ಭ್ರಷ್ಟ CBI ಅಧಿಕಾರಿ ಅಸ್ಥಾನಾ: ಪ್ರಧಾನಿಯ ನೀಲಿ ಕಂಗಳ ಹುಡುಗ: ರಾಹುಲ್
Team Udayavani, Oct 22, 2018, 4:08 PM IST
ಹೊಸದಿಲ್ಲಿ : ಲಂಚ ತೆಗೆದುಕೊಂಡ ಆರೋಪದಲ್ಲಿ ತನ್ನ ಎರಡನೇ ಕ್ರಮಾಂಕದ ಉನ್ನತ ಅಧಿಕಾರಿಯಾಗಿರುವ ರಾಕೇಶ್ ಅಸ್ಥಾನಾ ವಿರುದ್ಧ ಕೇಸು ದಾಖಲಿಸುವ ಮೂಲಕ ಸಿಬಿಐ ಅಭೂತಪೂರ್ವ ಕ್ರಮ ಕೈಗೊಂಡ ಒಂದು ದಿನದ ತರುವಾಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸ ಆರೋಪಗಳ ಸುರಿಮಳೆ ಗೈದಿದ್ದಾರೆ.
ಸಿಬಿಐ ಅನ್ನು ಪ್ರಧಾನಿ ಮೋದಿ ಅವರು ರಾಜಕೀಯ ದ್ವೇಷದ ಅಸ್ತ್ರವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಟ್ಟಿಟರ್ನಲ್ಲಿ ಆರೋಪಿಸಿರುವ ರಾಹುಲ್ ಗಾಂಧಿ, ಅಸ್ಥಾನಾ ಗೆ ಗೋದ್ರಾ ಎಸ್ಐಟಿ ಜತೆಗೆ ನಂಟು ಇತ್ತೆಂದು ದೂರಿದ್ದಾರೆ.
“ಅಸ್ಥಾನಾ ಅವರು ಪ್ರಧಾನಿಯವರ ನೀಲಿ ಕಂಗಳ ಹುಡುಗ; ಗೋದ್ರಾ ಎಸ್ಐಟಿ ಖ್ಯಾತಿಯ ಗುಜರಾತ್ ಕೇಡರ್ ಅಧಿಕಾರಿ, ಸಿಬಿಐ ನ ನಂಬರ್ 2 ಅಧಿಕಾರಿ; ಈಗ ಲಂಚ ತೆಗೆದುಕೊಂಡು ಸಿಕ್ಕಿಬಿದ್ದಿರುವಾತ; ಪ್ರಧಾನಿ ಅಡಿ ಸಿಬಿಐ ರಾಜಕೀಯ ದ್ವೇಷದ ಅಸ್ತ್ರವಾಗಿದೆ, ಅಂತಃಕಲಹದಲ್ಲಿ ನಿರತವಾಗಿರುವ ಮತ್ತು ಮಾರಣಾಂತಿಕ ಪತನ ಕಾಣುತ್ತಿರುವ ಸರಕಾರಿ ತನಿಖಾ ಸಂಸ್ಥೆ ಇದಾಗಿದೆ ” ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಲೇವಡಿ ಮಾಡಿದ್ದಾರೆ.
ಮಾಂಸ ರಫ್ತು ಉದ್ಯಮಿ ಮೊಯಿನ್ ಕುರೇಶಿ ಯನ್ನು ಒಳಗೊಂಡ ಪ್ರಕರಣದ ತನಿಖೆ ನಡೆಸುತ್ತಿರುವ ಅಸ್ಥಾನಾ, ಕುರೇಶಿಗೆ ಅನುಕೂಲ ಮಾಡಿಕೊಡಲು ಲಂಚ ತೆಗೆದುಕೊಂಡಿರುವ ಆರೋಪದ ಮೇಲೆ ಸಿಬಿಐ ತನ್ನದೇ ಸಂಸ್ಥೆಯಲ್ಲಿ 2ನೇ ಕ್ರಮಾಂಕದ ಉನ್ನತ ಅಧಿಕಾರಿಯಾಗಿರುವ ಅಸ್ಥಾನ ವಿರುದ್ಧ ಅಭೂತಪೂರ್ವ ಕ್ರಮವೊಂದರಲ್ಲಿ ಕೇಸು ದಾಖಲಿಸಿಕೊಂಡಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.