ಶೂಟಿಂಗ್ ಬಳಿಕ ಲೊಕೇಶನ್ ಮರೆಯದ ರಿಷಭ್
Team Udayavani, Oct 16, 2018, 10:29 AM IST
ಮಂಗಳೂರು: ಗಡಿನಾಡಿನ ಕನ್ನಡ ಶಾಲೆಗಳ ಸ್ಥಿತಿಗತಿ ಮತ್ತು ರಕ್ಷಿಸಬೇಕಾದ ಆಗತ್ಯವನ್ನು ಭಿನ್ನವಾಗಿ ಮನದಟ್ಟು ಮಾಡಿಸಿದ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನೆಮಾ ಚಿತ್ರೀಕರಣದ ಲೊಕೇಶನ್ ಕೈರಂಗಳ ಶಾಲೆಯನ್ನು ನಿರ್ದೇಶಕ ರಿಷಭ್ ಶೆಟ್ಟಿ ಮರೆತುಬಿಟ್ಟಿಲ್ಲ. ಮುಚ್ಚುವ ಭೀತಿಯಲ್ಲಿರುವ ಈ ಶಾಲೆಯನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
137 ವರ್ಷಗಳ ಇತಿಹಾಸವಿರುವ ಬಂಟ್ವಾಳ ತಾಲೂಕಿನ ಕೈರಂಗಳ ಸ.ಹಿ.ಪ್ರಾ. ಶಾಲೆ ಮುಚ್ಚುಗಡೆ ಅಪಾಯ ಎದುರಿಸುತ್ತಿದೆ. ಗಡಿನಾಡಿನ ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗೆಗಿನ ಸಿನೆಮಾ ಯಶಸ್ವಿಯಾಗಿದ್ದರೆ ಅದರ
ಶೂಟಿಂಗ್ ನಡೆದ ಶಾಲೆ ವಿದ್ಯಾರ್ಥಿಗಳಿಲ್ಲದ ಸ್ಥಿತಿ ತಲುಪಿರುವುದು ವಿಪರ್ಯಾಸ.
ಕೈರಂಗಳ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇದ್ದು, ಸದ್ಯ ಕೇವಲ 25 ವಿದ್ಯಾರ್ಥಿಗಳಿದ್ದಾರೆ. 2ನೇ ತರಗತಿಗೆ
ದಾಖಲಾತಿ ಆಗಿಲ್ಲ. ಈಗ ಇರುವುದೊಬ್ಬರೇ ಅಧ್ಯಾಪಕರು. ಹೀಗಾಗಿ ಶಾಲೆ ಮುಚ್ಚುಗಡೆ ಆತಂಕ ಎದುರಿಸುತ್ತಿದೆ.
ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್ ಶೆಟ್ಟಿ ಮತ್ತು ತಂಡ ಶಾಲೆಯ ಟ್ರಸ್ಟಿಗಳ ಜತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿ ಸ್ಪಂದಿಸಿದ್ದು, ಮುಂದಿನ ಕಾರ್ಯಯೋಜನೆ ಬಗ್ಗೆ ಇದೇ ತಿಂಗಳಿನಲ್ಲಿ ಮಾತುಕತೆ ನಡೆಸಲಿದ್ದಾರೆ.
ಮಂಗಳೂರು ಮೂಲದ ಅನಿಲ್ ಶೆಟ್ಟಿ ಮತ್ತು ತಂಡ ಈಗಾಗಲೇ “ಕನ್ನಡ ಶಾಲೆ ಉಳಿಸಿ ಆಂದೋಲನ’ವನ್ನು ಕೈಗೊಂಡಿದ್ದು, ಪ್ರಶಂಸೆ, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅನಿಲ್ ಶೆಟ್ಟಿ ತಂಡದಲ್ಲಿ ಸುಮಾರು 100 ಮಂದಿ ಕಾರ್ಯಕರ್ತರಿದ್ದು, ಅವರೂ ರಿಷಭ್ ಶೆಟ್ಟಿಯವರ ಹೊಸ ಪ್ರಯ°ಕ್ಕೆ ಕೈ ಜೋಡಿಸಲಿದ್ದಾರೆ.
ಪ್ರಿ ಸ್ಕೂಲ್ ಆರಂಭಕ್ಕೆ ಚಿಂತನೆ
ಕನ್ನಡ ಶಾಲೆಯಲ್ಲಿ ಕಲಿತರೆ ಮುಂದಿನ ವಿದಾಭ್ಯಾಸಕ್ಕೆ ತೊಡಕು ಎಂಬ ಭಾವನೆ ಕೆಲವರಲ್ಲಿ ಇದೆ. ಇದನ್ನು ತೊಡೆದು ಹಾಕುವ ದೃಷ್ಟಿಯಿಂದ ಶಾಲೆಯಲ್ಲಿ ಪೂರ್ವ ಪ್ರಾಥಮಿಕ (ಪ್ರಿ ಸ್ಕೂಲ್) ಆರಂಭಿಸುವ ಚಿಂತನೆ ನಡೆಸಲಾಗಿದೆ. ಕನ್ನಡ ಭಾಷೆಗೆ ಪ್ರಾಶಸ್ತ್ರ ನೀಡಲಿದ್ದು, ಇದನ್ನು ಪ್ರಾರಂಭಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಬಹುದು ಎಂಬ ಯೋಚನೆ ತಂಡದ್ದು.
ಕೈರಂಗಳ ಶಾಲೆಯಲ್ಲಿ ಸದ್ಯ 25 ವಿದ್ಯಾರ್ಥಿಗಳಿದ್ದಾರೆ. ಎರಡನೇ ತರಗತಿಗೆ ಮಕ್ಕಳಿಲ್ಲ. ನಾನೊಬ್ಬನೇ ಶಿಕ್ಷಕ. ಶಾಲೆ ಉಳಿಸುವುದಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಶಾಲಾ ಕಟ್ಟಡ ಸರಿಯಾಗಿದೆ. ಇರುವುದು ಮಕ್ಕಳ ಕೊರತೆ ಮಾತ್ರ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಮನೆಮನೆಗೆ ತೆರಳಿ ಅರಿವು ಮೂಡಿಸಬೇಕು.
ದೇವದಾಸ್, ಮುಖ್ಯೋಪಾಧ್ಯಾಯರು, ಸರಕಾರಿ ಹಿ.ಪ್ರಾ. ಶಾಲೆ ಕೈರಂಗಳ
ಒಬ್ಬರಿಂದಾಗುವ ಕೆಲಸವಲ್ಲ
ರಿಷಭ್ ಶೆಟ್ಟಿ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಸರಕಾರಿ ಶಾಲೆಯನ್ನು ಉಳಿಸುವುದು ಒಬ್ಬರಿಂದಾಗುವ ಕೆಲಸವಲ್ಲ. ಕೈಯಲ್ಲಿ ಹಣವಿದ್ದರೆ, ಜನರಿದ್ದರೆ ಸಾಲದು. ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡಬೇಕು. ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆತರುವ ವ್ಯವಸ್ಥೆ ಮಾಡಬೇಕು. ಏನೇ ಆಗಲಿ, ಕೈರಂಗಳ ಸ. ಹಿ. ಪ್ರಾ. ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು
Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.