ಚಾಲಕನ ಖಾತೆಗೆ 300 ಕೋಟಿ ರೂ.!
Team Udayavani, Oct 15, 2018, 10:31 AM IST
*ಪಾಕ್ ತನಿಖಾ ಸಂಸ್ಥೆ ವಿಚಾರಣೆಗೆ ಕರೆದ ಬಳಿಕ ಬೆಳಕಿಗೆ ಬಂದ ಸಂಗತಿ
*ಉಪಯೋಗಿಸದ ಖಾತೆಗೆ ಬಂದು ಬಿದ್ದದ್ದು ದೊಡ್ಡ ಮೊತ್ತ
*ರಾಜಕಾರಣಿಗಳ, ಉದ್ಯಮಿಗಳ ಅಕ್ರಮ ಹಣ ಹರಿವು ಬಹಿರಂಗ
ಕರಾಚಿ: “ನಿಮ್ಮ ಬ್ಯಾಂಕ್ ಖಾತೆಯಲ್ಲಿ 300 ಕೋಟಿ ರೂ. ವ್ಯವಹಾರ ನಡೆದಿದೆ. ತತ್‌ಕ್ಷಣವೇ ಕಚೇರಿಗೆ ಬಂದು ಈ ವ್ಯವಹಾರದ ಬಗ್ಗೆ ನಿಮಗೆ ತಿಳಿದಿರುವ ಮಾಹಿತಿ ಕೊಡಿ’ ಎಂದು ಪಾಕಿಸ್ಥಾನದ ಫೆಡರಲ್ ತನಿಖಾ ಸಂಸ್ಥೆ
(ಎಫ್ಐಎ) ಕಡೆಯಿಂದ ಫೋನ್ ಮೂಲಕ ಸೂಚನೆ ಕೇಳಿದ ಕರಾಚಿಯ ರಿಕ್ಷಾ ಚಾಲಕ ಮೊಹಮ್ಮದ್ ರಶೀದ್‌ಗೆ ದಿಕ್ಕೇ ತೋಚದಂತಾಗಿತ್ತು.
ಎರಡು ಹೊತ್ತಿನ ಊಟಕ್ಕಾಗಿ ದಿನವಿಡೀ ರಿಕ್ಷಾ ಚಲಾಯಿಸುವ ತಾವೆಲ್ಲಿ, 300 ಕೋಟಿ ರೂ. ವ್ಯವಹಾರವೆಲ್ಲಿ ಎಂದಂದುಕೊಂಡು ಭೀತಿಯಿಂದಲೇ ಎಫ್ಐಎ ಕಚೇರಿಗೆ ತೆರಳಿದ್ದರು ಮೊಹಮ್ಮದ್. ಕಚೇರಿಯಲ್ಲಿ ಮೊಹಮ್ಮದ್‌ಗೆ ಅವರ ಬ್ಯಾಂಕ್ ಖಾತೆಯ ದಾಖಲೆ ನೀಡಿದ ಅಧಿಕಾರಿಗಳು ಹಣದ ಮೂಲ ತಿಳಿಸುವಂತೆ ಕೇಳಿದರು. ಅದಕ್ಕೆ ಮೊಹಮ್ಮದ್, ಹಿಂದೆ ತಾವೊಂದು ಕಂಪೆನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಆ ಕಂಪೆನಿಯ ವೇತನಕ್ಕಾಗಿ 2005ರಲ್ಲಿ ಈ ಬ್ಯಾಂಕ್ ಖಾತೆ ತೆರೆದಿದ್ದು, ತಿಂಗಳ ಹಿಂದಷ್ಟೇ ಆ ಕೆಲಸ ಬಿಟ್ಟು ಸ್ವಂತಕ್ಕೆ ಆಟೋ ಓಡಿಸುತ್ತಿದ್ದು ಬ್ಯಾಂಕ್ ಖಾತೆಯ ಉಸಾಬರಿಗೇ ಹೊಗಿಲ್ಲ ಎಂದರು.
ಹಾಗಾಗಿ, ತನಿಖೆ ಮತ್ತೂಂದು ದಿಕ್ಕಿಗೆ ಹೊರಳಿತ್ತು. ಬದಲಾದ ತನಿಖೆಯಲ್ಲಿ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕೆಲ ದಿನಗಳಿಂದ ಸ್ತಬ್ಧವಾಗಿರುವ ಬಡವರ ಬ್ಯಾಂಕ್ ಖಾತೆಗಳಿಗೆ ತಮ್ಮ ಕಪ್ಪು ಹಣವನ್ನು ಗುಟ್ಟಾಗಿ ತಂದಿರಿಸುವ ಕೆಲಸ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮೊಹಮ್ಮದ್ ನಿರುಮ್ಮಳವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.