ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿನ್ನು ರೋಗಪತ್ತೆ ಪರೀಕ್ಷೆಗಳು ಉಚಿತ
Team Udayavani, Oct 20, 2018, 6:50 AM IST
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ವಿವಿಧ 58 ಬಗೆಯ “ರೋಗಪತ್ತೆ ಪರೀಕ್ಷೆ ಸೌಲಭ್ಯ’ ಉಚಿತವಾಗಿ ಲಭ್ಯವಾಗುತ್ತಿವೆ. ಈ ಹಿಂದೆ ಕೇವಲ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯವನ್ನು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೂ ವಿಸ್ತರಿಸಲಾಗಿದೆ.
ಈ ಹಿಂದೆ ಜಿಲ್ಲಾಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬ ಸದಸ್ಯರಿಗೆ ಒಂದಿಷ್ಟು ರೋಗ ಪತ್ತೆ ಪರೀಕ್ಷೆಗಳು ಉಚಿತವಾಗಿದ್ದವು. ಇನ್ನು ಕೆಲವು ಪರೀಕ್ಷೆಗಳಿಗೆ ಶೇ.50ರಷ್ಟು ಶುಲ್ಕ ಪಾವತಿಸಬೇಕಿತ್ತು. ಪ್ರಸ್ತುತ ಅದರ ವ್ಯಾಪ್ತಿಯನ್ನು 2018 -19 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ “ಉಚಿತ ರೋಗಪತ್ತೆ ಪರೀಕ್ಷೆಗಳು’ ಎಂಬ ಕಾರ್ಯಕ್ರಮದಡಿ ಎಲ್ಲಾ ವರ್ಗದ ಜನರಿಗೂ ಸಂಪೂರ್ಣ ಉಚಿತ ರೋಗಪತ್ತೆ ಪರೀಕ್ಷೆ ಸೇವೆ ನೀಡುವಂತೆ ವಿಸ್ತರಣೆ ಮಾಡಿ ರಾಜ್ಯ ಆರೋಗ್ಯ ಇಲಾಖೆಯು ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಯೋಜನೆಯ ಪಟ್ಟಿಯಲ್ಲಿರುವ 58 ರೋಗಪತ್ತೆ ಪರೀಕ್ಷೆಗಳಲ್ಲಿ ತಮ್ಮಲ್ಲಿ ಲಭ್ಯವಿರುವ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಬೇಕಿದೆ. ಕಳೆದ ವಾರದ ಮಧ್ಯಭಾಗದಿಂದಲೇ ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಆದೇಶ ಪಾಲನೆಯಾಗುತ್ತಿದ್ದು, ಈಗಾಗಲೇ ರೋಗಿಗಳು ಉಚಿತ ಸೇವೆಯನ್ನು ಪಡೆಯುತ್ತಿದ್ದಾರೆ.
ಯಾವ್ಯಾವ ಪರೀಕ್ಷೆಗಳು ಉಚಿತ:
ದುಬಾರಿ ಶುಲ್ಕದ ಎಂಆರ್‌ಐ, ಸಿಟಿ ಸ್ಕ್ಯಾನ್, ಥೈರಾಡ್ ಪರೀಕ್ಷೆ ಸೇರಿದಂತೆ ಹೃದ್ರೋಗ ಪರೀಕ್ಷೆಗಳಾದ ಇಸಿಜಿ ಹಾಗೂ ಎಕೋ, ಯಕೃತ್, ಕಿಡ್ನಿ ತಪಾಸಣಾ ಪರೀಕ್ಷೆ, ಕ್ಷ-ಕಿರಣ, ರಕ್ತ ಗುಂಪಿನ ಪರೀಕ್ಷೆಯಿಂದ ಹಿಡಿದು ಎಲ್ಲಾ ಬಗೆಯ ರಕ್ತ ಪರೀಕ್ಷೆಗಳು, ಮೂತ್ರ ಪರೀಕ್ಷೆ, ಮಲೇರಿಯಾ, ಡೆಂಗ್ಯೂ ಪರೀಕ್ಷೆಗಳು, ಅಲ್ಟಾಸೌಂಟ್ ಸ್ಕ್ಯಾನಿಂಗ್, ಕೊಬ್ಬಿನಾಂಶ ಪರೀಕ್ಷೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಲ್ಲಾ 58 ಪರೀಕ್ಷೆಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. ಈಗಾಗಲೇ ಈ ಉಚಿತ ಪರೀಕ್ಷೆ ಸೇವೆಯನ್ನು ನಮ್ಮ ಆಸ್ಪತ್ರೆಯಲ್ಲಿ ಅ.08 ರಿಂದಲೇ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ಭಾನುಮೂರ್ತಿ ತಿಳಿಸಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಂಯುಕ್ತಾಶ್ರಯದಲ್ಲಿ ಈ ಯೋಚನೆ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರದ 42 ಜಿಲ್ಲಾ ಮಟ್ಟದ ಆಸ್ಪತ್ರೆಗಳು, 146 ತಾಲೂಕು ಮಟ್ಟದ ಆಸ್ಪತ್ರೆಗಳು, 2508 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 204 ಸಾಮುದಾಯ ಆರೋಗ್ಯ ಕೇಂದ್ರಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. ಪ್ರಸ್ತುತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ 58 ರೋಗಗಳ ಪರೀಕ್ಷೆಗೆ ಪ್ರಯೋಗಾಲಯಗಳ ಸೌಲಭ್ಯವಿಲ್ಲ. ಆದರೆ, ಆಯಾ ಹಂತದ ಆಸ್ಪತ್ರೆಗಳಲ್ಲಿ ಯಾವ್ಯಾವ ಪರೀಕ್ಷೆಗಳನ್ನು ಮಾಡಲು ಸೌಲಭ್ಯವಿದೆಯೋ ಅವುಗಳೆಲ್ಲವನ್ನು ಉಚಿತವಾಗಿ ಮಾಡುವಂತೆ ಆದೇಶ ನೀಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಈ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಾಯಕವಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ರೋಗಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡುವಂತೆ ಕಳೆದ ವಾರ ಆದೇಶ ನೀಡಲಾಗಿದೆ.
– ಸ್ವಾತಂತ್ರಕುಮಾರ್ ಬಣಕಾರ್, ಉಪನಿರ್ದೇಶಕರು. ರಕ್ತಕೋಶ.
ಈ ಕಾರ್ಯಕ್ರಮದಡಿ ರಕ್ತದ ಗುಂಪಿನ ಪರೀಕ್ಷೆಯಿಂದ ಹಿಡಿದು ಸಿಟಿ, ಎಂಆರ್‌ಐ ಸ್ಕ್ಯಾನ್‌ವರೆಗೂ ಎಲ್ಲಾ ವಿಧದ ಪರೀಕ್ಷೆಗಳು ಉಚಿತವಾಗಿ ಮಾಡಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಗಳಲ್ಲಿ ಯಾವ ಯಾವ ರೋಗ ಪತ್ತೆಗೆ ಪ್ರಯೋಗಾಲಯಗಳ ಸೌಲಭ್ಯವಿದಯೋ ಅಲ್ಲಿ ಉಚಿತ ಸೇವೆ ಸಿಗಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ 58 ರೋಗಗಳ ಪ್ರಯೋಗಾಲಯಗಳನ್ನು ಜಿಲ್ಲಾಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ.
– ರೇಣುಕಾ, ಉಪನಿರ್ದೇಶಕರು ಉಚಿತ ರೋಗ ಪತ್ತೆ ಪರೀಕ್ಷೆಗಳ ಕಾರ್ಯಕ್ರಮ.
ಉಚಿತ ಯೋಜನೆಯ ಮಾಹಿತಿಯೇ ಜನಕ್ಕಿಲ್ಲ.
ಕಳೆದ ವಾರವೇ ಈ ಉಚಿತ ರೋಗಪತ್ತೆ ಕಾರ್ಯಕ್ರಮಕ್ಕೆ ಇಲಾಖೆ ಆದೇಶಿಸಿದ್ದರೂ ಕೂಡ ಈ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಇಲ್ಲ. ಯಾವುದೇ ಮಾಹಿತಿ ಫಲಕಗಳಾಗಲಿ ಅಥವಾ ಸುತ್ತೋಲೆಗಳಾಗಲಿ ಆಸ್ಪತ್ರೆಗಳಲ್ಲಿ ಕಾಣುತ್ತಿಲ್ಲ. ಹೀಗಾಗಿ, ಅನಗತ್ಯ ಶುಲ್ಕ ವಸೂಲಿಯಾಗುವ ಸಾಧ್ಯತೆ ಅಥವಾ ಹೇಗಿದ್ದರೂ ಹಣ ನೀಡಬೇಕು ಎಂದು ಖಾಸಗಿ ಪ್ರಯೋಗಾಲಯ ಮೊರೆಹೋಗುತ್ತಿದ್ದಾರೆ. ಆದ್ದರಿಂದ ಇಲಾಖೆಯೂ ಈ ಜನಸ್ನೇಹಿ ಕಾರ್ಯಕ್ರಮದ ಮಾಹಿತಿಯನ್ನು ಜನರಿಗೆ ತಿಳಿಸುವತ್ತ ಕ್ರಮವಹಿಸಬೇಕಿದೆ.
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.