ಕನ್ನಡ ಕಟ್ಟುವ ಕೆಲಸ ನಿರಂತರ ಸಾಗಲಿ: ಪಾಟೀಲ ಆಶಯ


Team Udayavani, Oct 15, 2018, 4:18 PM IST

15-october-17.gif

ಹಾರೂಗೇರಿ: ಸರಕಾರಿ ಪೋಷಿತ ಸಮ್ಮೇಳನಗಳಿಗಿಂತ ಸ್ವಯಂ ಪ್ರೇರಿತ ಸಂಘಟನೆಗಳು ಕನ್ನಡ ಕಟ್ಟುವ ಕಾಯಕದಲ್ಲಿ ತೀವ್ರ ಆಸಕ್ತಿ ವಹಿಸುತ್ತಿರುವುದು ಭವಿಷ್ಯದ ಶುಭ ಸೂಚನೆ ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಯ.ರು. ಪಾಟೀಲ ಹೇಳಿದರು. ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಭವನದ ವಿಶ್ವಗುರು ಬಸವಣ್ಣನವರ ವೇದಿಕೆಯಲ್ಲಿ ರವಿವಾರ ನಡೆದ ಬೆಳಗಾವಿ, ಬಾಗಲಕೋಟೆ, ವಿಜಯಪುರ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ-2018ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ನಾಡಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿದ್ದು, ಅವು ಕನ್ನಡದ ಪ್ರೀತಿಯ ಜತೆಗೆ ಕನ್ನಡ ಮನಸ್ಸುಗಳನ್ನು ಬೆಸೆಯುತ್ತಿವೆ. ಈ ದಿಸೆಯಲ್ಲಿ ಬೆಳಕು ಸಂಸ್ಥೆಯ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ ಮಾದರಿಯಾಗಿದೆ ಎಂದರು.

ಅಪಮೌಲ್ಯ ಬದಲಾಯಿಸಿ: ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಮಾತನಾಡಿ, ರಾಜಕಾರಣ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಯಾವುದನ್ನು ನಾವು ಜೀವನದ ಮೌಲ್ಯವಲ್ಲವೆಂದು ಒಪ್ಪಲು ಸಾಧ್ಯವಿಲ್ಲದ ಅಪಮೌಲ್ಯಗಳನ್ನು ನಾವು ಬದಲಾಯಿಸಲೇಬೇಕು. ಒಪ್ಪಲು ಸಾಧ್ಯವಿಲ್ಲದ ಜಾತಿಯತೆ, ಭಯೋತ್ಪಾದನೆ, ಅಪರಾಧಗಳನ್ನು ನಮಗೆ ಎಲ್ಲ ತಿಳಿವಳಿಕೆ, ಸಾಮರ್ಥ್ಯವಿದ್ದರೂ ಬದಲಾಯಿಸದಿದ್ದಲ್ಲಿ ನಾವೇ ಪ್ರಥಮ ದೇಶದ್ರೋಹಿಗಳಾಗುತ್ತೇವೆ. ಸಾಹಿತ್ಯಾಸಕ್ತರು, ಸಾಹಿತಿಗಳು, ಕವಿಗಳು, ಮಠಾಧೀಶರು, ಪ್ರಜ್ಞಾವಂತರು, ಸಮಾಜ ಸೇವಕರು, ಸಮಾಜದ ಓರೆಕೋರೆಗಳನ್ನು ತಿದ್ದಿ, ಸರಿ ದಾರಿಗೆ ತರಬೇಕಿದೆ ಎಂದರು.

ಬೆಳಕು ಸಂಸ್ಥೆ ರಾಜ್ಯಾಧ್ಯಕ್ಷ ಅಣ್ಣಪ್ಪ ಮೇಟಿಗೌಡ ಮಾತನಾಡಿ, ಇಂದಿನ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ ಭವಿಷ್ಯದ ಮುನ್ಸೂಚನೆಯಾಗಿದೆ ಎಂದರು.  ಎಸ್‌ಪಿಎಂ ಮಂಡಳ ಅಧ್ಯಕ್ಷ ತ್ರಿಕಾಲ ಅಮರಸಿಂಹ ಪಾಟೀಲ ಸಮಾರಂಭ ಉದ್ಘಾಟಿಸಿದರು. ಬೆಳಗ್ಗೆ ಕಾಳಿಕಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ತುಕಾರಾಮ ಬಡಿಗೇರ ನಾಡ ಧ್ವಜಾರೋಹಣ ನೆರವೇರಿಸಿದರು. ನಂತರ ಎಲ್ಲ ಗಣ್ಯರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಲಗದ ಶ್ರೀ ಧರೀಖಾನ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು.

ಸಮ್ಮೇಳನಾಧ್ಯಕ್ಷ ಡಾ| ವಿ.ಎಸ್‌. ಮಾಳಿ, ಮಾಜಿ ಶಾಸಕ ಬಿ.ಸಿ. ಸರಿಕರ, ಗಣ್ಯರಾದ ರಾಮಣ್ಣ ಗಸ್ತಿ, ಬಾಲಕೃಷ್ಣ ಜಂಬಗಿ, ಡಿ.ಸಿ. ಸದಲಗಿ, ಮೀನಾಕ್ಷಿ ನೆಲಗಳಿ, ಮೋಹನಗೌಡ ಪಾಟೀಲ, ಸಾಹಿತಿ ಸಿದ್ದಣ್ಣ ದಿವಾಣ, ರಾಜ್ಯ ಸಂಘಟಕ ರಾಜು ಐತವಾಡೆ, ವಿಠ್ಠಲ ಬಡಿಗೇರ, ಚಂದ್ರಶೇಖರ ಒಡೆಯರ, ಗುರುರಾಜ ರಾಯಬಾಗಕರ ಹಾಜರಿದ್ದರು.

ಟಾಪ್ ನ್ಯೂಸ್

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.