವರ ರಾಜೇಂದ್ರ ಪೊನ್ನಪ್ಪ, ಪೀಸ್ ಪೀಸ್, ಶರಣ್ ನಾಯಕರಾಗಿರುವ ವಿಕ್ಟರಿ-2 ಹಾಗೂ ಶಶಿಕುಮಾರ್ ಪುತ್ರ ಲಾಂಚ್ ಆಗುತ್ತಿರುವ ಸಿನಿಮಾ ಮೊಡವೆ ಚಿತ್ರಗಳಲ್ಲಿ ಅಪೂರ್ವ ಬಿಝಿ. ಇತ್ತೀಚೆಗೆ ವಿಕ್ಟರಿ-2 ಚಿತ್ರದ ಹಾಡಿನ ಚಿತ್ರೀಕರಣವನ್ನು ವಿದೇಶದಲ್ಲಿ ಮುಗಿಸಿಕೊಂಡು ಬಂದಿರುವ ಅಪೂರ್ವ ಖುಷಿಯಾಗಿದ್ದಾರೆ. ಅಂದು ರವಿಚಂದ್ರನ್ ಅವರು ಕೊಟ್ಟ ಸಲಹೆ ತನಗೆ ಸಹಾಯವಾಯಿತು ಎಂಬ ಖುಷಿ ಅವರದು. ಕೇವಲ ನಟನೆ ಬಂದರೆ ಸಾಲದು, ಡ್ಯಾನ್ಸ್ ಕೂಡಾ ಗೊತ್ತಿರಬೇಕೆಂದು ರವಿಚಂದ್ರನ್ ಹೇಳಿದ್ದರಂತೆ. ಹಾಗಾಗಿ, ಡ್ಯಾನ್ಸ್ ಕ್ಲಾಸ್‌ಗೆ ಹೋಗಿ ಡ್ಯಾನ್ಸ್ ಕಲಿತ ಅಪೂರ್ವಗೆ ಈಗ ಅದು ಸಹಾಯವಾಗಿದೆ. ವಿಕ್ಟರಿ-2 ಚಿತ್ರದಲ್ಲಿ ನಂದಿನಿ ಎನ್ನುವ ಪಾತ್ರ ಮಾಡಿದ್ದು, ವೃತ್ತಿಯಲ್ಲಿ ಡಾಕ್ಟರ್ ಆಗಿರುತ್ತಾರಂತೆ. ತನ್ನ ಜೀವನದಲ್ಲಿ ನಾಯಕ ಎಂಟ್ರಿಕೊಟ್ಟ ನಂತರ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ.
ಅಪೂರ್ವ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ನಟಿ ಆಪೂರ್ವ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದು ಹಂತಕ್ಕೆ, “ರವಿಚಂದ್ರನ್ ಅವರು ಲಾಂಚ್ ಮಾಡಿದ ಹುಡುಗಿ ಎಲ್ಲಿ ಹೋದಳು. ಅವಕಾಶ ಸಿಗುತ್ತಿಲ್ಲವೆ?’ ಎಂಬ ಮಾತುಗಳು ಕೇಳಿಬಂದುವು. ಅದಕ್ಕೆ ಸರಿಯಾಗಿ ಅಪೂರ್ವ ನಂತರ ಅಪೂರ್ವ ಕೂಡ ಮಾಧ್ಯಮ ಕಣ್ಣಿಗೆ ಬೀಳಲೇ ಇಲ್ಲ. ಹೊಸ ಸಿನಿಮಾದ ಸುದ್ದಿ ಕೂಡಾ ಕೇಳಿಬರಲಿಲ್ಲ. ಎಲ್ಲಾ ಓಕೆ, ಆ ಎರಡು ವರ್ಷದ ಕಥೆ ಏನು ಎಂದರೆ, ಕಾಲೇಜು ಎಂಬ ಉತ್ತರ ಬರುತ್ತದೆ ಅಪೂರ್ವರಿಂದ ಬರುತ್ತದೆ. “ನಾನು ಪಿಯುಸಿನಲ್ಲಿದ್ದಾಗ ನನಗೆ ಅಪೂರ್ವ ಸಿನಿಮಾದ ಆಫರ್ ಬಂತು. ಆ ಸಿನಿಮಾ ಮುಗಿದ ಬಳಿಕ ಮತ್ತೆ ನನ್ನ ಶಿಕ್ಷಣವನ್ನು ಮುಂದುವರೆಸಿದೆ. ಈ ಸಮಯದಲ್ಲಿ ಸಾಕಷ್ಟು ಅವಕಾಶಗಳು ಬಂದರೂ ತಾನು ಒಪ್ಪಲಿಲ್ಲ’ ಎನ್ನುವುದು ಅಪೂರ್ವ ಮಾತು. ಹಾಗಂತ ಅಪೂರ್ವಗೆ ಎರಡು ವರ್ಷ ಸಿನಿಮಾ ಒಪ್ಪಿಕೊಳ್ಳದ ಬಗ್ಗೆ ಯಾವುದೇ ಬೇಸರವಿಲ್ಲವಂತೆ. ಏಕೆಂದರೆ ಸಿನಿಮಾ ಜೊತೆಗೆ ಎಜುಕೇಶನ್ ಕೂಡಾ ಮುಖ್ಯವಾಗುತ್ತದೆ ಎಂಬುದು ಅಪೂರ್ವ ಮಾತು. ಸದ್ಯ ಡಿಗ್ರಿ ಮುಗಿಸಿರುವ ಅಪೂರ್ವಗೆ ಮುಂದೆ ಕನ್ನಡ ಚಿತ್ರರಂಗದಲ್ಲಿ ಬಿಝಿಯಾಗುವ ಆಸೆ ಇದೆ. ಒಳ್ಳೆಯ ಸಿನಿಮಾಗಳನ್ನು ಮಾಡಬೇಕೆಂದು ಅಪೂರ್ವ ಕನಸು ಕಾಣುತ್ತಿದ್ದಾರೆ. ಮೊಡವೆ ಚಿತ್ರದಲ್ಲಿ ಅಪೂರ್ವ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.