ಕಾಂಗ್ರೆಸ್‌ನ ಸರ್ವ ಧರ್ಮೀಯರಿಂದ ನವರಾತ್ರಿ
Team Udayavani, Oct 20, 2018, 10:09 AM IST
ಸುರತ್ಕಲ್: ಈ ಬಾರಿಯ ನವರಾತ್ರಿ ಉತ್ಸವ ಸೌಹರ್ಧ ವಾತಾವರಣದಲ್ಲಿ ನಡೆಯುತ್ತಿದ್ದು, ಸುರತ್ಕಲ್ ಮಹಿಳಾ ಕಾಂಗ್ರೆಸ್ ಘಟಕ ಕೂಡ ಇದಕ್ಕೆ ಹೊರತಾಗಿಲ್ಲ. ಸರ್ವರಿಗೂ ಒಳಿತಾಗಲಿ ಎಂದು ಪಕ್ಷದಲ್ಲಿರುವ ಸರ್ವ ಧರ್ಮಿಯರೂ ಒಟ್ಟು ಸೇರಿ ಶುಕ್ರವಾರ ನವರಾತ್ರಿ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಈ ಬಾರಿ ಸರ್ವ ಧರ್ಮೀಯರ ಹಬ್ಬ ಹರಿದಿನಗಳನ್ನು ಒಗ್ಗಟ್ಟಾಗಿ ಆಚರಿಸುವ ಮೂಲಕ ಸೌಹಾರ್ದ ಮೆರೆದಿದೆ. ಅಧ್ಯಕ್ಷೆ ಶಕುಂತಳಾ ಕಾಮತ್ ನೇತೃತ್ವದಲ್ಲಿ ಈ ಬಾರಿ ವರಮಹಾಲಕ್ಷ್ಮೀ ಪೂಜೆಯಿಂದ ಹಿಡಿದು ವಿವಿಧ ಹಬ್ಬಗಳನ್ನು ಸಂತಸದಿಂದ ಸರ್ವರೂ ಆಚರಿಸಿ ಗಮನ ಸೆಳೆದಿದ್ದಾರೆ. ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಹಾಗೂ ವಾರ್ಡ್ ಸಂಖ್ಯೆ 6ರ ಅಧ್ಯಕ್ಷೆ ಜಮೀಲಾ ಬಾನು ಕಾನಾದ ಗುರು ಸೇವಾ ಭಜನ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಿದ್ದರು. ಹಿಂದೂಗಳು ಭಜನೆ, ಶ್ರೀದೇವಿಯ ಸ್ತೋತ್ರ ಪಠಣದಲ್ಲಿ ಪಾಲ್ಗೊಂಡರು. ಇನ್ನು ಕ್ರಿಶಿಯನ್ ಸಮುದಾಯದ ಸುನಿತಾ ಡಿ’ಸೋಜ ಪೂಜಾ ಕೈಂಕರ್ಯಗಳಲ್ಲಿ ಸಹಾಯ ಹಸ್ತ ಚಾಚಿಸಿದರು. ಸಂಜೆ ನಡೆದ ಪೂಜೆ ಬಳಿಕ ಮುತ್ತೈದೆಯರಿಗೆ ಬಾಗಿನ ಅರ್ಪಿಸಿ ಆಶೀರ್ವಾದ ಪಡೆಯಲಾಯಿತು.
ಹಿಂದೂಗಳು ಶ್ರೀ ದೇವಿಯ ಪೂಜೆ ನೆರವೇರಿಸಿ ಸರ್ವೇ ಜನ ಸುಖೀನೋ ಭವಂತು ಎನ್ನುವ ನಿಟ್ಟಿನಲ್ಲಿ ಪೂಜಿಸಿ ಪ್ರಾರ್ಥಿಸಿದ್ದೇವೆ ಎಂದರು. ಇದೇ ಸಂದರ್ಭ ಪೂಜೆಯ ಮಹತ್ವವನ್ನು ವಿವರಿಸಿದರು. ಜಮೀಲಾ, ಅರ್ಚನಾ ಆಚಾರ್ಯ, ಇಂದಿರಾ, ಭಾರತಿ, ಅಮಿತಾ, ಸುಷ್ಮಾ, ಫಾತೀಮಾ, ಸುನೀತಾ ಡಿ’ಸೋಜಾ, ಶರೀಫ್, ದಿಲೀಪ್ ಸ್ಥಳೀಯರು ಉಪಸ್ಥಿತರಿದ್ದರು.
ಸೌಹಾರ್ದ ಪೂಜೆ
ಶಕುಂತಳಾ ಕಾಮತ್ ಅವರು, ನವರಾತ್ರಿ ದುರ್ಗೆಯ ಶಕ್ತಿಯನ್ನು ಆರಾಧಿ ಸಲಾಗುತ್ತದೆ. ನವದಿನಗಳಲ್ಲಿ ದುರ್ಗೆಯನ್ನು ವಿವಿಧ ಅವತಾರಗಳಲ್ಲಿ ಪೂಜಿಸುವುದು ವಾಡಿಕೆ. ಈ ಬಾರಿ ನಾವು ಸೌಹಾರ್ದಯುತವಾಗಿ ಎಲ್ಲ ಕಡೆ ಪೂಜೆ ನೆರವೇರಿಸಿದ್ದೇವೆ. ಕಾನಾ ಗುರು ಸೇವಾ ಮಂದಿರಲ್ಲಿ ಜಮೀಲಾ ಬಾನು ಆಯೋಜಿಸಿದ್ದಾರೆ. ಸುರತ್ಕಲ್‌ನಲ್ಲಿ ಸುನೀತಾ ಡಿ’ಸೋಜಾ ಆಯೋಜನೆ ಮಾಡಿದ್ದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್ ಹೆಸರಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.