ರಂಗ ದಿಗ್ಗಜರ ಪಾತ್ರಗಳು ಡಿಜಿಟಲ್ ಪರದೆಗೆ
Team Udayavani, Oct 15, 2018, 6:51 AM IST
ಬೆಂಗಳೂರು: ದಶಕಗಳ ಕಾಲ ಕರ್ನಾಟಕ ರಂಗಭೂಮಿಯನ್ನು ಆಳಿದ ಮಹಾನ್ ರಂಗನಾಯಕರ ಪಾತ್ರಗಳು ಇನ್ನು ಮುಂದೆ ಡಿಜಿಟಲ್ ಪರದೆ ಮೇಲೆ ಮಿಂಚಲಿವೆ. ಗುಬ್ಬಿ ಕಂಪನಿಯ ಸಂಸ್ಥಾಪಕ ಗುಬ್ಬಿ ವೀರಣ್ಣ, ಹಿರಿಯ ನಾಟಕಕಾರರಾದ ಟಿ.ಪಿ ಕೈಲಾಸಂ, ಶ್ರೀರಂಗ, ಪರ್ವತವಾಣಿ ಸೇರಿ ನೂರಾರು ರಂಗಭೂಮಿ ಕಲಾವಿದರ ಪಾತ್ರಗಳು ಡಿಜಿಟಲೀಕರಣಗೊಂಡು ಇಂದಿನ ತಲೆಮಾರಿಗೆ,
ಹಿಂದಿನ ತಲೆಮಾರಿನ ರಂಗಭೂಮಿಯನ್ನು ಪರಿಚಯಿಸಲಿವೆ. ಮತ್ತೆ ಗತವೈಭದ ಕಥೆಯನ್ನು ಪೊಣಿಸಿ ಕಣ್ಮುಂದೆ ಇಡಲಿವೆ.
ಕರ್ನಾಟಕ ನಾಟಕ ಅಕಾಡೆಮಿ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದು, ಈ ಸಂಬಂಧ ಮುಂಬೈ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಹಿರಿಯ ರಂಗಭೂಮಿ ತಜ್ಞರಿಂದ ಅಮೂಲ್ಯ ದಾಖಲೆಗಳ ಕ್ರೋಢೀಕರಿಸುವ ಕಾರ್ಯ ಆರಂಭಿಸಿದೆ. ಎಚ್.ವಿ.ವೆಂಕಟಸುಬ್ಬಯ್ಯ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ರಂಗ ದಾಖಲಾತಿ ಸಂಗ್ರಹಕಾರ ಎ.ಎಸ್.ಕೃಷ್ಣಮೂರ್ತಿ, ತಿಪಟೂರಿನ ನಾಗೇಶ್ ಶೆಟ್ಟಿ, ಮುಂಬೈನಲ್ಲಿ ನೆಲೆಸಿರುವ ರಂಗಕಲಾವಿದ ಹಾಗೂ ಮೈಸೂರು ಅಸೋಸಿಯೇಷನ್‌ನ ಮಂಜುನಾಥಯ್ಯ, ಹಿರಿಯ ಛಾಯಾಗ್ರಾಹಕ
ಕೆ.ಎಸ್.ಶಿವರುದ್ರಯ್ಯ ಸೇರಿ ಹಲವು ರಂಗದಾಖಲಾತಿ ಸಂಗ್ರಹಕಾರರು ತಮ್ಮಲ್ಲಿರುವ ದಾಖಲಾತಿಗಳನ್ನು ಅಕಾಡೆಮಿಗೆ ನೀಡಲು ಮುಂದೆ ಬಂದಿದ್ದಾರೆ.
ಎಚ್.ವಿ.ವೆಂಕಟಸುಬ್ಬಯ್ಯ ಅವರ ಬಳಿ ಶೇ.80ರಷ್ಟು ರಂಗಭೂಮಿ ದಾಖಲೆಗಳಿದ್ದು, 1940ರಲ್ಲಿ ಹಿರಿಯ ನಾಟಕಕಾರ ಟಿ.ಪಿ.ಕೈಲಾಸಂ ಅವರು ಕರ್ಣನ ಪಾತ್ರದಲ್ಲಿ ಅಭಿನಯಿಸಿದ ಫೋಟೋ ದೊರೆತಿದೆ. ಅಲ್ಲದೆ 1956ರಲ್ಲಿ ಶ್ರೀರಂಗರು ಉಜ್ಜಯಿನಿಗೆ ತೆರಳಿ, ಅಲ್ಲಿ ಪ್ರದರ್ಶಿಸಿರುವ “ಅಭಿಜ್ಞಾನ ಶಾಕುಂತಲಾ’, ನಾಟಕದ ಚಿತ್ರ ಕೂಡ ದೊರಕಿದೆ. ಈ ಫೋಟೋಗಳಿಗೆ ಡಿಜಿಟಲೀಕರಣದ ಟಚ್ ನೀಡಲಾಗುವುದು ಎಂದು ಕರ್ನಾಟಕ ನಾಟಕ ಅಕಾಡೆಮಿ ಹೇಳಿದೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರಕ್ಕೆ ತೆರಳಲಿರುವ ಅಕಾಡೆಮಿ ದಾಖಲಾತಿ ಸಂಗ್ರಹಕಾರರ ತಂಡ, ರಂಗ ದಾಖಲಾತಿ ಸಂಗ್ರಹಕಾರ ಎ.ಎಸ್.ಕೃಷ್ಣಮೂರ್ತಿ ಅವರಲ್ಲಿದ್ದ
250 ಅಪರೂಪದ ರಂಗ ದಾಖಲೆಗಳನ್ನು ಸಂಗ್ರಹಿಸಿದೆ. ಇದರಲ್ಲಿ ರಂಗಭೂಮಿಗೆ ಸಂಬಂಧಿಸಿದ ಲೇಖನಗಳು, ವಿಮರ್ಶೆಗಳು, ಕಲಾವಿದರ ಪರಿಚಯ ಲೇಖನಗಳು ಸೇರಿವೆ.
ವೆಬ್‌ಸೈಟ್‌ನಲ್ಲಿ ರಂಗ ಗೀತೆಗಳು: ರಂಗಗೀತೆಗಳು ಕೂಡ ರಂಗಭೂಮಿಯ ಜೀವಾಳ ಎನಿಸಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ರಂಗಗೀತೆಗಳು ಒಂದೇ ಕಡೆ ದೊರಕಲಿ ಎಂಬ ದೃಷ್ಟಿಯಿಂದ ಗೀತೆಗಳ ಸಂಗ್ರಹಕ್ಕೆ ಮುಂದಾಗಿದೆ. ಲಹರಿ ಸಂಸ್ಥೆಯಲ್ಲಿ ದೇಸಿ ರಂಗಭೂಮಿಗೆ ಸಂಬಂಧಿಸಿದ ಹಲವು ಧ್ವನಿಮುದ್ರಣಗಳ ಕ್ಯಾಸೆಟ್‌ಗಳು ಇದ್ದು, ಅವುಗಳನ್ನು ಅಕಾಡೆಮಿಗೆ ನೀಡಲು ಮುಂದಾಗಿದ್ದಾರೆ. ನಾಟಕ ಅಕಾಡೆಮಿ, ಶೀಘ್ರದಲ್ಲೇ ಹೊಸ ವೆಬ್‌ಸೈಟ್‌ನ್ನು ಸ್ಥಾಪಿಸಲಿದ್ದು, ಇದಕ್ಕೆ ಲಹರಿ ಸಂಸ್ಥೆ ರಂಗಗೀತೆಗಳನ್ನು ಲಿಂಕ್ ಮಾಡಲಿದೆ ಎಂದು ನಾಟಕ ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಂಗಪತ್ರಿಕೆಗಾಗಿ ಹುಡುಕಾಟ: ರಂಗಭೂಮಿ ಉಳಿವಿಗೆ ರಂಗಪತ್ರಿಕೆಗಳ ಪಾತ್ರ ಕೂಡ ಹಿರಿದಾಗಿದ್ದು, ಈ ಹಿನ್ನೆಲೆಯಲ್ಲಿ ರಂಗಭೂಮಿಗೆ ಪ್ರಚಾರ ನೀಡುವ ಸಂಬಂಧ ಹುಟ್ಟಿಕೊಂಡಿದ್ದ ರಂಗಪತ್ರಿಕೆಗಳ ಸಂಗ್ರಹಕ್ಕೂ ಹೆಜ್ಜೆ ಇರಿಸಿದೆ. ಈ ಹಿಂದೆ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ರಂಗಸಾಧಕ ಪ್ರಸನ್ನ, ನಾಗೇಶ ಸೇರಿ “ಮುಕ್ತ’ ಎಂಬ ರಂಗಪತ್ರಿಕೆಯನ್ನು ಹೊರ ತಂದಿದ್ದರು. ಈ ಪತ್ರಿಕೆಯ ಪ್ರತಿಗಳ ಹುಡುಕಾಟ ಸಾಗಿದೆ. ಅಲ್ಲದೆ ಅಜ್ಜಂಪುರದ ಕೃಷ್ಣಮೂರ್ತಿ ಅವರ ಬಳಿ “ಈ ಮಾಸ ಪತ್ರಿಕೆ’ ಇದ್ದು ಡಿಜಿಟಲ್ ಪುಟ ಸೇರಲಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೊಡಿನಲ್ಲಿರುವ ನಿನಾಸಂನಲ್ಲೂ ರಂಗಭೂಮಿಗೆ ಸಂಬಂಧಿಸಿದ ಹಲವು ದಾಖಲೆಗಳಿವೆ. ಅಲ್ಲದೆ, ಹಲವು ದಿಗ್ಗಜ ರಂಗ ಕಲಾವಿದರ ರಂಗಭೂಮಿ ಪ್ರಯೋಗದ ಸೀಡಿಗಳು ಕೂಡ ಇಲ್ಲಿವೆ. ಇವುಗಳನ್ನು ನೀಡಲು ನಿನಾಸಂ ಮುಂದೆ ಬಂದಿದೆ. ಇದರ ಜತೆಗೆ ಲಂಕೇಶ, ಕುವೆಂಪು, ಕೈಲಾಸಂ, ಶ್ರೀರಂಗ, ಪರ್ವತವಾಣಿ ಸೇರಿ ಹಲವು ಲೇಖಕರ ನಾಟಕಗಳು
ಕೂಡ ಅಕಾಡೆಮಿ ವೆಬ್‌ಸೈಟ್‌ನಲ್ಲಿ ದೊರೆಯಲಿವೆ ಎಂದು ನಾಟಕ ಅಕಾಡೆಮಿಯ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ
ನೀಡಿದ್ದಾರೆ.
ಯೋಜನೆಗೆ 20 ಲಕ್ಷ ರೂ. ವೆಚ್ಚ
ಹಿರಿಯ ರಂಗಸಾಧಕರ ಸಾಧನೆಗಳಿಗೆ ಬೆಲೆ ಕಟ್ಟಲಾಗದು. ಈ ಹಿನ್ನೆಲೆಯಲ್ಲಿ ಯುವ ಪೀಳಿಗೆಗೆ ಸಾಧಕರ ಸಾಧನೆಗಳು ಪ್ರೇರಣೆ ಆಗಲಿ ಎಂಬ ಉದ್ದೇಶದಿಂದ ಕರ್ನಾಟಕ ನಾಟಕ ಅಕಾಡೆಮಿ ದಾಖಲಾತಿಗಳ ಡಿಜಿಟಲೀಕರಣ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ನಾಟಕ ಅಕಾಡೆಮಿ ಸುಮಾರು 20 ಲಕ್ಷ ರೂ. ವೆಚ್ಚ ಮಾಡಲಿದ್ದು, ದಾಖಲಾತಿಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಅಕಾಡೆಮಿ ಖರೀದಿ ಮಾಡಿದೆ.
ರಂಗಭೂಮಿಗೆ ಸಂಬಂಧಿಸಿದ ಪಳೆಯುಳಿಕೆಗಳು ಅಮೂಲ್ಯವಾಗಿದ್ದು, ಅವುಗಳ ಉಳಿಕೆಗೆ ಅಕಾಡೆಮಿ ಮುಂದಾಗಿದೆ. ಈಗಾಗಲೇ
ದಾಖಲಾತಿಗಳ ಡಿಜಿಟಲೀಕರಣ ಆರಂಭವಾಗಿದ್ದು, ಯೋಜನೆ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಕಾಯಬೇಕು.
● ಜೆ.ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ.
ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.