ಬಕ್ತಿಯಾರ್‌ಪುರ, ಅಕ್‌ಬರ್‌ಪುರ: ಪುನರ್ ನಾಮಕರಣಕ್ಕೆ ಸಲಹೆ, ವಿರೋಧ
Team Udayavani, Oct 22, 2018, 4:26 PM IST
ಪಟ್ನಾ : ಒಂಬತ್ತನೇ ಶತಮಾನದ ಅಫ್ಘಾನ್ ಮಿಲಿಟರಿ ಜನರಲ್ ಬಕ್ತಿಯಾರ್ ಖೀಲ್ಜಿ ಹೆಸರನ್ನು ಹೊಂದಿರುವ ಮತ್ತು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹುಟ್ಟಿ ಬೆಳೆದ ಊರಾಗಿರುವ, ಪಟ್ನಾ ಹೊರವಲಯದ ಬಕ್ತಿಯಾರ್‌ಪುರದ ಹೆಸರನ್ನು ಬದಲಾಯಿಸಬೇಕೆಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮಾಡಿರುವ ಸಲಹೆ ಸ್ವತಃ ಬಿಜೆಪಿ ಮತ್ತು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.
ದಿಲ್ಲಿಯ ಅಂದಿನ ಸುಲ್ತಾನ ಕುತುಬುದ್ದೀನ್ ಐಬಕ್ ನ ಆದೇಶದ ಪ್ರಕಾರ ಅಫ್ಘಾನ್ ಮಿಲಿಟರಿ ಜನರಲ್ ಬಕ್ತಿಯಾರ್ ಖೀಲ್ಜಿ ಬಿಹಾರದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡಿದ್ದ. ಪಟ್ನಾ ಹೊರವಲಯದಲ್ಲಿರುವ ನಗರಕ್ಕೆ ಬಕ್ತಿಯಾರ್ ಹೆಸರು ಬಂದಿರುವುದು ಆತನಿಂದಾಗಿ ಎಂಬುದನ್ನು ಇತಿಹಾಸ ತಿಳಿಸುತ್ತದೆ.
ಗಿರಿರಾಜ್ ಸಿಂಗ್ ಅವರ ಈ ಪ್ರಸ್ತಾವವನ್ನು ಬಿಹಾರದಲ್ಲಿನ ಜೆಡಿಯು (ಸಿಎಂ ನಿತೀಶ್ ಕುಮಾರ್ ಪಕ್ಷ), ವಿರೋಧ ಪಕ್ಷಗಳಾಗಿರುವ ಆರ್‌ಜೆಡಿ ಮತ್ತು ಹಿಂದುಸ್ಥಾನಿ ಆವಾಮ್ ಮೋರ್ಚಾ ತೀವ್ರವಾಗಿ ಆಕ್ಷೇಪಿಸಿವೆ.
ಗಿರಿರಾಜ್ ಸಿಂಗ್ ಅವರು ತಾವು ಪ್ರತಿನಿಧಿಸುತ್ತಿರುವ ಅಕ್‌ಬರ್‌ಪುರ ಲೋಕಸಭಾ ಕ್ಷೇತ್ರಕ್ಕೂ ಬೇರೆ ಹೆಸರಿಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅವರು ಈ ಎರಡೂ ಸ್ಥಳಗಳಿಗೆ ಯಾವುದೇ ಪರ್ಯಾಯ ನಾಮವನ್ನು ಸೂಚಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.