ಆಸ್ಟ್ರೇಲಿಯ ಪ್ರವಾಸ: ಆಫ್ರಿಕಾ ತಂಡದಲ್ಲಿ ಮಾರಿಸ್
Team Udayavani, Oct 18, 2018, 9:46 AM IST
ಜೊಹಾನ್ಸ್‌ಬರ್ಗ್: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕಾಗಿ ತನ್ನ ತಂಡವನ್ನು ಅಂತಿಮಗೊಳಿಸಿರುವ ದಕ್ಷಿಣ ಆಫ್ರಿಕಾ, ಆಲ್‌ರೌಂಡರ್‌ಗಳಾದ ಕ್ರಿಸ್ ಮಾರಿಸ್ ಹಾಗೂ ಫರ್ಹಾನ್ ಬೆಹದೀನ್ ಅವರಿಗೆ ಅವಕಾಶವಿತ್ತಿದೆ. ಆದರೆ ಅನುಭವಿ ಕ್ರಿಕೆಟಿಗರಾದ ಹಾಶಿಮ್ ಆಮ್ಲ ಮತ್ತು ಜೀನ್‌ಪಾಲ್ ಡ್ಯುಮಿನಿ ಈ ಸರಣಿಯಿಂದ ಹೊರಗುಳಿದಿರುವುದು ಹರಿಣಗಳ ಪಾಲಿಗೆ ಹಿನ್ನಡೆಯಾಗಿದೆ. 31ರ ಹರೆಯದ ಕ್ರಿಸ್ ಮಾರಿಸ್ ಕಳೆದ ಫೆಬ್ರವರಿಯಲ್ಲಿ ಕೊನೆಯ ಸಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಐಪಿಎಲ್ ವೇಳೆ ಗಾಯಾಳಾದ ಕಾರಣ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದರು. ಈಗ ಫಿಟ್‌ನೆಸ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಕಳೆದ ಶ್ರೀಲಂಕಾ ಪ್ರವಾಸದ ವೇಳೆ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ವಿಯಾನ್ ಮುಲ್ಡರ್ ಕೂಡ ಗಾಯಾಳಾಗಿದ್ದು, ಅವರನ್ನು ಆಸೀಸ್ ಪ್ರವಾಸದಿಂದ ಕೈಬಿಡಲಾಗಿದೆ. “ಮುಂದಿನ ವರ್ಷದ ವಿಶ್ವಕಪ್ ಪಂದ್ಯಾವಳಿಗಾಗಿ ನಮ್ಮದು ವಿಷನ್-2019 ಯೋಜನೆಯಾಗಿದೆ. ವಿಶ್ವಕಪ್ ವೇಳೆಗೆ ಸರಿಯಾಗಿ ನಾವು ಪ್ರಗತಿಯ ಹಾದಿಯಲ್ಲಿರಬೇಕಿದೆ’ ಎಂಬುದಾಗಿ ದಕ್ಷಿಣ ಆಫ್ರಿಕಾ ಆಯ್ಕೆ ಸಮಿತಿ ವಕ್ತಾರ ಲಿಂಡ ಝೊಂಡಿ ಹೇಳಿದ್ದಾರೆ. ಪ್ರಧಾನಿ ಅಧ್ಯಕ್ಷರ ಬಳಗದ ವಿರುದ್ಧ ಅ. 31ರಂದು ಅಭ್ಯಾಸ ಪಂದ್ಯವಾಡುವ ಮೂಲಕ ದಕ್ಷಿಣ ಆಫ್ರಿಕಾ ತನ್ನ ಆಸ್ಟ್ರೇಲಿಯ ಪ್ರವಾಸ ಆರಂಭಿಸಲಿದೆ. ಸರಣಿಯಲ್ಲಿ 3 ಏಕದಿನ ಹಾಗೂ ಒಂದು ಟಿ20 ಪಂದ್ಯವಿದೆ.
ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್ (ನಾಯಕ), ಫರ್ಹಾನ್ ಬೆಹದೀನ್, ಕ್ವಿಂಟನ್ ಡಿ ಕಾಕ್, ರೀಝ ಹೆಂಡ್ರಿಕ್ಸ್, ಇಮ್ರಾನ್ ತಾಹಿರ್, ಹೆನ್ರಿಚ್ ಕ್ಲಾಸೆನ್, ಐಡನ್ ಮಾರ್ಕ್‌ರಮ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಲುಂಗಿಸಾನಿ ಎನ್‌ಗಿಡಿ, ಆ್ಯಂಡಿಲ್ ಫೆಲುಕ್ವಾಯೊ, ಡ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೈಜ್ ಶಂಸಿ, ಡೇಲ್ ಸ್ಟೇನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.