ಕೊಲ್ಕತಾದಲ್ಲಿ ದುರ್ಗಾಪೂಜೆ ಸಿಂಧೂರ್‌ ಖೇಲಾ


Team Udayavani, Oct 14, 2018, 6:00 AM IST

8.jpg

ನವರಾತ್ರಿಯ ಒಂಬತ್ತು ದಿನಗಳ ತನಕ ದೇಶದ ಎಲ್ಲಾ ಭಾಗಗಳಲ್ಲಿ ಶಕ್ತಿಸ್ವರೂಪಿಣಿ ದೇವಿಯನ್ನು ಬಹಳ ಭಕ್ತಿಯಿಂದ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. ಪ್ರತಿಯೊಂದು ರಾಜ್ಯದಲ್ಲಿಯೂ ದೇವಿಯ ಆರಾಧನೆಯೇ ಮುಖ್ಯವಾಗುವ ದಸರಾ ಹಬ್ಬದಾಚರಣೆಯ ವಿಭಿನ್ನ ಪದ್ಧತಿಗಳಿವೆ. ಬಹುಸಾಂಸ್ಕೃತಿಕ-ಬಹುಭಾಷಿಕ ನಗರವಾದ ಮುಂಬಯಿಯಲ್ಲಿಯಂತೂ ತಮಿಳರ ಮನೆಗಳಲ್ಲಿ ಗೊಂಬೆಗಳ ಅಲಂಕಾರದ ಕೋಲು, ಮರಾಠಿ ಜನರು ಸೋನಾ ಎಲೆಯನ್ನು ನೀಡಿ ಶುಭ ಹಾರೈಸುವ ದಶೇರಾ, ಬಂಗಾಲಿ ಜನರ ದುರ್ಗಾಪೂಜೆ, ಉತ್ತರ ಭಾರತೀಯರ ರಾಮಲೀಲಾ, ದಕ್ಷಿಣ ಭಾರತೀಯರ ಸರಸ್ವತಿ ಪೂಜೆ, ರಾತ್ರಿಯಾಯಿತೆಂದರೆ ಗುಜರಾತಿಗಳ ಗರ್ಭಾ ಎಲ್ಲವೂ ಕಾಣಸಿಗುತ್ತವೆ. ಮುಂಬಯಿಯ ಮುಂಬಾದೇವಿ, ಮಹಾಲಕ್ಷ್ಮೀ ಹಾಗೂ ಎಲ್ಲೆಂದರಲ್ಲಿ ತಲೆ ಎತ್ತಿರುವ ಅಂಬಾಬಾಯಿ ಮಂದಿರಗಳಲ್ಲಿ ಅಷ್ಟೂ ದಿನ ಜನರ ಕಿಕ್ಕಿರಿದ ಜನಸಂದಣಿ. ಮಹಿಳೆಯರಿಗಂತೂ ದಿನಕ್ಕೊಂದು ಬಣ್ಣಬಣ್ಣದ ಉಡುಪುಗಳನ್ನು ತೊಟ್ಟು ಸಂಭ್ರಮಿಸುವ ಹಬ್ಬ. ಪ್ರತಿದಿನ ಎಲ್ಲಿ ನೋಡಿದರಲ್ಲಿ ಒಂದೇ ಬಣ್ಣ ನಮ್ಮ ಕಣ್ಣು ಸೆಳೆಯುವ ಆನಂದವೇ ಬೇರೆ. ಎಲ್ಲರ ಮನೆಬಾಗಿಲು, ಯಂತ್ರ ಸಾಮಾಗ್ರಿಗಳು, ವಾಹನಗಳು ಗೊಂಡೆಹೂ ಹಾಗೂ ಮಾವಿನೆಲೆಗಳ ತೋರಣ ಧರಿಸಿ ಕಳಕಳಿಸುತ್ತವೆ. ಎಲ್ಲಕ್ಕಿಂತ ನಮ್ಮನ್ನು ಆಕರ್ಷಿಸುವುದು ವಿಶಿಷ್ಟವಾದ ಸಾಂಪ್ರದಾಯಿಕವಾದ ಬಂಗಾಲಿಗರ ದುರ್ಗಾಪೂಜೆ.

ಬಂಗಾಲದಲ್ಲಿ ನಾಡಹಬ್ಬ
ದುರ್ಗಾಪೂಜೆ ಎನ್ನುವುದು ಬಂಗಾಲದ ಪ್ರಮುಖ ಉತ್ಸವ. ನಮ್ಮಲ್ಲಿರುವಂತೆ ದುರ್ಗೆಯ ಒಂಬತ್ತು ರೂಪಗಳನ್ನು ಆರಾಧಿಸುವ ಪರಿಪಾಠ ಇಲ್ಲಿಲ್ಲ. ಮಹಿಷಾಸುರಮರ್ದಿನಿಯೇ ಅವರ ಪಾಲಿನ ದುರ್ಗಾ. ಬಹು ಉತ್ಸಾಹದಿಂದ ವೈವಿಧ್ಯಮಯವಾದ ತಯಾರಿಗಳಲ್ಲಿ ತೊಡಗಿಸಿಕೊಂಡಿದ್ದರೂ ಬಂಗಾಲಿ ಜನರ ದುರ್ಗಾಪೂಜೆಯು ಆರಂಭವಾಗುವುದೇ ಪಂಚಮಿಯಂದು. ಎಷ್ಟೊಂದು ಸಂಭ್ರಮ, ತಯಾರಿ, ಭವ್ಯತೆ, ವೈವಿಧ್ಯ. ಆದರೆ ಕೇವಲ ಐದುದಿನಗಳ ಆಚರಣೆ. ಕೊಲ್ಕತಾದ ಮನೆಮನೆಗಳ ಅಂಗಳದಲ್ಲಿ ಹಾಗೂ ರಸ್ತೆಯುದ್ದಕ್ಕೂ ಬಿಡಿಸಲಾಗುವ ಅಲಪೋನಾ (ರಂಗೋಲಿ), ಢಾಕ್‌ ಎಂಬ ಡೋಲಿನ ಬಡಿತದ ಮೈನವಿರೇಳಿಸುವ ನಾದ, ಅಲ್ಲಲ್ಲಿ ಎದ್ದುನಿಂತ ಕಲಾತ್ಮಕ ಪೆಂಡಾಲ್‌ಗ‌ಳು, ಅದರ ಸುತ್ತಮುತ್ತ ಸಾಲಾಗಿರುವ ಬಗೆಬಗೆಯ ತಿಂಡಿತಿನಸುಗಳ, ಸೀರೆಗಳ, ಆಭರಣಗಳ, ಮಕ್ಕಳಾಟಿಕೆಗಳ ಸ್ಟಾಲ್‌ಗ‌ಳು. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಗಡಿಬಿಡಿಯಲ್ಲಿ ಓಡಾಡುವ ಉತ್ಸಾಹಿ ಜನರು, ಚಿತ್ತಾಕರ್ಷಕವಾಗಿ ಅಲಂಕರಿಸಿಕೊಂಡು ಮನಸೆಳೆಯುವ ಬೆಡಗಿಯರು, ಸಂತಸದಿಂದ ಚಿಲಿಪಿಲಿಗುಟ್ಟುವ ಮಕ್ಕಳು. 

ಮಾರ್ಕಂಡೇಯ ಪುರಾಣದಲ್ಲಿರುವ ದೇವಿ ಮಹಾತ್ಮೆಯಲ್ಲಿ  ಬಂಗಾಲದ ಹಲವು ಪ್ರಾಂತಗಳ ಹಾಗೂ ಅಲ್ಲಿ ನಡೆಯುತ್ತಿದ್ದ ಪ್ರಾಣಿಬಲಿಗಳ ಉಲ್ಲೇಖವಿದೆ. ಈ ಪುರಾಣದ ಪ್ರಕಾರ ಬೊಲೀಪುರ ಅಥವಾ ಬೋಲಪುರದ ಸುರಥನೆಂಬ ರಾಜನು ಮೊತ್ತಮೊದಲು ದುರ್ಗಾಪೂಜೆಯನ್ನು ಆಚರಿಸಿದನು. ಪಾಂಡು ರಾಜರ್‌ ಧಿಬಿಯಲ್ಲಿ  ದೊರಕಿದ ಅತ್ಯಂತ ಪುರಾತಣ್ತೀ ಅವಶೇಷಗಳಲ್ಲಿ (ಕ್ರಿ.ಪೂ.1200-ಕ್ರಿ.ಪೂ.750) ಒಂದಾದ ಹದಿನೆಂಟು ಕೈಗಳ ಭದ್ರಕಾಳಿಯ ಮೂರ್ತಿಯನ್ನು ಕೊಲ್ಕತಾದ ವಸ್ತುಸಂಗ್ರಾಹಲಯ ದಲ್ಲಿ ಕಾಣಬಹುದು. ದುರ್ಗಾಪೂಜೆಯೆನ್ನುವುದು ಬಂಗಾಲಿಗರ ಮಟ್ಟಿಗೆ ಅನಾದಿಕಾಲದಿಂದಲೂ ನಡೆಯುತ್ತ ಬಂದಿರುವ ಬಹುಮುಖ್ಯ ಆರಾಧನೆಯ ಪ್ರಕಾರ; ಬದುಕಿನ ಅವಿಭಜಿತ ಸಂಗತಿ. 

ಮಹಿಷಾಸುರಮರ್ದಿನಿಯನ್ನು ಪೂಜಿಸುವ ಬಂಗಾಲದಲ್ಲಿ ಹಲವು ಶಕ್ತಿಪೀಠಗಳಿವೆ. ಅವುಗಳಲ್ಲಿ ಪ್ರಮುಖವಾದುದು ಕಾಲೀಘಾಟ.

ಪ್ರಾರಂಭದಲ್ಲಿ ರಾಜಮನೆತನಗಳು ಹಾಗೂ ಜಮೀನಾªರರು ದುರ್ಗಾಪೂಜೆಯನ್ನು (ಬನೆದಿ ಪೂಜೋ) ಬಹಳ ವೈಭವದಿಂದ ಆಚರಿಸುತ್ತಿದ್ದರು. ಕಾಲಾನಂತರ ವೈಯಕ್ತಿಕ ನೆಲೆಯಲ್ಲಿ (ಪಾರಿಬಾರಿಕ ಪೂಜೋ) ಹಾಗೂ ಸಾರ್ವಜನಿಕ ನೆಲೆಯಲ್ಲಿ (ಬಾರೊಯಾರಿ ಪೂಜೋ) ಮೂಲಕ ಸರ್ವೇಸಮಾನ್ಯರು ಕೂಡ ದುರ್ಗಾಪೂಜೆಯನ್ನು ಆಚರಿಸಲಾರಂಭಿಸಿದರು. 1790ರಲ್ಲಿ ಪಶ್ಚಿಮ ಬಂಗಾಲದ ಗುಪ್ತಿಪಾರದಲ್ಲಿ ಬಾರೊ (ಹನ್ನೆರಡು)ಯಾರಿ(ಗೆಳೆಯರು) ಒಟ್ಟಾಗಿ ಸ್ಥಳೀಯ ಜನರಿಂದ ಧನಸಂಗ್ರಹ ಮಾಡಿ ಪ್ರಪ್ರಥಮವಾಗಿ ಸಾರ್ವಜನಿಕ ದುರ್ಗಾಪೂಜೆಯನ್ನು ಆಚರಿಸಿದರು ಎನ್ನಲಾಗುತ್ತದೆ.  1910ರಲ್ಲಿ ಬಾಘಬಜಾರ್‌ನಲ್ಲಿ ಸನಾತನ ಧರ್ಮೋತ್ಸಾಹಿನಿ ಸಭಾವು ಮೊತ್ತಮೊದಲು ತಾತ್ಕಾಲಿಕ ಚಪ್ಪರ ಹಾಕಿಸಿ ಸಾರ್ವಜನಿಕವಾಗಿ ದುರ್ಗಾಪೂಜೆಯನ್ನು ಮಾಡಲಾರಂಭಿಸಿದರು. ಹತ್ತು ಕೈಗಳ ಆಯುಧಧಾರಿ ಮಹಿಷಾಸುರಮರ್ದಿನಿಯ ಮಣ್ಣಿನಿಂದ ಮಾಡಿದ ಭವ್ಯ ಮೂರ್ತಿಯು ಶೋಲಾ ಮರದಿಂದ ಮಾಡಿದ ಆಭರಣಗಳಿಂದ ಶೃಂಗರಿಸಲ್ಪಡುತ್ತದೆ. ಶ್ರೀಮಂತ ಮನೆತನಗಳಲ್ಲಿ ಬೆಳ್ಳಿಯ ಆಭರಣಗಳಿಂದ (ಡಾಕಾರ ಸಾಜ್‌) ದುರ್ಗಾಮಾತೆಯ ಮೂರ್ತಿಯನ್ನು ಶೃಂಗರಿಸುತ್ತಾರೆ. 

ಬಂಗಾಲಿಗಳ ಪ್ರಕಾರ ದುರ್ಗಾಮಾತೆಯು ತನ್ನ ತವರಿಗೆ (ತಂದೆ ಗಿರಿರಾಜ ಹಾಗೂ ತಾಯಿ ಮೆನೊಕಾ) ಒಬ್ಬಳೇ ಬರುವುದಿಲ್ಲ. ಆಕೆ ತನ್ನೊಂದಿಗೆ ಮಕ್ಕಳಾದ  ಲಕ್ಷ್ಮಿ- ಸರಸ್ವತಿ ಹಾಗೂ ಕಾರ್ತಿಕೇಯ- ಗಣೇಶರನ್ನೂ ಕರೆತರುತ್ತಾಳೆ. ಮಾತ್ರವಲ್ಲದೆ ಅವರ ಸಂರಕ್ಷಣೆಗಾಗಿ ಬಿಜೊಯ ಹಾಗೂ ಜಯ(ಜಯ-ವಿಜಯರು) ಬರುತ್ತಾರೆ. ದುರ್ಗೆಯೊಂದಿಗೆ ಇವರೆಲ್ಲರ ಪೂಜೆಯೂ ನೆರವೇರುತ್ತದೆ. ತವರಿಗೆ ಬಂದ ದುರ್ಗೆಗೆ ದಿನವೂ ಬಗೆಬಗೆಯ ಭೋಗ್‌ (ನೈವೇದ್ಯ) ಹಾಗೂ ಪ್ರಸಾದವನ್ನು ತಯಾರಿಸಿ ಉಣಬಡಿಸ ಲಾಗುತ್ತದೆ. ಕೇವಲ ನಾಲ್ಕುದಿನಗಳಿಗಾಗಿ ತವರಿಗೆ ಬರುವ ದುರ್ಗೆಯು ಐದನೆಯ ದಿನದಂದು ಅಂದರೆ ವಿಜಯದಶಮಿಯಂದು ತನ್ನ ಪತಿ ಶಿವನ ಮನೆಗೆ ಹಿಮಾಲಯಕ್ಕೆ ತೆರಳಲೇ ಬೇಕು. ಅವಳನ್ನು ಬೀಳ್ಕೊಡುವ ದಿನದಂದು ಸೌಭಾಗ್ಯದ ಪ್ರತೀಕ ವಾದ ತಮ್ಮ ಮಾಂಗಲ್ಯವನ್ನು ಹರಸೆಂದು ದುರ್ಗಾಮಾತೆಯನ್ನು ಪ್ರಾರ್ಥಿಸುವ ನಿಟ್ಟಿನಲ್ಲಿ ನೆರವೇರುವ ಹಾಗೂ ದುರ್ಗಾಪೂಜೆಗೆ ಕಳೆಗಟ್ಟುವ ಸಮಾರಂಭವೆ ಸಿಂಧೂರ್‌ ಖೇಲಾ. 

ಕುಂಕುಮದ ಆಟ
ಸಿಂಧೂರ ಖೇಲಾ ಅಂದರೆ ಕುಂಕುಮದ ಆಟ; ಮಾಂಗಲ್ಯದ ಕುರುಹಾದ ಕುಂಕುಮವನ್ನು ಆಟದಂತೆಯೇ ಪರಸ್ಪರ ಸೌಭಾಗ್ಯವತಿ ಮಹಿಳೆಯರ ಹಣೆಗೆ ಮೆತ್ತಿಕೊಳ್ಳುವ ಮೂಲಕ ಸುದೀರ್ಘ‌ ಹಾಗೂ ಸಮೃದ್ಧ ವೈವಾಹಿಕ ಜೀವನವನ್ನು ಹಾರೈಸಲಾಗುತ್ತದೆ. ಸುಮಾರು 400 ವರ್ಷಗಳ ಹಿಂದೆ ಜಮೀನುದಾರರ‌ ಮನೆಗಳಲ್ಲಿರುವ ಹೆಂಗಳೆಯರ ಮನೋರಂಜನೆಯ ಆಟವಾಗಿ ಆಚರಿಸಲ್ಪಡಲು ಪ್ರಾರಂಭವಾದ ಇದನ್ನು ಖೇಲಾವೆಂದೇ ಕರೆಯಲಾಗುತ್ತದೆ. ಸಿಂಧೂರ್‌ ಖೇಲಾವು ಇದೀಗ ದುರ್ಗಾಪೂಜಾಚರಣೆಯ ಬಹುಮುಖ್ಯ ಹಾಗೂ ಆಕರ್ಷಕ ಭಾಗವಾಗಿ ಬಿಟ್ಟಿದೆ. ಸಾಮಾನ್ಯ ಸ್ತ್ರೀಯರಿಂದ ಹಿಡಿದು ಸಿನೆಮಾ ತಾರೆಯರು ಕೂಡ ಸಿಂಧೂರ್‌ ಖೇಲಾದಲ್ಲಿ ಭಾಗವಹಿಸುವ ದೃಶ್ಯಗಳು ಪತ್ರಿಕೆಗಳಲ್ಲಿ ಜಾಲತಾಣಗಳಲ್ಲಿ ಸುದ್ಧಿಯಾಗುತ್ತ ಹೆಚ್ಚೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ. 

ನಾಲ್ಕು ದಿನಗಳ ಸವಿಸ್ತಾರವಾದ ಪೂಜೆ-ಪುನಸ್ಕಾರ, ವಿವಿಧ ನೈವೇದ್ಯಗಳ ನಂತರ ವಿಜಯದಶಮಿಯಂದು ಅಪರಾಜಿತೆಯನ್ನು ಬೀಳ್ಕೊಡುವ ತಯಾರಿ ನಡೆಯುತ್ತದೆ. ಮಹಾರತಿಯ ನಂತರ ಶೀತಲ ಭೋಗ್‌(ನೈವೇದ್ಯ) ನೀಡಲಾಗುತ್ತದೆ. ಅರ್ಚಕರು ನಡೆಸುವ ವಿಸರ್ಜನೆಯ ಪೂಜೆಯ ಮೂಲಕ ದುರ್ಗೆಯನ್ನು ಸಂತೃಪ್ತಳಾಗಿ ತನ್ನ ಪತಿ ಶಿವನ ಮನೆಗೆ ಹಿಂತಿರುಗುವಂತೆ ಪ್ರಾರ್ಥಿಸಲಾಗುತ್ತದೆ. ತರುವಾಯ ಪ್ರಶಾಂತಿ ವಂದನೆ. ಇದರಲ್ಲಿ ದುರ್ಗೆಯ ಪ್ರತಿಮೆಯ ಎದುರು ಕನ್ನಡಿಯೊಂದನ್ನು ಇರಿಸಲಾಗಿ ಎಲ್ಲ ಭಕ್ತರು ಕನ್ನಡಿಯಲ್ಲಿ ದುರ್ಗೆಯ ಪಾದದ ಪ್ರತಿಬಿಂಬದ ದರ್ಶನವನ್ನು ಪಡೆಯುತ್ತಾರೆ. ಆನಂತರ ದೇವಿ ಬೊರೊನ್‌- ವಿವಾಹಿತ ಮಹಿಳೆಯರೆಲ್ಲರೂ ಕೆಂಪಂಚಿನ ಬಿಳಿಯ ಸೀರೆಯುಟ್ಟು ಆಭರಣಗಳಿಂದ ಸಾಲಂಕೃತರಾಗಿ ಸರದಿಯ ಪ್ರಕಾರ ಬಂದು ದುರ್ಗೆಗೆ ಕೊನೆಯ ವಿದಾಯ ಕೋರುವ ಸಂಪ್ರದಾಯ. ಅವರ ಹರಿವಾಣದಲ್ಲಿ ವೀಳ್ಯದೆಲೆ, ಅಡಿಕೆ, ಕುಂಕುಮ, ಅಲ್ತಾ, ಧೂಪದ ಕಡ್ಡಿಗಳು ಹಾಗೂ ಸಂದೇಷ್‌ ಇರುತ್ತದೆ. ಪ್ರತಿಯೊಬ್ಬರೂ ಆರತಿ ಎತ್ತಿ ಎರಡೂ ಕೈಗಳಲ್ಲಿ ವೀಳ್ಯದೆಲೆಯ ಮೂಲಕ ದುರ್ಗೆಯ ಮುಖವನ್ನು ಒರೆಸಿ (ತವರುಮನೆಯನ್ನು ಬಿಟ್ಟು ಹೋಗುವ ಅವಳ ಕಂಗಳಲ್ಲಿ ಅಶ್ರುಗಳಿರಬಾರದೆನ್ನುವ ಕಾಳಜಿಯಿಂದ) ಆಕೆಯ ಪಾದಗಳಿಗೆ ಅಲ್ತಾ ಹಚ್ಚಿ, ಅವಳ ಹಣೆಗೆ ಹಾಗೂ ಬಳೆಗಳಿಗೆ (ಶಂಖ ಹಾಗೂ ಪೋಲಾ) ಕುಂಕುಮವನ್ನು ಹಚ್ಚಿ ಸಿಹಿ ತಿಂಡಿಯನ್ನು ಬಾಯಿಗಿತ್ತು, ವೀಳ್ಯವನ್ನು ನೀಡುತ್ತಾರೆ. ತರುವಾಯ ಪರಸ್ಪರ ಬಳೆಗಳಿಗೆ, ಹಣೆಗೆ, ಕೆನ್ನೆಗಳಿಗೆ ಸಿಂಧೂರ ಹಚ್ಚುತ್ತಾ ಸಿಹಿ ಹಂಚಿ ಪರಸ್ಪರರು ಸದಾ ಸೌಭಾಗ್ಯವತಿಯರಾಗಿ ಉಳಿಯುವಂತೆ ಹಾರೈಸುತ್ತಾರೆ.  ಸಿಂಧೂರ್‌ ಖೇಲಾದ ನಂತರ ವಿಜೃಂಭಣೆಯಿಂದ ಮೂರ್ತಿಯ ವಿಸರ್ಜನೆಯನ್ನು ಹೂಗ್ಲಿ ನದಿಯಲ್ಲಿ ಮಾಡಲಾಗುತ್ತದೆ. ಪರಸ್ಪರರನ್ನು ಆಲಂಗಿಸುತ್ತ ಶುಭೋ ಬಿಜೊಯೋ ಎಂದು ಹಾರೈಸುತ್ತಾ, ಕಿರಿಯರು ಹಿರಿಯರ ಪಾದಸ್ಪರ್ಷದಿಂದ ಆಶೀರ್ವಾದಗಳನ್ನು ಪಡೆಯುವ ಮೂಲಕ ದುರ್ಗಾಪೂಜೆಯು ಮುಕ್ತಾಯವಾಗುತ್ತದೆ. 

ಹಲವು ಶತಮಾನಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಈ ಸಿಂಧೂರ್‌ ಖೇಲಾವು ಕೇವಲ ಸೌಭಾಗ್ಯವತಿ ಮಹಿಳೆಯರಿಗಷ್ಟೆ ಸೀಮಿತವಾಗಿತ್ತು. ಈ ಪದ್ಧತಿಯನ್ನು ಬದಲಿಸುವ ನಿಟ್ಟಿನಲ್ಲಿ ಕಲಕತ್ತಾ ಟೈಮ್ಸ್‌ (ಟೈಮ್ಸ್‌ ಆಫ್ ಇಂಡಿಯಾ ಗ್ರೂಪ್‌) ಇವರು 2017ರಲ್ಲಿ ಸಿಂಧೂರ ಖೇಲಾ-No Conditions Apply ಎನ್ನುವ ವಿಡಿಯೋವನ್ನು ಪ್ರಕಟಿಸಿದರು. ಬಂಗಾಲಿಯ ಸುಪ್ರಸಿದ್ಧ ಮಹಿಳೆಯರಾದ ರಿತುಪರ್ಣ ಸೇನ್‌ಗುಪ್ತ, ಸೊಹಿನಿ ಸೇನ್‌ಗುಪ್ತ, ಗಾರ್ಗಿ ರೊಯ್‌ ಚೌಧರಿ ಹಾಗೂ ಮಾನೊಬಿ ಬಂಡೊಪಾಧ್ಯಾಯ (ಭಾರತದ ಪ್ರಪ್ರಥಮ ತ್ರತೀಯಲಿಂಗಿ ಪಿ. ಎಚ್‌ಡಿ ಪಡೆದ ಪೊ›ಫೆಸರ್‌) ಇವರ ಹಣೆಯ ಮೇಲೆ ಸಿಂಧೂರಿನ ಎರಡು ಬೊಟ್ಟು ಇದ್ದ ಚಿತ್ರವು ವೀಕ್ಷಕರ ಮೇಲೆ ಪರಿಣಾಮ ಬೀರಿತು. ಸಿಂಧೂರ್‌ ಖೇಲಾ ಕೇವಲ ವಿವಾಹಿತ ಮಹಿಳೆರಿಗಾಗಿ ಮಾತ್ರ ಸೀಮಿತವಲ್ಲ ಎನ್ನುವುದನ್ನು ಒತ್ತಿಹೇಳಲಾಯಿತು. ವಿವಾಹಿತ, ಅವಿವಾಹಿತ, ವಿಧವೆ, ವಿವಾಹವಿಚ್ಛೇದಿತೆ, ಅವಿವಾಹಿತ ತಾಯಿ, ಸಲಿಂಗಕಾಮಿ, ವೇಶ್ಯೆಯರು, ತೃತೀಯ ಲಿಂಗಿ ಇತ್ಯಾದಿ ತನ್ನ ಹೆಣ್ಣು ಸಂತಾನದ ನಡುವೆ ಸ್ವತಃ ದುರ್ಗಾಮಾತೆಯೇ ಭೇದಭಾವ ಮಾಡದಿರುವಾಗ ನಾವು ಮಾಡುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನು ಎಚ್ಚರಿಸಿತು. ಕುಂಕುಮದ ಎರಡು ಚುಕ್ಕಿಗಳನ್ನು ಹಣೆಯ ಮೇಲೆ ಧರಿಸಿ ಸೆಲ್ಫಿà ಕಳಿಸುವ ಮೂಲಕ ಸರ್ವ ಸ್ತ್ರೀಯರನ್ನೂ ಆಹ್ವಾನಿಸಿ ಎಲ್ಲ ರನ್ನೂ ಒಳಗೊಂಡ ಅಭೂತಪೂರ್ವ ಸಿಂಧೂರ ಖೇಲಾವನ್ನು ಆಚರಿಸಲಾಯಿತು. ಸ್ತ್ರೀಸಮುದಾಯವನ್ನು ಪ್ರತ್ಯೇಕಿಸುವ ಯಾಜಮಾನ್ಯ ಸಂಸ್ಕೃತಿಯಿಂದ ರೂಪಿತಗೊಂಡ ಆಚರಣೆಯನ್ನು ತ್ಯಜಿಸಲಾಯಿತು. ಪರಿಸ್ಥಿತಿಗೆ  ತಲೆಬಾಗಿ ಧಾರ್ಮಿಕ ಆಚರಣೆಯಿಂದ ತಮ್ಮಿಚ್ಛೆಯ ವಿರುದ್ಧ ಹೊರಗೆ ದಬ್ಬಲ್ಪಟ್ಟ ಮಹಿಳೆಯರನ್ನು ನಿಷರತ್ತು ಸೇರ್ಪಡೆಗೊಳಿಸುವ ಮೂಲಕ ನೂತನ ಸೋದರೀತನದ ಭಾವವನ್ನು ಅಪ್ಪಿಕೊಳ್ಳಲಾಯಿತು. ಲಿಂಗ ಸಮಾನತೆಯ ಕುರಿತು ನಾವು ದನಿಯೇರಿಸುತ್ತಿರುವಾಗ ಸಲಿಂಗಿಗಳ ನಡುವಿನ ಸಮಾನತೆಯೂ ಅಷ್ಟೆ ಮುಖ್ಯ ಎನ್ನುವುದನ್ನು ಮನಗಾಣಿಸಲಾಯಿತು.

ಮಮತಾ ರಾವ್‌

ಟಾಪ್ ನ್ಯೂಸ್

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.