ಬುಲೆಟ್‌ ಬೈಕ್‌ಗಳ ಬೆನ್ನಿಗೆ ಬಿದ್ದ ರಾಯಲ್‌ ಖದೀಮರು!


Team Udayavani, Oct 15, 2018, 12:44 PM IST

bullet2.jpg

ರಾಯಲ್‌ ಎನ್‌ಫೀಲ್ಡ್‌ (ಬುಲೆಟ್‌) ಬೈಕ್‌ ಮೇಲೆ ಜನರಿಗಿರುವ ಕ್ರೇಜ್‌ ಇಂದು ನೆನ್ನೆಯದಲ್ಲ. ಅದು ಹಲವಾರು ದಶಕಗಳಿಂದ ಇರುವ ಟ್ರೆಂಡ್‌. ಈಗಂತೂ ರಸ್ತೆಯಲ್ಲಿ ಬುಲೆಟ್‌ಗಳದ್ದೇ ಸದ್ದು. ಆದರೆ ರಾಯಲ್‌ ಎನ್‌ಫೀಲ್ಡ್‌ ಮಾಲೀಕರಿಗೆ ಗಂಡಾಂತರ ಎದುರಾಗಿದೆ. ಬುಲೆಟ್‌ಗಳನ್ನೇ ಕದಿಯುವ ಅಂತಾರಾಜ್ಯ ಕಳ್ಳರ ತಂಡಗಳು ನಗರದಲ್ಲಿ ಸಕ್ರಿಯವಾಗಿವೆ. ಈ ನಿಟ್ಟಿನಲ್ಲಿ ಎಲ್ಲೆಲ್ಲಿ ಬುಲೆಟ್‌ ಕಳವು ಹೆಚ್ಚಾಗಿದೆ? ಹೇಗೆ ಕದಿಯುತ್ತಾರೆ? ಮಾಲೀಕರೇನು ಮಾಡಬೇಕು? ಎಂಬ ಮಾಹಿತಿ ಈ ವಾರದ ಸುದ್ದಿ ಸುತ್ತಾಟದಲ್ಲಿ…

ಬೆಂಗಳೂರು: ಡುಗ್‌… ಡುಗ್‌… ಡುಗ್‌… ಡುಗ್‌… ಎಂದು ಸೌಂಡ್‌ ಮಾಡುವ ಆ ಬೈಕ್‌ ಮೇಲೆ ಕುಳಿತು ರೈಡ್‌ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ (ಬುಲೆಟ್‌) ಬೈಕ್‌ಗಳ ಹೆಗ್ಗಳಿಕೆ. ಕಾಲೇಜು ಯುವಕರಿಂದ ಹಿಡಿದು, ಅರವತ್ತರ ಹರೆಯದ ಹಿರಿಯರವರೆಗೆ ಎಲ್ಲರೂ ಈ ಬುಲೆಟ್‌ ಬೈಕ್‌ ಫ್ಯಾನ್‌ಗಳೇ.

ಅದರಲ್ಲೂ ಇತ್ತೀಚೆಗೆ ರಾಯಲ್‌ ಎನ್‌ಫೀಲ್ಡ್‌ ಕೊಳ್ಳುವವರ ಸಂಖೆ ಹೆಚ್ಚಾಗಿದೆ. ಇದೇ ವೇಳೇ ಈ ಗತ್ತಿನ ಬೈಕ್‌ ಕದಿಯುವವರ ಸಂಖ್ಯೆ ಕೂಡ ಹೆಚ್ಚಾಗಿದೆ! ರಾಜಧಾನಿಯಲ್ಲಿ ಸಕ್ರಿಯವಾಗಿರುವ ಬೈಕ್‌ ಕಳ್ಳರ ಕಣ್ಣು ಇದೀಗ ರಾಯಲ್‌ ಎನ್‌ಫೀಲ್ಡ್‌ ಮೇಲೆ ಬಿದ್ದಿದೆ. ಬೈಕ್‌ ಕಳ್ಳತನವನ್ನೇ ಕಸುಬಾಗಿಸಿಕೊಂಡಿರುವ ಅಂತಾರಾಜ್ಯ ಹಾಗೂ ನಗರದ ಕಳ್ಳರು, ಕಾಲ ಕ್ರಮೇಣ ತಮ್ಮ ಟಾರ್ಗೆಟ್‌ ಕೂಡ ಬದಲಾಯಿಸಿಕೊಂಡಿದ್ದು, ಇದೀಗ ಆಕರ್ಷಕ, ಫ್ಯಾಷನಬಲ್‌ ಬುಲೆಟ್‌ ಬೈಕ್‌ಗಳನ್ನು ಕಳವು ಮಾಡಲು ಆರಂಭಿಸಿದ್ದಾರೆ.

ಆಗ್ನೇಯ ವಿಭಾಗ, ವೈಟ್‌ಫೀಲ್ಡ್‌, ಉತ್ತರ ವಿಭಾಗಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ ಮೂಲದ ಬೈಕ್‌ ಕಳ್ಳರ ತಂಡಗಳು ಬುಲೆಟ್‌ಗಳನ್ನು ಹೆಚ್ಚಾಗಿ ಕಳವು ಮಾಡುತ್ತಿರುವುದು ಮಾಲೀಕರು ಹಾಗೂ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಮಿಳುನಾಡಿನ ವೇಲೂರು, ಅಂಬೂರ್‌, ಅಂಧ್ರದ ಅನಂತಪುರ, ಚಿತ್ತೂರು, ಪೆನುಗೊಂಡ, ಕೇರಳದ ಕ್ಯಾಲಿಕಟ್‌ ಮೂಲದ ಕಳ್ಳರ ತಂಡಗಳು ನಗರದಲ್ಲಿ ಸಕ್ರಿಯವಾಗಿವೆ.

ಇದರೊಂದಿಗೆ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ ತಾಲೂಕಿನ ಖದೀಮರೂ ಬೈಕ್‌ ಕಳವು ಪ್ರಕರಣಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ಹೇಳಿದರು. ಮನೆ ಮುಂದೆ, ರಸ್ತೆಬದಿ, ರೈಲು ನಿಲ್ದಾಣ, ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸುವ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಸದ್ದಿಲ್ಲದೆ ಕಳವು ಮಾಡುತ್ತಿದ್ದು, ನಗರದಲ್ಲಿ ದಿನವೊಂದಕ್ಕೆ ಕನಿಷ್ಠ ಐದರಿಂದ ಹತ್ತು ಬುಲೆಟ್‌ ಕಳವು ಪ್ರಕರಣಗಳು ದಾಖಲಾಗುತ್ತಿವೆ.

ಪೊಲೀಸ್‌ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ವರ್ಷ ಆಗಸ್ಟ್‌ ಅಂತ್ಯಕ್ಕೆ ನಗರದಲ್ಲಿ 3,643ಕ್ಕೂ ಅಧಿಕ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ.90ರಷ್ಟು ಬೈಕ್‌ ಕಳವು ಪ್ರಕರಣಗಳಿದ್ದು, ಇದರಲ್ಲಿ ಕಳುವಾಗಿರುವ ಬುಲೆಟ್‌ಗಳ ಸಂಖ್ಯೆ 350ರಿಂದ 400ರ ಗಡಿ ದಾಟಿವೆ.

ರಾಯಲ್‌ ಎನ್‌ಫೀಲ್ಡ್‌ ಟಾರ್ಗೆಟ್‌ ಯಾಕೆ!: 1.46 ಲಕ್ಷ ರೂ.ಗಳಿಂದ ಆರಂಭವಾಗುವ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಬೆಲೆ 2.56 ಲಕ್ಷ ರೂ. ಗಡಿ ದಾಟಿದೆ. ಜತೆಗೆ, ಬೈಕ್‌ನ ಬಿಡಿಭಾಗಗಳ ಬೆಲೆಯೂ ದುಬಾರಿ. ನಿರಾಯಾಸವಾಗಿ ಹ್ಯಾಂಡಲ್‌ ಲಾಕ್‌ ಮುರಿದು,

ಕೀ ಇಲ್ಲದೇ ಅಥವಾ ನಕಲಿ ಕೀ ಬಳಸಿ ಎನ್‌ಫೀಲ್ಡ್‌ ಬೈಕ್‌ ಸ್ಟಾರ್ಟ್‌ ಮಾಡುವ ಕಲೆಯನ್ನು ಕಳ್ಳರು  ಕರಗತ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜನರಿಗೆ ಬುಲೆಟ್‌ ಕ್ರೇಜ್‌ ಜಾಸ್ತಿ. ಕಡಿಮೆ ಬೆಲೆಗೆ ಸಿಕ್ಕರೆ ಬೇಗ ಖರೀದಿಸುತ್ತಾರೆ. ಮತ್ತೂಂದೆಡೆ ಸೆಕೆಂಡ್‌ ಹ್ಯಾಂಡ್‌ ಬೈಕ್‌ ಕೂಡ ಳ್ಳೆ ಬೆಲೆಗೆ ಮಾರಾಟವಾಗುತ್ತದೆ. ಇದು ಬುಲೆಟ್‌ ಕಳವು ಹೆಚ್ಚಲು ಕಾರಣ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಬರೀ 15ರಿಂದ 25 ಸಾವಿರಕ್ಕೆ ಮಾರಾಟ!: ನಗರದಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಕಳವು ಮಾಡುವ ಕಳ್ಳರು ಅವುಗಳನ್ನು, ಎನ್‌ಫೀಲ್ಡ್‌ ಮೇಲೆ ಮೋಹವಿರುವ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ 15ರಿಂದ 25 ಸಾವಿರ ರೂ.ಗೆ ಮಾರಾಟ ಮಾಡುತ್ತಾರೆ. ಯುವಕರು ಕೂಡ ತಮ್ಮಿಷ್ಟದ ಬೈಕ್‌ ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಸಂತೋಷದಲ್ಲಿ, ದಾಖಲೆಗಳನ್ನು ಪರಿಶೀಲಿಸದೇ ಖರೀದಿಸುತ್ತಾರೆ.

ಬಳಿಕ, ಬೈಕ್‌ ಖರೀದಿಸಿದ ವಿದ್ಯಾರ್ಥಿ ಸಂಪರ್ಕದಿಂದಲೇ ಮತ್ತೂಬ್ಬ ಗ್ರಾಹಕನನ್ನೂ ಕಳ್ಳರು ಹುಡುಕಿಕೊಳ್ಳುತ್ತಾರೆ. ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಮಾರಾಟಕ್ಕೆ ಕಳ್ಳರು ಕಂಡುಕೊಂಡಿರುವ ಮತ್ತೂಂದು ಮಾರ್ಗ ತಮ್ಮ ಸ್ವಂತ ಊರುಗಳು ಹಾಗೂ ಪರಿಚಯಸ್ಥರು.

ನಗರದಲ್ಲಿ ಬೈಕ್‌ ಕದ್ದುಕೊಂಡು ಹೋಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ರೈತರು, ಮಧ್ಯಮ ವರ್ಗದ ವ್ಯಕ್ತಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಖರೀದಿಸಿದ ಗ್ರಾಹಕ ಕೂಡ ಬೈಕ್‌ ದಾಖಲೆಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದ ಕಳ್ಳರ ದಾರಿ ಸುಲಭವಾಗುತ್ತಿದೆ ಎನ್ನುತ್ತಾರೆ ಅಧಿಕಾರಿ.

ಬುಲೆಟ್‌ ಕದಿಯೋಕೆ ನೆರೆ ರಾಜ್ಯದಿಂದ ಬರ್ತಾರೆ!: ತಮಿಳುನಾಡು, ಆಂಧ್ರ ಪ್ರದೇಶದ ವಿವಿಧ ಭಾಗಗಳಿಂದ ಕಾರು ಅಥವಾ ರೈಲು ಮಾರ್ಗದ ಮೂಲಕ ಬರುವ ಕಳ್ಳರು, ಪಾರ್ಕಿಂಗ್‌ ಸ್ಥಳ, ಮನೆ ಮುಂದೆ ಹಾಗೂ ಇನ್ನಿತರ ಕಡೆ ಸುತ್ತಾಡಿ ಅಲ್ಲಿ ನಿಲ್ಲಿಸಿರುವ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಗುರುತ್ತಿಸುತ್ತಾರೆ. ಬಳಿಕ ರಾತ್ರಿ ವೇಳೆ ಸದ್ದಿಲ್ಲದೆ ಕಳವು ಮಾಡುತ್ತಾರೆ. ನಂತರ ಮೊದಲೇ ನಿಗಿದಿ ಮಾಡಿದಂತೆ ಮಧ್ಯವರ್ತಿಗಳ ಮೂಲಕ ಥವಾ ತಮ್ಮದೇ ಗ್ರಾಹಕರಿಗೆ ಬೈಕ್‌ ಮಾರಾಟ ಮಾಡಿ ನಾಪತ್ತೆಯಾಗುತ್ತಾರೆ.

ಇತ್ತೀಚೆಗೆ ಪತ್ತೆಯಾದ ಪ್ರಕರಣಗಳು!: ಕೆಲ ದಿನಗಳ ಹಿಂದೆ ತಮಿಳುನಾಡಿನ ಅಂಬೂರ್‌ನ ನಿಯಾಜ್‌ ಹಾಗೂ ಆತನ ಸಹಚರರನ್ನು ಕೆ.ಆರ್‌. ಪುರ ಠಾಣೆ ಪೊಲೀಸರು ಬಂಧಿಸಿದ್ದರು. ಬೈಕ್‌ ಕಳವು ಪ್ರಕರಣದ ಬೆನ್ನು ಬಿದ್ದ ಪೊಲೀಸರು, ನಿಯಾಜ್‌ ಹಾಗೂ ತಂಡದಿಂದ ಬುಲೆಟ್‌ ಸೇರಿದಂತೆ 9.50 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದರು.

ಮತ್ತೂಂದು ಪ್ರಕರಣದಲ್ಲಿ  ಕಳವು ಮಾಡಿದ ರಾಯಲ್‌ ಎನ್‌ಫೀಲ್ಡ್‌ ಗಾಡಿಗಳಲ್ಲಿಯೇ ಅತ್ತಿಬೆಲೆಯ ಅಸ್ಮತ್‌ ಖಾನ್‌ ಅಲಿಯಾಸ್‌ ಬುಲೆಟ್‌ ಖಾನ್‌, ತಮಿಳುನಾಡಿಗೆ ಹೋಗುತ್ತಿದ್ದಾಗ ಮೂವರು ಆರೋಪಿಗಳು ವರ್ತೂರು ಠಾಣೆ ಪೊಲೀಸರು ಬಂಧಿಸಿ 10 ರಾಯಲ್‌ ಎನ್‌ಫೀಲ್ಡ್‌ಗಳನ್ನು ಜಪ್ತಿ ಮಾಡಿದ್ದರು.

ಐಷಾರಾಮಿ ಜೀವನಕ್ಕಾಗಿ ಬುಲೆಟ್‌ಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಮಂಡ್ಯದ ಕೀರ್ತಿ, ಸೈಯದ್‌ ಇಮ್ರಾನ್‌ನನ್ನು ಬೇಗೂರು ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 10 ಬುಲೆಟ್‌ಗಳು ಸೇರಿ 15 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿತ್ತು.

ತಲೆಮರೆಸಿಕೊಂಡಿರುವ ಮೋಸ್ಟ್‌ ವಾಂಟೆಡ್‌ ಅಲಿ: ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನೇ ನಿರ್ದಿಷ್ಟವಾಗಿ ಕಳವು ಮಾಡುವ ಅಂಬೂರ್‌ ನಿವಾಸಿ ಜಲ್ಫಿàಕರ್‌ ಅಲಿ ಆಲಿಯಾಸ್‌ ಬುಲೆಟ್‌ ಅಲಿ (20) ಎಂಬಾತನನ್ನು ಈ ಹಿಂದೆ ಬಂಧಿಸಿದ್ದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು, ಆತನಿಂದ 20ಕ್ಕೂ ಅಧಿಕ ಬುಲೆಟ್‌ಗಳನ್ನು ವಶಕ್ಕೆ ಪಡೆದಿದ್ದರು.

ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಯಾದ ಆತ ಮತ್ತೆ ಬುಲೆಟ್‌ ಕಳವು ಮುಂದುವರಿಸಿದ್ದು ಪರಪ್ಪನ ಅಗ್ರಹಾರ, ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. ವಿಶೇಷ ಎಂದರೆ ಅಂಬೂರ್‌ನ ಬೈಕ್‌ ಕಳ್ಳರಿಗೆ ಈತನೇ ನಾಯಕ. ಸಾಮಾನ್ಯ ಗಾಡಿಗಳನ್ನು ಕದಿಯುತ್ತದವರಿಗೆ ಬುಲೆಟ್‌ಗಳನ್ನು ಟಾರ್ಗೆಟ್‌ ಮಾಡಿಕೊಂಡು ಕದಿಯುವಂತೆ ಸೂಚನೆ ನೀಡಿ ಪ್ರೇರೆಪಿಸಿದ್ದ ಈತನ ಚಿಕ್ಕಪ್ಪ ನಿಯಾಜ್‌ನನ್ನು ಕೂಡ ಆತನೇ ಕಳವು ಪ್ರಕರಗಳಲ್ಲಿ ತೊಡಗಿಸಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಾಹನ ಕಳವು ವಿವರ
ವರ್ಷ    ವಾಹನ

-2016    3,897
-2017    4,116
-2018    3,643 (ಆಗಸ್ಟ್‌ ಅಂತ್ಯಕ್ಕೆ)

ಬುಲೆಟ್‌ ಮಾಲೀಕರು ವಹಿಸಬೇಕಾದ ಕ್ರಮಗಳು: ಆಗ್ನೇಯ ವಿಭಾಗ, ವೈಟ್‌ಫೀಲ್ಡ್‌ ವಿಭಾಗಗಳಲ್ಲಿ ಅತಿ ಹೆಚ್ಚು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳು ಕಳವುವಾಗಿವೆ. ಹೀಗಾಗಿ ಈ ಭಾಗ ಮಾತ್ರವಲ್ಲದೆ, ನಗರದಾದ್ಯಂತ ಇರುವ ಬುಲೆಟ್‌ ಮಾಲೀಕರು ಎಚ್ಚರಿಕೆ ವಹಿಸಬೇಕು.

ಬೈಕ್‌ಗೆ ಇರುವ ಒಂದು ಲಾಕ್‌ ಜತೆಗೆ ಡಬಲ್‌ ಲಾಕ್‌, ಅಥವಾ ಜಿಪಿಎಸ್‌ ಅಳವಡಿಸಿಕೊಂಡು ಜಾಗ್ರತೆ ವಹಿಸಬೇಕು. ಕಳ್ಳರನ್ನು ಬಂಧಿಸುವುದು ನಮ್ಮ ಜವಾಬ್ದಾರಿ. ಆದರೆ, ಮಾಲೀಕರು ಕೂಡ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಯುಟ್ಯೂಬ್‌ ನೋಡುವ ಕಳ್ಳರು: ಬುಲೆಟ್‌ಗಳನ್ನು ಕಳವು ಮಾಡುವ ಕಳ್ಳರು, ಅವುಗಳ ಲಾಕ್‌ ಮುರಿಯುವುದು ಹೇಗೆ ಎಂಬುದನ್ನು ಯುಟ್ಯೂಬ್‌ ವಿಡಿಯೋ ನೋಡಿ ಕಲಿಯುತ್ತಾರೆ! ಯುಟ್ಯೂಬ್‌ನಲ್ಲಿ “ಹೌ ಟು ಥೆಫ್ಟ್ ಬುಲೆಟ್‌’ ಎಂದು ಟೈಪ್‌ ಮಾಡಿ, ಸರ್ಚ್‌ ಕೊಟ್ಟರೆ ನೂರಾರು ವಿಡಿಯೋಗಳು ಬರುತ್ತವೆ.

ಇವುಗಳನ್ನು ನೋಡಿ ಪ್ರೇರಣೆ ಪಡೆಯುವ ಆರೋಪಿಗಳು, ಬೈಕ್‌ಗಳನ್ನು ಕದಿಯುತ್ತಾರೆ. ದರೊಂದಿಗೆ ನೆರೆ ರಾಜ್ಯಗಳಲ್ಲಿರುವ ಕೆಲ ಸೆಕೆಂಡ್‌ ಹ್ಯಾಂಡ್‌ ಬೈಕ್‌ಗಳ ಶೋರೂಂ ಮಾಲೀಕರು, ಖದೀಮರು ಕದ್ದು ತಂದ ಬುಲೆಟ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಕೈಜೋಡಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಾರೆ.

ಬುಲೆಟ್‌ಗಳಿಗೆ ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಸಿಗುತ್ತದೆ. ಹೀಗಾಗಿ ಕಳ್ಳರು ಇದೇ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್‌ ಮಡಿಕೊಳ್ಳುತ್ತಾರೆ. ನಗರದಲ್ಲಿ ಕಳವು ಮಾಡಿ ಹೊರ ರಾಜ್ಯಗಳಿಗೆ ಕೊಂಡೊಯ್ದರೆ ಪತ್ತೆ ಕಷ್ಟ ಎಂಬ ಕಾರಣಕ್ಕೆ ನೆರೆ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾರೆ.
-ಚೇತನ್‌ ಸಿಂಗ್‌ ರಾಥೋಡ್‌, ಉತ್ತರ ವಲಯ ಡಿಸಿಪಿ

* ಮಂಜುನಾಥ್‌ ಲಘುಮೇನಹಳ್ಳಿ

ಟಾಪ್ ನ್ಯೂಸ್

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.