ಡಬ್ಲ್ಯುಟಿಎ ಫೈನಲ್ಸ್ನಿಂದ ಹಾಲೆಪ್ ಹೊರಕ್ಕೆ
Team Udayavani, Oct 20, 2018, 8:48 AM IST
ದುಬಾೖ: ಬೆನ್ನು ನೋವಿನಿಂದ ಬಳಲುತ್ತಿರುವ ಅಗ್ರ ರ್ಯಾಂಕಿನ ಸಿಮೋನಾ ಹಾಲೆಪ್ ಅವರು ಸಿಂಗಾಪುರದಲ್ಲಿ ನಡೆಯಲಿರುವ ವರ್ಷಾಂತ್ಯರದ ಡಬ್ಲ್ಯುಟಿಎ ಫೈನಲ್ಸ್ ಕೂಟದಿಂದ ಹಿಂದೆ ಸರಿದಿದ್ದಾರೆ. ನೋವಿನ ಸಮಸ್ಯೆಯಿಂದಾಗಿ ಹಾಲೆಪ್ ಕಳೆದ ತಿಂಗಳು ನಡೆದ ಚೀನಾ ಓಪನ್ ಆರಂಭವಾಗಿ 31 ನಿಮಿಷ ಕಳೆಯುವಷ್ಟರಲ್ಲಿ ಕೂಟ ತ್ಯಜಿಸಿದ್ದರು. ಮಾತ್ರವಲ್ಲದೇ ಈ ವಾರ ನಡೆಯುವ ಕ್ರೆಮ್ಲಿನ್ ಕಪ್ನಲ್ಲಿ ಭಾಗವಹಿಸದಿರಲು ನಿರ್ಧರಿಸಿದರು. ವರ್ಷಾಂತ್ಯದ ಡಬ್ಲ್ಯುಟಿಎ ಫೈನಲ್ಸ್ನಲ್ಲಿ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದ 27ರ ಹರೆಯದ ಹಾಲೆಪ್ ಇದೀಗ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಕೂಟದಿಂದ ಹಿಂದೆ ಸರಿಯುವ ಭಾರವಾದ ನಿರ್ಧಾರ ತಾಳಿದ್ದಾರೆ.
ಹಾಲೆಪ್ ಹಿಂದೆ ಸರಿದ ಕಾರಣ ಹಾಲೆಂಡಿನ ಕಿಕಿ ಬರ್ಟೆನ್ಸ್ ಅವರು ಎಂಟನೇ ಸ್ಥಾನಿಯಾಗಿ ಡಬ್ಲ್ಯುಟಿಎ ಫೈನಲ್ಸ್ನಲ್ಲಿ ಆಡುವ ಅರ್ಹತೆ ಗಳಿಸಿದ್ದಾರೆ.ಒಟ್ಟಾರೆ ಈ ವರ್ಷ ಮೂರು ಪ್ರಶಸ್ತಿ ಗೆದ್ದಿರುವ ಅವರು ವರ್ಷಾಂತ್ಯದಲ್ಲಿ ನಂಬರ್ ವನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.