ಹೊರ ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಸಿ
Team Udayavani, Oct 18, 2018, 12:15 PM IST
ಬಸವನಬಾಗೇವಾಡಿ: ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಹೊರ ಗುತ್ತಿಗೆ ಆದಾರದ ಮೇಲೆ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ವೇತನ ನೀಡುವಲ್ಲಿ ವಿಳಂಬ ಮಾಡಬೇಡಿ, ಅವರಿಗೆ ಸಮರ್ಪಕ ವೇತನ ನೀಡಬೇಕು ಎಂದು ಪುರಸಭೆ ಸದಸ್ಯ ಪರಶುರಾಮ ಅಡಗಿಮನಿ ಹೇಳಿದರು.
ಬುಧವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಜನತೆಗೆ ನಿತ್ಯ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಕಾರ್ಮಿಕರ ವೇತನ ಸೇರಿದಂತೆ ಪಟ್ಟಣದ ಸಾರ್ವಜನಿಕರಿಗೆ ಅಗತ್ಯವಿರುವ ಕೆಲಸ ಕಾರ್ಯಗಳಿಗೆ ಅಡಚನೆಯಾಗದ ರೀತಿಯಲ್ಲಿ ಮುಖ್ಯಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಪತ್ರಕರ್ತರಿಗೆ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡುವ ಸಲುವಾಗಿ ಪತ್ರಕರ್ತರು ಹಲವಾರು ಬಾರಿ ಪುರಸಭೆಗೆ ನಿವೇಶನ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪತ್ರಕರ್ತರಿಗೆ ನಿವೇಶನ ನೀಡುವಲ್ಲಿ ಯಾಕೆ ವಿಳಂಬ ನೀತಿ ಅನುಸರಿಸುತ್ತಿದ್ದಿರಿ ಎಂದು ಕೇಳಿದಾಗ ಮುಖ್ಯಾಧಿಕಾರಿ ಬಿ.ಎ. ಸೌದಾಗಾರ ಅವರು ಈಗಾಗಲೇ ಅವರ ಮನವಿಗೆ ಅನುಗುಣವಾಗಿ ತೆಲಗಿ ರಸ್ತೆಯ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸುಮಾರು 4ರಿಂದ 5 ಗುಂಟೆ ಜಾಗ ನೀಡಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಅವರ ಸಂಘಕ್ಕೆ ಆ ಜಾಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು. ಪಟ್ಟಣದಲ್ಲಿ ನೈರ್ಮಲಿಕರಣದ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಸುವ ಟೆಂಟರ್ ಅವಧಿಯನ್ನು
ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಆಗ ಪುರಸಭೆ ಹಿರಿಯ ಸದಸ್ಯ ನೀಲು ನಾಯಕ ಮಾತನಾಡಿ, ಪಟ್ಟಣದಲ್ಲಿ ದಿನನಿತ್ಯ ನೈರ್ಮಲಿ ಕರಣದ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಉತ್ತಮವಾಗಿರಬೇಕು. ಅವರ ಆರೋಗ್ಯದ ಬಗ್ಗೆ ಪುರಸಭೆ ಹೆಚ್ಚು ಗಮನ ಹರಿಸಬೇಕು. ಅವರಿಗೆ ಬೆಳಗಿನ ಉಪಹಾರ ಪೂರೈಸುವ ಟೆಂಟರ್ ಅವಧಿ ಮುಂದುವರಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಇಂದಿನ ಸಭೆ ನಡುವಳಿಕೆಗಳನ್ನು ಓದಿ ದೃಢಪಡಿಸುವುದು, ಹಿಂದಿನ ತಿಂಗಳ ಜಮಾ ಕುರಿತು ಚರ್ಚೆ ಹಾಗೂ ಜಾಹೀರಾತು ಬಿಲ್ ಪಾವತಿಸುವಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದರ ಜೊತೆಯಲ್ಲೇ ಇನ್ನಿತರ ಕೆಲಸ ಕಾರ್ಯಗಳ ಬಗ್ಗೆಯೂ ಕೂಡಾ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು. ಸಭೆ ಅಧ್ಯಕ್ಷಯೆನ್ನು ಅಧ್ಯಕ್ಷೆ ಫರಿಜಾನ್ ಚೌಧರಿ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀದೇವಿ ಲಮಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತು ಉಕ್ಕಲಿ ಸೇರಿದಂತೆ ಅನೇಕರು ಇದ್ದರು.
ಪುರಸಭೆ ಮುಖ್ಯಾಧಿಕಾರಿ ಬಿ.ಎಸ್. ಸೌದಾಗರ ಸ್ವಾಗತಿಸಿದರು. ಸಭೆಯ ಸೂಚನಾ ಪತ್ರವನ್ನು ಹಾಗೂ ವರದಿ ವಾಚನವನ್ನು ಹಿರಿಯ ಆರೋಗ್ಯ ನಿರೀಕ್ಷಕ ಸಿದ್ದಾರ್ಥ ಕಳ್ಳಿಮನಿ ಓದಿದರು. ವಿಲಾಶ ರಾಠೊಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Pakistan: ಶಿಯಾ-ಸುನ್ನಿ ನಡುವೆ ಭುಗಿಲೆದ್ದ ಹಿಂ*ಸಾಚಾರ, ಗುಂಡಿನ ದಾಳಿ; 124 ಮಂದಿ ಸಾವು
Naxal Encounter: ತೆಲಂಗಾಣದಲ್ಲಿ ಎನ್‌ಕೌಂಟರ್.. 7 ಮಾವೋವಾದಿಗಳ ಹತ್ಯೆ, AK 47 ರೈಫಲ್ ವಶ
Udupi: ಗೀತಾರ್ಥ ಚಿಂತನೆ 110: ಸಾವಿನ ಕಡೆಯ ಪಯಣ ಹುಟ್ಟಿದಂದಿನಿಂದ…
Shirva: ಬೆಳ್ಳೆ ಬಾಸ್ಕರ ಪೂಜಾರಿ ನಿಧನ
ENGvsNZ: ಸಚಿನ್ ತೆಂಡೂಲ್ಕರ್ ಟೆಸ್ಟ್ ದಾಖಲೆ ಮುರಿದ ಜೋ ರೂಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.