ಕೆನಡಾ ಗ್ರಂಥಾಲಯಗಳು ಮಾದರಿಯಾಗಲಿ 


Team Udayavani, Oct 21, 2018, 1:13 PM IST

21-october-11.gif

ಭಾರತದಲ್ಲಿ ಲಕ್ಷಾಂತರ ಗ್ರಂಥಾಲಯಗಳಿವೆ. ಗ್ರಾಮೀಣ ಭಾಗದಿಂದ ಹಿಡಿದೂ, ಪ್ರಮುಖ ನಗರಗಳಲ್ಲಿ ಕೂಡ ಸರಕಾರದಿಂದ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳ ಸ್ಥಿತಿ ಅಯೋಮಯವಾಗಿರವುಂತೂ ಇತ್ತೀಚಿನ ಸಂಗತಿ. ಮೂಲ ಸೌಲಭ್ಯ, ಪುಸ್ತಕ ಹಾಗೂ ಸಿಬಂದಿ ಕೊರತೆಯನ್ನು ಎದುರಿಸುತ್ತಿರುವುದು ಒಂದು ಕಥೆಯಾದರೆ, ಆ ಗ್ರಂಥಾಲಯಗಳು ಕೇವಲ ಗಂಭೀರವಾಗಿ ಪುಸ್ತಕ ಓದಲು ಮಾತ್ರ ಬಳಕೆ ಮಾಡಲಾಗುತ್ತದೆ ಎಂಬುದು ಇದೊಂದು ಕಥೆ. ಗ್ರಂಥಾಲಯವೊಂದನ್ನು ಇನ್ನು ವಿಭಿನ್ನ, ಮಾದರಿಯಾಗಿ ಒಂದೇ ಸೂರಿನಡಿ ಅನೇಕ ರೀತಿಯಲ್ಲಿ ಸಾರ್ವಜನಿಕರಿಗೆ ನೆರವಾಗಬಹುದು ಎಂಬುದನ್ನು ನಾವು ಕೆನಡಾದ ಟೊರೆಂಟೋ ನಗರದಲ್ಲಿ ನಿರ್ಮಿಸಲಾಗಿರುವ ಗ್ರಂಥಾಲಯವನ್ನು ಮಾದರಿಯಾಗಿ ನೋಡಬಹುದಾಗಿದೆ.

ಟೊರೆಂಟೋದ ಮಾದರಿ
ಗ್ರಂಥಾಲಯ ಕೆನಡಾದ ಟೊರೆಂಟೋದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ಹಲವು ಕಾರಣಗಳಿಗಾಗಿ ಇಡೀ ಜಗತ್ತಿಗೆ ಮಾದರಿಯಾಗುವ ಗ್ರಂಥಾಲಯವಾಗಿದೆ. ಇದೂ ಕೇವಲ ಪುಸ್ತಕ ಓದುವ ಗ್ರಂಥಾಲಯವಾಗದೇ ಹಲವು ರೀತಿಯ ಕಲಿಕೆ, ಕೌಶಲಾಭಿವೃದ್ಧಿಯ ತಾಣವಾಗಿದೆ.

ಗ್ರಂಥಾಲಯದಲ್ಲಿ ಏನೇನಿದೆ?
ಟೋರೆಂಟೋದ ಮಾದರಿ ಗ್ರಂಥಾಲಯದಲ್ಲಿ ಒಂದೇ ಸೂರಿನಡಿ ಅನೇಕ ಆವಶ್ಯಕತೆಗಳನ್ನು ಪಡೆಯಬಹುದಾಗಿದ್ದು, ಈ ಸಾರ್ವಜನಿಕ ಗ್ರಂಥಾಲಯದಲ್ಲಿ 120 ದೇಶಗಳ ಮಿಕ್ಕೂ ಸುದ್ದಿ ಪತ್ರಿಕೆಗಳು, ಜರ್ನಲ್‌ಗ‌ಳು, ಮಿಲಿಯನ್‌ ಗಟ್ಟಲೇ ಪುಸ್ತಕಗಳು ನಾವು ಓದಬಹುದಾಗಿದೆ. ಈಗಾಗಲೇ ಹೇಳಿದಂತೆ ಇದೂ ಕೇವಲ ಓದುವ ತಾಣವಾಗದಷ್ಟೇ ಅಲ್ಲದೇ ಕಲಿಯುವ ತಾಣವಾಗಿದೆ. ಈ ಸಾರ್ವಜನಿಕ ಗ್ರಂಥಾಲಯದಲ್ಲಿ ಶೂ ನಿರ್ಮಿಸುವುದು, ಆಹಾರ ತಯಾರಿಸುವುದು, ಪಬ್ಲಿಕ್‌ ಸ್ಪೀಚ್‌ ನೀಡುವುದು ಹೇಗೆ ಎಂಬುದನ್ನು ಈ ಗ್ರಂಥಾಲಯದಲ್ಲಿ ಕಲಿಸಿಕೊಡಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ವೇದಿಕೆಯನ್ನು ಕೂಡ ನಿರ್ಮಿಸಲಾಗಿದೆ. ಹಾಗಾಗಿ ಓದಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕಲಿಕೆಗೆ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ಈ ಸಾರ್ವಜನಿಕ ಗ್ರಂಥಾಲಯದಲ್ಲಿ 3ಡಿ ಪ್ರಿಂಟರ್‌ ಹಾಗೂ ಸೆರ್ಲಾಕ್‌ ಹೋಮ್ಸ್‌ ಅಧ್ಯಯನ ಕೇಂದ್ರ ಎಂದು ಪ್ರತ್ಯೇಕವಾಗಿದ್ದು, ಇಲ್ಲಿ ಸಾಹಿತ್ಯ, ಸಂಶೋಧನೆ ಕುರಿತ  ಗತ್ತಿನ 16 ಭಾಷೆಗಳ ಪುಸ್ತಕಗಳು ದೊರೆಯುತ್ತವೆ. ಇಲ್ಲಿ ಪುಸ್ತಕಗಳು ಡಿಜಿಟಲ್‌ ರೂಪದಲ್ಲಿ ಕೂಡ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಂಥಾಲಯದಲ್ಲಿ ಕಂಪ್ಯೂಟರ್‌ನ ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ಗ್ರಂಥಾಲಯವೂ ಕೇವಲ ಓದುವ, ಕಲಿಯುವುದಷ್ಟೇ ಅಲ್ಲದೇ ಮನೋರಂಜನೆಗೆ ಪೂರಕವಾಗಲೆಂದು ಸ್ಟುಡಿಯೋವನ್ನು ಕೂಡ ನಿರ್ಮಿಸಲಾಗಿದೆ. ಗ್ರಂಥಾಲಯಕ್ಕೆ ಓದಲು ಬಂದ ಸಾರ್ವಜನಿಕರು ಪುಸ್ತಕ, ಸುದ್ದಿ ಪತ್ರಿಕೆಗಳು ಓದಿ ಬೇಸರವಾದಾಗ ಗ್ರಂಥಾಲಯದಲ್ಲಿರುವ ಸ್ಟುಡಿಯೋದಲ್ಲಿ ಹೋಗಿ ಕಾಲ ಕಳೆದು, ಸಿನೆಮಾ, ಆ್ಯನಿಮೇಶನ್‌ ವಿಡಿಯೋಗಳನ್ನು ನೋಡಬಹುದಾಗಿದೆ. ಈ ವಿಚಾರಕ್ಕಾಗಿ ಕೆನಡಾ ದೇಶದ ಟೋರೆಂಟೋ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ಜಗತ್ತಿನ ಎಲ್ಲ ದೇಶಗಳ ಗ್ರಂಥಾಲಯಗಳಿಗೆ ಮಾದರಿಯಾಗಿ ನಿಲ್ಲುತ್ತದೆ. ಇದಲ್ಲದೇ ಭಾರತ ದೇಶಕ್ಕೆ ಕೂಡ ಈ ಟೋರೆಂಟೋ ಮಾದರಿಯ ಗ್ರಂಥಾಲಯದ ಆವಶ್ಯಕತೆ ಹೆಚ್ಚಿದೆ.

ಶಿವ ಸ್ಥಾವರ ಮಠ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.