ಸೋನುವಿನ ನಿರಂತರ ಸಿನಿಯಾನ
Team Udayavani, Oct 21, 2018, 6:00 AM IST
ದುನಿಯಾ ಸೂರಿ ನಿರ್ದೇಶನದ ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಲುವೆ ನಟಿ ಸೋನು ಮೊದಲ ಚಿತ್ರದಲ್ಲೇ ತನ್ನ ಅಭಿನಯದ ಮೂಲದ ಗಮನ ಸೆಳೆದ ಚೆಲುವೆ. ಮೊದಲ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣದೇ ಹೋದರೂ ಸೋನು ಅಭಿನಯದ ಬಗ್ಗೆ ಚಿತ್ರರಂಗದಿಂದ, ಪ್ರೇಕ್ಷಕ ವರ್ಗದಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಸೋನು ಗೌಡ ಕನ್ನಡ ಚಿತ್ರರಂಗದಲ್ಲಿ ಇನ್ನೇನು ಬೇಡಿಕೆಯ ನಟಿಯಾಗುತ್ತಾರೆ ಎಂದು ಹಲವರು ಭಾವಿಸಿದ್ದರೂ, ಅದೇಕೊ ನಿರೀಕ್ಷೆ ಯಂತೆ ಅವಕಾಶಗಳು, ಸಿನಿಮಾಗಳು ಈ ನಟಿಗೆ ಸಿಗಲಿಲ್ಲ. ಹಾಗಂತ ಸೋನು ಸುಮ್ಮನೆ ಕೂರಲಿಲ್ಲ. ತಮಗೆ ಇಷ್ಟವಾದ ಸಿನಿಮಾಗಳನ್ನು ಮಾಡುತ್ತ ಬಿಝಿಯಾಗುತ್ತಲೇ ಹೋದರು. ಈ ವರ್ಷ ತೆರೆಗೆ ಬಂದ ಗುಳ್ಟು ಮತ್ತು ಕಾನೂರಾಯಣ ಎರಡೂ ಚಿತ್ರಗಳಲ್ಲೂ ಸೋನು ಅವರ ಪ್ರತಿಭಾ ಪ್ರದರ್ಶನಕ್ಕೆ ಸಾಕಷ್ಟು ಅವಕಾಶವಿದ್ದರಿಂದ, ಸೋನು ಎರಡೂ ಚಿತ್ರಗಳಲ್ಲೂ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಈ ಎರಡೂ ಚಿತ್ರಗಳೂ ಪ್ರೇಕ್ಷಕರು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡವು. ಸೋನು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಅದಾದ ಬಳಿಕ ಸೋನುವಿಗೆ ಕನ್ನಡದಲ್ಲಿ ಒಂದರ ಹಿಂದೊಂದು ಚಿತ್ರಗಳು ಸಿಗುತ್ತಿವೆ.
ಸದ್ಯ ಸೋನು ಗೌಡ ಮತ್ತು ನಟ ದಿಗಂತ್ ಜೋಡಿಯಾಗಿ ಅಭಿನಯಿಸಿರುವ ಫಾರ್ಚೂನರ್ ಚಿತ್ರ ಪ್ರಮೋಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ತಯಾರಿಯಲ್ಲಿದೆ. ಇನ್ನು ಸೋನು ಅಭಿನಯಿಸುತ್ತಿರುವ ಶಾಲಿನಿ ಐಪಿಎಸ್, ನೀನಾಸಂ ಸತೀಶ್ ಜೊತೆ ಚಂಬಲ್, ಉಪೇಂದ್ರ ಅವರೊಂದಿಗಿನ ಐ ಲವ್ ಯು ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಅಲ್ಲದೆ ಸೋನು ಗೌಡ ಅಭಿನಯಿಸಿರುವ ತಮಿಳಿನ ಎಂಗಾ ಕಾಟ್ಟುಲ ಮಾಝೈ ಆಲ್ಲುಕ್ಕು ಪಾತಿ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಇವುಗಳ ನಡುವೆ ಕಾಲೇಜ್, ರೆಡ್, ರಾಮನ ಸವಾರಿ ಸೇರಿದಂತೆ ಇನ್ನೂ ಹೆಸರು ಅಂತಿಮಗೊಳ್ಳದ ಎರಡು-ಮೂರು ಚಿತ್ರಗಳಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಹತ್ತು ವರ್ಷಗಳ ಸಿನಿಯಾನದ ಹಾದಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಸೋನು ಗೌಡ ಸಿಕ್ಕ ಪಾತ್ರಗಳಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ.
ಸೋನು ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ನಟಿಸಿದ್ದಾರೆ. ಮಲಯಾಳ ಮತ್ತು ತಮಿಳು ಚಿತ್ರರಂಗಗಳತ್ತ ಮುಖ ಮಾಡಿದ್ದ ಸೋನು ಮುಮ್ಮುಟ್ಟಿ ಅಭಿನಯದ ಬೆಸ್ಟ್ ಆ್ಯಕ್ಟರ್ ಡಬ್ಬಲ್ಸ್, ಒನ್ ಬೈ ಟು ಮತ್ತು ತಮಿಳಿನ ಆನಮೈ ತಾವರೈಲ್ ಅಮರ, ನರತನ್, ಕಾವಾಲೈ ವೇಂದಂ ಹೀಗೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.