ಬೆಳ್ತಂಗಡಿ: ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ
Team Udayavani, Oct 15, 2018, 4:00 PM IST
ಬೆಳ್ತಂಗಡಿ : ತಾಲೂಕಿನ ಕಳಿಯ ಗ್ರಾ.ಪಂ. ವ್ಯಾಪ್ತಿಯ ಗೋವಿಂದೂರಿನಿಂದ ನ್ಯಾಯತರ್ಪು ಗ್ರಾಮವನ್ನು ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಬೃಹತ್ ತೊರೆಯೊಂದು ಹರಿಯುತ್ತಿದ್ದು, ಅದಕ್ಕೆ ಹಾಲಿ ಇರುವ ಕಿರು ಸೇತುವೆಯು ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ಅಗಲವಾದ ಸೇತುವೆಯೊಂದನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗೋವಿಂದೂರಿನಿಂದ ಹೀರ್ಯ, ನಿಡ್ಡಾಜೆ, ಜೋಡುತ್ತಾರು, ಮಚ್ಚಿನ, ಪಾಲಡ್ಕ, ಬಳ್ಳಮಂಜ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಕಿರಿದಾಗಿದ್ದು, ಸಣ್ಣಪುಟ್ಟ ವಾಹನಗಳಿಗೆ ಮಾತ್ರ ತೆರಳುವುದಕ್ಕೆ ಅವಕಾಶವಿದೆ. ಹೀಗಾಗಿ ಬೃಹತ್ ವಾಹನಗಳು ಸುತ್ತು ಬಳಸಿ ಸಾಗಬೇಕಿದೆ. ಸೇತುವೆಯು ಕಿರಿದಾಗಿರುವ ಜತೆಗೆ ಪ್ರಸ್ತುತ ಶಿಥಿಲಾವಸ್ಥೆಗೂ ತಲುಪಿದೆ.
ಮಳೆಗಾಲದಲ್ಲಿ ಆತಂಕ
ಮಳೆಗಾಲದಲ್ಲಿ ತೊರೆ ತುಂಬಿ ಹರಿಯುವುದರಿಂದ ಅಪಾಯದ ಸ್ಥಿತಿಯಲ್ಲಿರುತ್ತದೆ. ಸೇತುವೆ ಶಿಥಿಲಾವಸ್ಥೆಯಲ್ಲಿರುವುದರಿಂದ ಹೆತ್ತವರು ಮಕ್ಕಳನ್ನು ಸೇತುವೆಯ ಮೂಲಕ ಶಾಲೆಗೆ ಕಳುಹಿಸಲು ಆತಂಕ ಪಡಬೇಕಾದ ಸ್ಥಿತಿ ಇದೆ. ಹೀಗಾಗಿ ಈ ಭಾಗದಲ್ಲಿ ಹೊಸ ಸೇತುವೆ ನಿರ್ಮಿಸಿ, ಸ್ಥಳೀಯ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದನೆಯಿಲ್ಲ
ಸೇತುವೆ ದುರಸ್ತಿಗಾಗಿ ಸ್ಥಳೀಯರು ಕಳೆದ ಹಲವು ವರ್ಷಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಬಂದಿದ್ದು, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸೇತುವೆ ಕಿರಿದಾಗಿರುವ ಪರಿಣಾಮ ಗೋವಿಂದೂರು ಹಿ.ಪ್ರಾ. ಶಾಲೆ, ಅಂಗನವಾಡಿ ಕೇಂದ್ರಕ್ಕೆ ಬಿಸಿಯೂಟ ಸಾಮಗ್ರಿಗಳನ್ನು ಹೊತ್ತು ತರುವ ವಾಹನಗಳು ಅಕ್ಕಿ, ಗ್ಯಾಸ್ ಸಿಲಿಂಡರ್‌ಗಳನ್ನು ಅರ್ಧದಲ್ಲಿಯೇ ಇಳಿಸಿ ಹೋಗಬೇಕಾದ ಸ್ಥಿತಿ ಇದೆ. ಬಳಿಕ ಅದನ್ನು ಜೀಪಿನ ಮೂಲಕ ಶಾಲೆಗೆ ಮುಟ್ಟಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.