ಸಮಸ್ಯೆಯ ಮೋಹ ಬಿಡಿ, ಪರಿಹಾರದ ಪ್ರೀತಿ ಬೆಳೆಸಿಕೊಳ್ಳಿ


Team Udayavani, Oct 22, 2018, 2:59 PM IST

key.jpg

ವಿದ್ಯಾರ್ಥಿಗಳು ಗಮನಿಸಲೇಬೇಕಾದ ವಿಚಾರವಿದು. ಸಮಸ್ಯೆಯನ್ನು ಮೋಹಿಸುವುದನ್ನು ಬಿಡಬೇಕು. ಇಲ್ಲಿ ಮೋಹ ಎನ್ನುವುದು ಅಧ್ಯಾತ್ಮ ಸಂಗತಿಯಲ್ಲ. ತುಸು ಹೆಚ್ಚಾಗಿ ಪ್ರೀತಿಸುವುದು. ಮೋಹ ನಮ್ಮ ವಿವೇಕವೆಂಬ ಕನ್ನಡಿಯ ಮೇಲೆ ಬೀಳುವ ಮಂಜು ಇದ್ದಂತೆ. ಅದು ನಮ್ಮ ಪ್ರತಿಬಿಂಬ ತೋರಿಸುವ ಕನ್ನಡಿಯನ್ನು ಆವರಿಸಿಕೊಂಡರೆ ಏನೂ ತೋರದು; ನಮ್ಮ ಮುಖವಷ್ಟೇ ಅಲ್ಲ, ಎದುರಿನ ದಾರಿಯೂ ಕೂಡ. ಹಾಗೆಯೇ ಇದೂ. ನಾವು ಸಾಗುವ ದಾರಿ ಸ್ಪಷ್ಟವಾಗಿ ತೋರಬೇಕು ಮತ್ತು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಬೇಕು ಎಂದರೆ ಆ ಮಂಜು ಒರೆಸಬೇಕು. ಅದರಂತೆಯೇ ಸಮಸ್ಯೆಯ ಬಗೆಗಿನ ಮೋಹ ಬಿಟ್ಟು ಪರಿಹಾರದ ದಾರಿ ಹುಡುಕಬೇಕು. ಇದೇ ಮಾತನ್ನು ಹೇಳುತ್ತಾರೆ ಅಧ್ಯಾತ್ಮ ಗುರು ಜಗ್ಗಿ ವಾಸುದೇವ್‌.

ಸಮಸ್ಯೆ ನಿಮ್ಮೊಳಗಿನಿಂದಲೇ ಹುಟ್ಟಿದ್ದು
ಹದಿಹರೆಯದ ನಮ್ಮ ಜಾಣ ಜಾಣೆಯರಿಗೆ ನಾನು ಒಂದು ನಿಜ ವಿಚಾರವನ್ನು ಹೇಳಲೆ? ನೀವು ನಿಮ್ಮ ಸಮಸ್ಯೆಗಳನ್ನು ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಮೋಹಿಸುತ್ತಿದ್ದೀರಿ, ರಮಿಸುತ್ತಿದ್ದೀರಿ, ದೊಡ್ಡದು ಮಾಡುತ್ತಿದ್ದೀರಿ. ನೀವು ಅಂದುಕೊಂಡಷ್ಟು ಅಥವಾ ಹೇಳಿಕೊಳ್ಳುವಷ್ಟು ಅದು ದೊಡ್ಡದಲ್ಲ. ನಿಮ್ಮ ಬದುಕು ಚೆನ್ನಾಗಿರಲು, ನಿಮಗೆ ಬೇಕಾದ್ದೆಲ್ಲವನ್ನೂ ಒದಗಿಸಿಕೊಡಲು ನಿಮ್ಮ ತಾಯ್ತಂದೆ ಏನೆಲ್ಲ ಸರ್ಕಸ್‌ ಮಾಡುತ್ತಾರೆ, ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಲಾರಿರಿ. ಇಷ್ಟೆಲ್ಲ ಇದ್ದರೂ ಅವರು ನಿಮ್ಮ ಜತೆಗೆ ಖುಷಿಖುಷಿಯಾಗಿರಲು ಪ್ರಯತ್ನ ಪಡುತ್ತಾರೆ. ಹಾಗಾಗಿ ವಿದ್ಯಾರ್ಥಿ ಮಿತ್ರರು ಸುಮ್ಮಸುಮ್ಮನೆ ಇಲ್ಲದ ಸಮಸ್ಯೆ ಮಾಡಿಕೊಳ್ಳುವುದನ್ನು ಬಿಟ್ಟುಬಿಡಿ. ನೀವು ಇದನ್ನು ಕಲಿಯಿರಿ ಅಥವಾ ಅದನ್ನು ಕಲಿಯಿರಿ; ಏನೀಗ? “ನಾನು ಎಂಜಿನಿಯರ್‌ ಆಗದೆ ಇರಲೂ ಬಹುದು; ಆದರೆ ಚಿಂತೆ ಬೇಡ, ಚೆನ್ನಾಗಿ ಬದುಕುತ್ತೇನೆ’ ಎಂಬುದನ್ನು ನಿಮ್ಮ ನಡೆನುಡಿ, ನಡವಳಿಕೆ, ವರ್ತನೆಗಳ ಮೂಲಕ ಹೆತ್ತವರಿಗೆ ಖಚಿತಪಡಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ತಾಯ್ತಂದೆ ನಿಮ್ಮ ಜತೆಗೆ ಯಾಕೆ ಪ್ರತಿಯೊಂದಕ್ಕೂ ಫ‌ಜೀತಿ ಮಾಡಿಕೊಳ್ಳುತ್ತಾರೆ ಎಂದರೆ, ಹೀಗೇ ಬಿಟ್ಟರೆ ನೀವು ಬೀದಿಗೆ ಬೀಳುತ್ತೀರಿ ಎಂಬ ಭಾವನೆ ಅವರಲ್ಲಿದೆ. ನಿಮಗೆ ಅತ್ಯುತ್ತಮವಾದದ್ದು ಏನು ಎಂದು ನಿಮ್ಮ ಹೆತ್ತವರು ಹುಡುಕಿ ಅದನ್ನು ನಿಮ್ಮ ಮೇಲೆ ಹೊರಿಸುವುದು ಬೇಡವೆ? ಹಾಗಾದರೆ ನಿಮ್ಮ ಸಾಮರ್ಥ್ಯವನ್ನು ನಿಮಗಿಷ್ಟವಾದ ಕ್ಷೇತ್ರದಲ್ಲಿ ತೋರಿಸಿಕೊಡಿ ಮತ್ತು ನಿಮ್ಮ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಿ. 

ಒಂದೇ ಕಡೆ ಹತ್ತಡಿ ಅಗೆಯಿರಿ
ನಮ್ಮಲ್ಲನೇಕರು ಬದುಕಿನ ಆಳವನ್ನೂ ವೈಶಾಲ್ಯವನ್ನೂ ಯಾಕೆ ಕಳೆದುಕೊಂಡಿದ್ದಾರೆ ಎಂದರೆ, ಅವರು ತಮಗೆ ಅನುಕೂಲವಾದವುಗಳ ಮೇಲಷ್ಟೇ ಗಮನ ಕೇಂದ್ರೀಕರಿಸುತ್ತಿದ್ದಾರೆ. ಎಲ್ಲವೂ ಕ್ಷಣಾರ್ಧದಲ್ಲಿ ಘಟಿಸಬೇಕು, ಆಗ ಮಾತ್ರ ಬದುಕು ಸುಸೂತ್ರವಾಗಿದೆ ಎಂದುಕೊಳ್ಳುತ್ತಾರೆ, ಅದನ್ನೇ ಪಾಸಿಟಿವ್‌ ಎಂದು ಕರೆಯುತ್ತಾರೆ. ಆದರೆ ಹಾಗಲ್ಲ; ನಿಮಗೆ ಯಾವುದು ಇಷ್ಟವೋ, ಯಾವುದರಲ್ಲಿ ನಿಮಗೆ ಸಾಧನೆ ಮಾಡಬೇಕಾಗಿದೆಯೋ ಅದಕ್ಕೆ ಅರ್ಪಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ತೆರೆದುಕೊಳ್ಳುತ್ತದೆ. ನಿಮಗೆ ಹತ್ತು ಕಡೆ ಬಾವಿ ತೋಡಲು ಹೊರಟವನ ಕಥೆ ಗೊತ್ತಿರಬಹುದು. ಹತ್ತು ಕಡೆ ನಾಲ್ಕಾರು ಅಡಿ ಗುಂಡಿ ತೆಗೆದರೆ ನೀರು ಸಿಗುವುದಿಲ್ಲ. ಅಷ್ಟೆಲ್ಲ ಶ್ರಮವನ್ನೂ ಒಂದೇ ಕಡೆ ಹಾಕಿ ತೋಡಿದರೆ ಖಂಡಿತಕ್ಕೂ ನೀರು ಸಿಕ್ಕೇ ಸಿಗುತ್ತದೆ. 

ಉತ್ಕೃಷ್ಟವಾಗಿ ಬದುಕಿ
ನೀವು ದೇವರಾಗಿ ಆರಾಧಿಸುವ ಎಲ್ಲರೂ -ರಾಮ, ಕೃಷ್ಣ, ಶಿವ, ಜೀಸಸ್‌- ಯಾರೂ ಐಐಟಿ, ಐಎಎಸ್‌ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗೆದ್ದವರಲ್ಲ. ನಾವು ನೀವು ಅವರನ್ನು ಪೂಜಿಸುವುದು ಯಾಕೆಂದರೆ ಅವರು ಅವರ ಬದುಕನ್ನು ಚೆನ್ನಾಗಿ ಬದುಕಿ ಬೆಳಕಾಗಿದ್ದಾರೆ. ನೀವೂ ಮಾಡಬೇಕಾದ್ದು ಅಷ್ಟೇ- ಒಳ್ಳೆಯದಾಗಿ ಜೀವಿಸಿ. ನಮ್ಮ ಈ ಭೂಗ್ರಹದಲ್ಲಿ ಮನುಷ್ಯನಷ್ಟು ಉತ್ಕೃಷ್ಟವಾದ ಜೀವವ್ಯವಸ್ಥೆ ಇನ್ನೊಂದಿಲ್ಲ. ಈ ವ್ಯವಸ್ಥೆಯ ಸಾಧ್ಯತೆಗಳು, ಅವಕಾಶಗಳು ಆಕಾಶದಷ್ಟು ಅಮಿತ. ನಿಮಗೆ ಅತ್ಯುತ್ತಮವಾದ ಏನು ಸಾಧ್ಯವೋ ಅದನ್ನು ಮಾಡಿ ಸಾಧಿಸುವುದೇ ಯಶಸ್ಸು. ನೀವು ಇನ್ನೊಬ್ಬರಿಗಿಂತ ಉತ್ತಮರಾಗುವುದು ಸಾಧ್ಯವಾಗದೆ ಇರಬಹುದು; ಆದರೆ ನಿಮ್ಮ ಅತ್ಯುತ್ತಮವನ್ನು ಸಾಧಿಸುವುದು ನಿಮ್ಮಿಂದ ಸಾಧ್ಯ. ಅದನ್ನು ಮಾಡಿ. ಆಗ ಬದುಕು ನಿಮ್ಮೆದುರು ತಂದು ಹಾಕುವ ಎಲ್ಲವನ್ನೂ ಆನಂದದಿಂದ, ಸಮಾಧಾನದಿಂದ ನಿಭಾಯಿಸುವುದು ಸಾಧ್ಯವಾಗುತ್ತದೆ. 

ನೀವು ಒತ್ತಡ, ಭಯ, ಸಿಟ್ಟು ಎಂದು ಗುರುತಿಸುವ ಎಲ್ಲವೂ ಉಂಟಾಗುವುದು ನಿಮ್ಮ ಸುತ್ತಮುತ್ತ ಇರುವ ಯಾವುದೋ ಒಂದರಿಂದ ಅಲ್ಲ; ನಿಮ್ಮ ಇಂದ್ರಿಯಗಳು ನಿಮ್ಮ ಮಾತು ಕೇಳದ್ದರಿಂದ. ನಿಮ್ಮ ಮನಸ್ಸು ನಿಮ್ಮ ಸೂಚನೆಗಳನ್ನು ಪಾಲಿಸಿದರೆ ಸಂತಸವಷ್ಟೇ ಹುಟ್ಟಲು ಸಾಧ್ಯ, ಅಸಂತೋಷವಲ್ಲ. ಈ ಸಮಸ್ಯೆಗೆ ಕಾರಣವಾಗುವ ನಿಮ್ಮೊಳಗಿನ ವ್ಯವಸ್ಥೆಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಪಡೆಯಿರಿ, ಆಗ ಎಲ್ಲವೂ ಚೆನ್ನಾಗಿರುತ್ತದೆ. 

ಮನಸ್ಸು ಕಸದ ಬುಟ್ಟಿ
ನಮ್ಮ ಮನಸ್ಸು ಸಮಾಜದ ಕಸದ ಬುಟ್ಟಿ ಇದ್ದಂತೆ. ಎದುರಾಗುವ ಎಲ್ಲರೂ ನಿಮ್ಮ ತಲೆಯೊಳಗೆ ಒಂದಿಷ್ಟನ್ನು ಎಸೆದುಹೋಗುತ್ತಾರೆ. ಯಾವುದನ್ನು ತೆಗೆದುಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಆಯ್ಕೆ ನಮಗಿರುವುದಿಲ್ಲ. ಇದರ ಬಗ್ಗೆ ಇನ್ನೊಂದು ವಿಧವಾಗಿ ಆಲೋಚಿಸಿ ನೋಡಿ: ಇದೆಲ್ಲ ನಿಮ್ಮ ಬಗೆಗಿನ ನಿರೀಕ್ಷೆಗೆ ಸಂಬಂಧಿಸಿದ್ದು, ನೀವು ಈಗ ಏನಾಗಿದ್ದೀರೋ ಅದರ ಬಗ್ಗೆ ಸಂಬಂಧಿಸಿದ್ದಲ್ಲ ಎಂಬುದು ನಿಮಗೇ ಹೊಳೆಯುತ್ತದೆ. 

-ಸದ್ಗುರು ಜಗ್ಗಿ ವಾಸುದೇವ್‌

ಟಾಪ್ ನ್ಯೂಸ್

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

4

Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ

3

Mangaluru: ಕೊಕ್ಕಡದ ʼಸಾಂತಾ ಕ್ಲಾಸ್‌ʼ ವಿನ್ಸೆಂಟ್‌ ಕ್ರಿಸ್ಮಸ್‌ ತಿರುಗಾಟಕ್ಕೆ 25 ವರ್ಷ!

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Koppala ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.