ಕೆಂಪೇಗೌಡ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಿ


Team Udayavani, Oct 14, 2018, 12:36 PM IST

kempegowda.jpg

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಮಾನದಂಡಗಳಿಲ್ಲದೆ 550ಕ್ಕೂ ಹೆಚ್ಚು ಪುರಸ್ಕೃತರನ್ನು ಆಯ್ಕೆ ಮಾಡಿದ ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ಟೀಕೆಗಳನ್ನು ಗಂಭಿರವಾಗಿ ಪರಿಗಣಿಸಿರುವ ಪಾಲಿಕೆಯ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಮುಂದಿನ ವರ್ಷ ಕೆಂಪೇಗೌಡ ಪ್ರಶಸ್ತಿ ನೀಡುವ ವೇಳೆ ಸಾಧಕರನ್ನು ಗುರುತಿಸಲು ಮಾನದಂಡ ಹಾಗೂ ಸಮಿತಿಯನ್ನು ರಚಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೆಂಪೇಗೌಡ ಪ್ರಶಸ್ತಿಗೆ ಮೊದಲು 275 ಮಂದಿಯನ್ನು ಗುರುತಿಸಲಾಗಿತ್ತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭದ ದಿನವೇ ಪುರಸ್ಕೃತರ ಪಟ್ಟಿಗೆ 200ಕ್ಕೂ ಹೆಚ್ಚು ಹೆಸರು ಸೇರ್ಪಡೆಗೊಂಡ ಪರಿಣಾಮ ಪ್ರಶಸ್ತಿ ಪಡೆಯಲು ನೂಕು-ನುಗ್ಗಲು ಉಂಟಾಗಿ, ಪುರಸ್ಕೃತರು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗಿತ್ತು.

ಪತ್ರದ ಸಾರಾಂಶ ಹೀಗಿದೆ: ಪಾಲಿಕೆಯಿಂದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪುರಸ್ಕೃತರ ಸಂಖ್ಯೆ ಮಿತಿ ಇಲ್ಲದಂತಾಗಿದ್ದು, ಪಾಲಿಕೆ ಹಾಗೂ ಪ್ರಶಸ್ತಿಯ ಗೌರವಕ್ಕೆ ಕಳಂಕ ಬಂದಿದೆ. ಹೀಗಾಗಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಮಾನದಂಡ ಹಾಗೂ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿ ರಚಿಸುವಂತೆ ಶಿವರಾಜು ಕೋರಿದ್ದಾರೆ.

ಕೆಂಪೇಗೌಡ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಮಾರ್ಗಸೂಚಿ ಮತ್ತು ತಜ್ಞರ ಸಮಿತಿ ರಚಿಸುವ  ಮನವಿಗೆ ಡಿಸಿಎಂ ಸಹಮತ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು 100ಕ್ಕೆ ಸೀಮಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.
-ಎಂ.ಶಿವರಾಜು, ಪಾಲಿಕೆ ಆಡಳಿತ ಪಕ್ಷ ನಾಯಕ

ಪ್ರಶಸ್ತಿ ಮೊತ್ತಕ್ಕಾಗಿ ಪುರಸ್ಕೃತರ ದುಂಬಾಲು: ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ಮರುದಿನದಿಂದಲೇ ಪ್ರಶಸ್ತಿ ಫ‌ಲಕ ಹಾಗೂ ಸ್ಮರಣಿಕೆ ನೀಡುವಂತೆ ಪಾಲಿಕೆ ಅಧಿಕಾರಿಗಳ ದುಂಬಾಲು ಬಿದ್ದಿದ್ದ ಪ್ರಶಸ್ತಿ ಪುರಸ್ಕೃತರು ಈಗ, ಪ್ರಶಸ್ತಿ ಮೊತ್ತ ನೀಡುವಂತೆ ಅಧಿಕಾರಿಗಳ ಹಿಂದೆ ಬಿದ್ದಿದ್ದಾರೆ.

ನಿತ್ಯ ಪಾಲಿಕೆಗೆ ಭೇಟಿ ನೀಡುತ್ತಿರುವ ಪ್ರಶಸ್ತಿ ಪುರಸ್ಕೃತರು, ಪ್ರಶಸ್ತಿ ಮೊತ್ತವೆಲ್ಲಿ ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಈ ಬಾರಿ ಪ್ರಶಸ್ತಿ ಮೊತ್ತವನ್ನು ಪ್ರಶಸ್ತಿ ಪುರಸ್ಕೃತರೇ ಪಡೆಯವಬೇಕೆಂಬ ನಿಯಮ ಮಾಡಿರುವುದರಿಂದ ನಿತ್ಯ ಹತ್ತಾರು ಪುರಸ್ಕೃತರು ಬಂದು ಹೋಗುತ್ತಿದ್ದಾರೆ.

ಟಾಪ್ ನ್ಯೂಸ್

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

17-v-somanna

Hubli: ಈ ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

High-Court

High Court Order: ಕೋರ್ಟ್‌ ಕಲಾಪ ವೀಡಿಯೋ ಬಳಕೆಗೆ ನಿಷೇಧ

Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ‌ ಇದ್ದಾರೆ… ಸಚಿವ ಮಧು ಬಂಗಾರಪ್ಪ

Yadgir: ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕದ ಜನ‌ ಇದ್ದಾರೆ… ಸಚಿವ ಮಧು ಬಂಗಾರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್‌ ಅಮಾನತು

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

3

Crime: ಬುಲೆಟ್‌ ಖರೀದಿಸಲು ಸಾಧ್ಯವಾಗದ್ದಕ್ಕೆ ಹತಾಶೆ; 3 ಬೈಕ್‌ಗಳಿಗೆ ಬೆಂಕಿ ಹಚ್ಚಿದವ ಸೆರೆ

Lokayukta: 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ

Lokayukta: 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

Kaalapatthar Celebrity Show: ಸೆಲೆಬ್ರೆಟಿ ಶೋನಲ್ಲಿ ಕಾಲಾಪತ್ಥರ್‌

Kaalapatthar Celebrity Show: ಸೆಲೆಬ್ರೆಟಿ ಶೋನಲ್ಲಿ ಕಾಲಾಪತ್ಥರ್‌

15

Container Kannada Movie: ಕಂಟೈನರ್‌ನೊಳಗೆ ಹೊಸಬರ ಕನಸು

14

Life Of Mrudula Kannada Movie: ಮೃದುಲಾಗೆ ಮೆಚ್ಚುಗೆ

Gopilola Trailer: ನೈಸರ್ಗಿಕ ಕೃಷಿಯತ್ತ ಗೋಪಿಲೋಲ

Gopilola Trailer: ನೈಸರ್ಗಿಕ ಕೃಷಿಯತ್ತ ಗೋಪಿಲೋಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.