ಒಳಚರಂಡಿ ಅವ್ಯವಸ್ಥೆ ವಿರುದ್ಧ ಆಕ್ರೋಶ
Team Udayavani, Oct 18, 2018, 3:23 PM IST
ಭಟ್ಕಳ: ನಗರದ ವೀರ ವಿಠ್ಠಲ ರಸ್ತೆ ನಿವಾಸಿಗಳು ಒಳಚರಂಡಿ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಶೀಘ್ರದಲ್ಲಿ ಸರಿಪಡಿಸಿಕೊಡಬೇಕು ಇಲ್ಲವಾದಲ್ಲಿ ಚರಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗುವುದು ಎಂದೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಗರದ ಒಡಯರಮಠ, ವಿ.ವಿ.ರಸ್ತೆಗಳ ಒಳಚರಂಡಿ ವ್ಯವಸ್ಥೆಯು ಹದಗೆಟ್ಟಿದ್ದು ಬಹಳ ವರ್ಷಗಳಿಂದ ಪುರಸಭೆಗೆ ನಾವು ಮನವಿ ಮಾಡುತ್ತಾ ಬಂದರೂ ಇನ್ನೂ ತನಕ ನಮ್ಮ ಮನವಿಗೆ ಸ್ಪಂ ದಿಸಿಲ್ಲ. ಈ ಹಿಂದೆ ನಮಗೆ ಈ ಭಾಗದಲ್ಲಿ ಫೈಬರ್ ಚೇಂಬರ್ ಮಾಡಿ ನಮ್ಮ ಸಂಕಷ್ಟವನ್ನು ಪರಿಹರಿಸುವ ಭರವಸೆ ಕೂಡಾ ಹಳ್ಳ ಹಿಡಿದಿದ್ದು ಇನ್ನು ನಮಗೆ ಪ್ರತಿಭಟನೆಯೊಂದೇ ಮಾರ್ಗವಾಗಿದೆ ಎಂದೂ ಅವರು ಹೇಳಿದ್ದಾರೆ.
ಈಗಾಗಲೇ ನಮ್ಮ ಬಾವಿಗಳಿಗೆ ಒಳಚರಂಡಿ ನೀರು ನುಗ್ಗಿ ಕುಡಿಯುವ ನೀರಿಗೂ ನಾವು ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಬಾವಿಗಳಲ್ಲಿ ಹತ್ತು ಅಡಿಗೇ ನೀರು ಬರುತ್ತಿದ್ದರೆ ಒಳಚರಂಡಿ ಚೇಂಬರ್‌ಗಳು ಇಪ್ಪತ್ತು ಅಡಿಗಳಷ್ಟು ಆಳವಾಗಿದೆ. ಹೀಗಿರುವಲ್ಲಿ ಚೇಂಬರ್‌ನಿಂದ ಒಳಚರಂಡಿ ನೀರು ಸೋರಿಕೆಯಾಗಿ ಬಾವಿಯ ನೀರು ಹೊಲಸಾಗುತ್ತದೆ. ಈ ಭಾಗದ ಎಲ್ಲಾ ಬಾವಿಗಳ ನೀರು ಕೆಟ್ಟು ಹೋಗಿದ್ದು ನಮಗೆ ರೋಗ ಹರಡುವ ಭೀತಿ ಕಾಡುತ್ತಿದೆ ಎನ್ನುವುದು ಈ ಭಾಗದ ಜನರ ಆಕ್ರೋಶವಾಗಿದೆ.
ಪುರಸಭೆ ಕಾಮಗಾರಿ ಸಲುವಾಗಿ ಈ ಭಾಗಕ್ಕೆ ಭೇಟಿ ನೀಡಿದ ಅಧಿ ಕಾರಿಗಳಿಗೆ ಮುತ್ತಿಗೆ ಹಾಕಿದ ಜನ ನಮ್ಮ ಸಂಕಷ್ಟ ಪರಿಹರಿಸುವುದಕ್ಕೆ ಗಡುವು ನೀಡಿ ಎಂದು ಪಟ್ಟು ಹಿಡಿದರು. ರಾಘವೇಂದ್ರ ದೇವಡಿಗ ಮಾತನಾಡಿ, ಪುರಸಭೆಯಿಂದ ಈ ಭಾಗದಲ್ಲಿ ಯಾವುದೇ ಕಾಮಗಾರಿ ನಡೆಸದೇ ನಿರ್ಲಕ್ಷಿಸಲಾಗಿದೆ. ಯುಜಿಡಿ ಸಮಸ್ಯೆ ಕುರಿತು ನಾವು ಮಾಡಿದ ಮನವಿಗಳು ಹಳ್ಳ ಹಿಡಿಯುತ್ತಿದ್ದು ಪ್ರತಿಭಟನೆ ಅನಿವಾರ್ಯವಾಗಿದೆ. ನಮ್ಮ ವಾರ್ಡ್ ಸದಸ್ಯರಾಗಲೀ, ಪುರಸಭೆ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪುರಸಭೆ ನಮ್ಮ ವಾರ್ಡ್‌ನ್ನು ನಿರ್ಲಕ್ಷ ಮಾಡಿದ್ದು ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ಈ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳೂ ಕೂಡಾ ಆಗುತ್ತಿಲ್ಲ. ಇದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.
.ಮಹೇಶ ದೇವಡಿಗ, ಸ್ಥಳೀಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.