ಪ್ರದೀಪ್ ಪರಾಕ್ರಮ; ಪಾಟ್ನಾ ಗೆಲುವಿನಾಟ
Team Udayavani, Oct 15, 2018, 8:42 AM IST
ಹರ್ಯಾಣ: ಮೂರು ಬಾರಿಯ ಪ್ರೊ ಕಬಡ್ಡಿ ಚಾಂಪಿಯನ್ ಪ್ರಬಲ ಪಾಟ್ನಾ ಪೈರೇಟ್ಸ್ ತಂಡ ಲಯಕ್ಕೆ ಮರಳುತ್ತಿದ್ದು, ರವಿವಾರದ ಮೊದಲ ಮುಖಾಮುಖಿಯಲ್ಲಿ ಯುಪಿ ಯೋಧಾಸ್ ತಂಡವನ್ನು 43-37 ಅಂಕಗಳಿಂದ ಮಣಿಸಿದೆ. ಇದು 6ನೇ ಆವೃತ್ತಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಪಾಟ್ನಾಗೆ ಒಲಿದ 2ನೇ ಜಯ.
ಇನ್ನೊಂದೆಡೆ ಯುಪಿ ಯೋಧಾಸ್ ಇದುವರೆಗೆ 4 ಪಂದ್ಯಗಳನ್ನಾಡಿದ್ದು ಮೂರರಲ್ಲಿ ಸೋತು ಆಘಾತ ಅನುಭವಿಸಿದೆ. ಸತತ 2ನೇ ದಿನವೂ ಅದು ಸೋಲಿಗೆ ತುತ್ತಾಯಿತು. ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಹರ್ಯಾಣ 27-45 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ವಿರುದ್ಧ ಪಲ್ಟಿ ಹೊಡೆಯಿತು.
ಪ್ರದೀಪ್ ನರ್ವಾಲ್ ಪ್ರಬಲ ದಾಳಿ
ಯುಪಿ ಯೋಧಾಸ್ ಜಯ ಸಾಧಿಸುವ ಉಮೇದಿನಿಂದ ಕಣಕ್ಕಿಳಿದಿತ್ತು. ಅದರ ಯೋಜನೆಯನ್ನು ಪಾಟ್ನಾ ಪೈರೇಟ್ಸ್ ವಿಫಲಗೊಳಿಸಿತು. ಪಾಟ್ನಾ ಪರ ಎಂದಿನಂತೆ ಪ್ರದೀಪ್ ನರ್ವಾಲ್ ಪ್ರಬಲ ದಾಳಿ ನಡೆಸಿ 17 ಅಂಕಗಳನ್ನು ಗಳಿಸಿದರು. ಪ್ರದೀಪ್‌ಗೆ ದೀಪಕ್ ನರ್ವಾಲ್ ದಾಳಿಯಲ್ಲಿ ಸಾಥ್ ನೀಡಿದರು. ಅವರು 10 ಅಂಕ ಗಳಿಸಿದರು. ರಕ್ಷಣೆಯಲ್ಲಿ ಪಾಟ್ನಾ ಸಂಘಟಿತ ಯಶಸ್ಸು ಗಳಿಸಿದರೂ ವೈಯಕ್ತಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇದೇ ಮಾತು ಯುಪಿ ಯೋಧಾಸ್ ತಂಡಕ್ಕೂ ಅನ್ವಯಿಸುತ್ತದೆ. ಯುಪಿ ಕೂಡ ದಾಳಿಯಲ್ಲಿ ಮಿಂಚಿದರೂ ರಕ್ಷಣಾ ವಿಭಾಗದಲ್ಲಿ ಘೋರ ವೈಫಲ್ಯ ಎದುರಿಸಿತು.
ಯುಪಿ ಪರ ಶ್ರೀಕಾಂತ್ ಜಾಧವ್ ದಾಳಿಯಲ್ಲಿ ಮಿಂಚಿದರು. ಅವರು 17 ಅಂಕ ಗಳಿಸಿ ಎದುರಾಳಿ ಪಾಟ್ನಾ ಆಟಗಾರ ಪ್ರದೀಪ್‌ಗೆ ಸರಿಸಮನಾಗಿ ನಿಂತರು. ಆದರೆ ರಕ್ಷಣಾ ವಿಭಾಗದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಬರದಿದ್ದುದು ಯುಪಿ ಸೋಲಿಗೆ ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.