ಮಕ್ಕಳ ಕನಸುಗಳಿಗೆ ಬಣ್ಣ ತುಂಬಬೇಕಿದೆ: ವಸಂತಿ
Team Udayavani, Oct 22, 2018, 3:30 PM IST
ಪುತ್ತೂರು: ಮಕ್ಕಳ ಕನಸಿಗೆ ಬಣ್ಣ ತುಂಬುವ ಕೆಲಸವನ್ನು ಹಿರಿಯರಾದವರು ಮಾಡಬೇಕು. ಇಂತಹ ದೃಷ್ಟಿಕೋನದೊಂದಿಗೆ ಪತ್ರಿಕೆಯೊಂದು ಕಾಳಜಿ ತೋರುವುದು ಉತ್ತಮ ಬೆಳವಣಿಗೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯೆ ವಸಂತಿ ಹೇಳಿದರು.
ಉದಯವಾಣಿ ಮತ್ತು ಆರ್ಟಿಸ್ಟ್ ಫೋರಂ ಉಡುಪಿ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ‘ಚಿಣ್ಣರ ಬಣ್ಣ – 2018’ ತಾಲೂಕು ಮಟ್ಟದ ಉದಯವಾಣಿ ಚಿತ್ರಕಲಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ಪರ್ಧಾ ವಿಷಯದ ಆಯ್ಕೆಯ ಚೀಟಿ ಎತ್ತುವ ಮೂಲಕ ಚಾಲನೆ ನೀಡಲಾಯಿತು.
ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆ ಇರುತ್ತದೆ. ಆದರೆ ಹೊರತೆಗೆಯುವ ಜವಾಬ್ದಾರಿ ಶಿಕ್ಷಕರು, ಪೋಷಕರು, ಸಮಾಜಕ್ಕೂ ಇದೆ. ನಾವು ಗೆಲ್ಲುತ್ತೇವೆ ಎನ್ನುವುದಕ್ಕಿಂತಲೂ ಮನಸ್ಸಿನಲ್ಲಿ ಮೂಡುವ ಕಲ್ಪನೆಗೆ ಚಿತ್ರರೂಪ ನೀಡುವುದು ಮುಖ್ಯವಾಗಬೇಕು. ಹಾಗಾದಾಗ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.
ಪ್ರೋತ್ಸಾಹ, ಸ್ಫೂರ್ತಿ ಅಗತ್ಯ
ಜಿ.ಎಲ್. ಆಚಾರ್ಯ ಜುವೆಲರ್ ಆಡಳಿತ ಪಾಲುದಾರ ಲಕ್ಷ್ಮೀಕಾಂತ್ ಬಿ. ಆಚಾರ್ಯ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಶ್ರದ್ಧೆ ಹಾಗೂ ಆಸಕ್ತಿ ಮೂಡಿದಾಗ ಮಾತ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಮಕ್ಕಳಿಗೆ ಪ್ರೋತ್ಸಾಹ, ಸ್ಫೂರ್ತಿ ತುಂಬುವ ಉದ್ದೇಶದಿಂದ ಉದಯವಾಣಿ ಹಾಗೂ ಆರ್ಟಿಸ್ಟ್ ಫೋರಂ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅಭಿನಂದನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನಸ್ಸಿಗೆ ಸಂತೋಷ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರಿನ ಕಲ್ಯ ಆಯುರ್ವೇದಂ ಚಿಕಿತ್ಸಾಲಯದ ವೈದ್ಯೆ ಡಾ| ಹರಿಣಿ ಸೂರಜ್ ಮಾತನಾಡಿ, ಚಿತ್ರಕಲೆ ಅನುಭವಿಸಿಕೊಂಡು ತೊಡಗಿಸಿಕೊಳ್ಳುವ ಕಲೆಯಾಗಿರುವುದರಿಂದ ಮನಸ್ಸಿಗೆ ಸಂತೋಷ ಲಭಿಸುತ್ತದೆ. ಮಕ್ಕಳನ್ನು ಚಟುವಟಿಕೆಯಿಂದಿರಿಸಲು ಪೂರಕವಾಗಿರುತ್ತದೆ ಎಂದು ಹೇಳಿದರು.
ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್ ಮಾತನಾಡಿ, ವರ್ಣರಂಜಿತ ಬದುಕು ವಿದ್ಯಾರ್ಥಿಗಳದ್ದಾಗಬೇಕು ಎಂಬ ಉದ್ದೇಶದಿಂದ ಉದಯವಾಣಿ ಸ್ಪರ್ಧೆ ಆಯೋಜಿಸಿದೆ. ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ ಸ್ಪರ್ಧೆಯನ್ನು ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗಿದೆ. ತಾಲೂಕು ಮಟ್ಟದಲ್ಲಿ ವಿಜೇತರಾದ ಮಕ್ಕಳಿಗೆ ಜಿಲ್ಲಾಮಟ್ಟದಲ್ಲಿ ನ. 4ರಂದು ಸ್ಪರ್ಧೆ ನಡೆಯಲಿದೆ ಎಂದರು.
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಸತೀಶ್ ಕುಮಾರ್ ರೈ ಶುಭಹಾರೈಸಿದರು. ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪೆರ್ಮುದೆ ಮೋಹನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯವಾಣಿ ಮ್ಯಾಗಜಿನ್ ವಿಭಾಗ ಮತ್ತು ಸ್ಪೆಷಲ್ ಇನಿಶಿಯೇಟಿವ್ಸ್ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಸ್ವಾಗತಿಸಿ, ವರದಿಗಾರ ಎನ್. ಕೆ. ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಸ್ಪರ್ಧೆಯ ಸ್ಥಳೀಯ ಪ್ರಾಯೋಜಕರಾಗಿ ಜಿ. ಎಲ್. ಆಚಾರ್ಯ ಜುವೆಲರ್, ಮುಖ್ಯ ಪ್ರಾಯೋಜಕರಾಗಿ ಕ್ಯಾಂಪ್ಕೋ ಲಿ., ಹ್ಯಾಂಗ್ಯೋ ಐಸ್‌ಕ್ರೀಂ, ಮೋಡರ್ನ್ಕಿ ಚನ್ಸ್, ಮೆಡಿಮಿಕ್ಸ್ ಸಹಕರಿಸಿದರು. ವಿವಿಧ ವಿಭಾಗಗಳಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.