ಪ್ರೀತಿ ಪ್ರೇಮ ಪ್ರಮೇಯ


Team Udayavani, Oct 23, 2018, 6:00 AM IST

12.jpg

ಅಗೋ, ಆ ಹಳೆಯ ಬಸ್‌ಸ್ಟ್ಯಾಂಡಿನ ಪರಿಧಿಯ ಹೊರಗೆ ನಿಂತು ಬಸ್ಸು ಕಾಯುವ ನಾಲ್ಕು ಅಡಿ ಎತ್ತರದ ಹುಡುಗಿಯೇ, 
ನಿನಗೆ ಈ ನಿನ್ನ ತೆರೆಮರೆಯ ಪ್ರೇಮಿ ಮಾಡುವ ನಮಸ್ಕಾರಗಳು. ನಿನ್ನ ಹೆಸರು ತಿಳಿದಿದ್ದರೆ ಮುದ್ದಿನಿಂದ ಅದೇ ಹೆಸರನ್ನು ಬಲಬದಿಗೋ ಎಡಬದಿಗೋ ಸರಳೀಕರಿಸಿ ಕರೆಯುತ್ತಿದ್ದೆ. ಆದರೆ ನನಗೆ ನಿನ್ನ ಹೆಸರನ್ನೂ ತಿಳಿಯುವಷ್ಟು ಸಲುಗೆ ಬೆಳೆದಿಲ್ಲ. ಆದರೂ ನನ್ನ ಮನಸ್ಸಿನಲ್ಲಿ ನಿನಗೊಂದು ಹೆಸರಿಟ್ಟಿದ್ದೇನೆ “ಸರಳ’ ಎಂದು! ನಿನ್ನ ನಿರಾಭರಣತೆಯ ಸಲುವಾಗಿಯೂ ನೀನು ಸರಳರೇಖೆಯಷ್ಟು ಸುಲಭವಾಗಿಯೂ ಇರುವುದರಿಂದ ನಾನು ನಿನಗೆ ಆ ಹೆಸರನ್ನು ಆಯ್ಕೆ ಮಾಡಿದ್ದೇನೆ.

ಅಂದು ಬೈಕಿನಲ್ಲಿ 40 ಕಿಲೋಮೀಟರ್‌ ವೇಗದಲ್ಲಿ ಚಲಿಸುತ್ತಿದ್ದಾಗ ಆ ದಾರಿಯ ತಿರುವಿನಲ್ಲಿ ನಿನ್ನ ಕಂಡೆ. ಆ ಬಳಿಕ ನಿನ್ನ ಗುಂಗಲ್ಲೇ ಬಿದ್ದು ನಿನ್ನ ಹಿಂದೆಯೇ ಸಾಕಷ್ಟು ತಿರುಗಾಡುತ್ತಿದ್ದೆ. ಲಘುಕೋನದಂತೆಯೇ ನಿನ್ನ ಮಾತು, ಲಂಬಕೋನದಂತೆಯೇ ನಿನ್ನ ನಡಿಗೆ, ವಿಶಾಲಕೋನದಂಥ ಈ ನನ್ನ ಹೃದಯಕ್ಕೆ ಕೈವಾರದ ಮೊನೆಯಂತೆ ಚುಚ್ಚಿತು. ನಿನ್ನನ್ನು ಅನಂತದಷ್ಟು ಪ್ರೀತಿಸತೊಡಗಿದೆ. ವೃತ್ತಾಕಾರದ ಮುಖ, ಶಂಖಾಕೃತಿಯ ಕಿವಿ, ತ್ರಿಭುಜಾಕೃತಿಯ ಮೂಗು, ವೆನ್‌ ನಕ್ಷೆಯಂತಹಾ ಆ ನಿನ್ನ ಕಣ್ಣುಗಳು, ಅರ್ಧದಷ್ಟು ತುಂಡಾಗಿ ಉಳಿದಿರುವ ಮೂವತ್ತೂಂದೂವರೆ ಹಲ್ಲುಗಳು ಇವೆಲ್ಲವೂ ನನಗೆ ಶೇಕಡಾ ನೂರರಷ್ಟು ಅಚ್ಚುಮೆಚ್ಚು.

ಕೋನಮಾಪಕದಲ್ಲೂ ಅಳೆಯಲಾಗದ ಸೌಂದರ್ಯ ನಿನ್ನದು. ನಿನ್ನ ಸೌಂದರ್ಯವನ್ನು “x’ ಎಂದು ತಿಳಿಯುವುದೇ ಸೂಕ್ತ ಎನಿಸುತ್ತದೆ. ನೀ ನಕ್ಕಾಗೆಲ್ಲ ಏರಿಕೆ ಕ್ರಮದಲ್ಲಿ ನಿನ್ನ ಮೇಲಿನ ಪ್ರೀತಿ ಏರುಗತಿಯಲ್ಲಿ ಸಾಗುತ್ತದೆ, ಆದರೆ ನನ್ನ ನೋವುಗಳೆಲ್ಲ ಇಳಿಕೆ ಕ್ರಮದಲ್ಲಿ ಇಳಿಯುತ್ತದೆ. ನೀನು ಸಿಗುತ್ತೀಯೋ ಇಲ್ಲವೋ ಎನ್ನುವುದು ಸೈನ್‌, ಕಾಸ್‌, ಟ್ಯಾನ್‌ಗಳ ಬಳಕೆಯಷ್ಟೇ ನಿಗೂಢವಾಗಿದೆ. ನಿನ್ನ ಇಷ್ಟಪಟ್ಟ ದಿನದಿಂದ ನನ್ನ ಜೀವನಪ್ರೀತಿ ಕೂಡುತ್ತಾ, ನೋವುಗಳೆಲ್ಲ ಕಳೆಯುತ್ತಾ, ಹರುಷ ಹುಮ್ಮಸ್ಸು ಗುಣಾಕಾರವಾಗಿ, ಸಮಸ್ಯೆ ನೋವುಗಳೆಲ್ಲ ಭಾಗಾಕಾರವಾಗಿ ಶೇಷದತ್ತ ದಾಪುಗಾಲಿಕ್ಕಿದೆ. ನಿನ್ನನ್ನು ಅರ್ಥಮಾಡಿಕೊಳ್ಳುವುದು ಬೀಜಗಣಿತದಷ್ಟೇ ಜಟಿಲವಾದರೂ ಅಂಕಗಣಿತದಷ್ಟೇ ಕುತೂಹಲವೂ ರೇಖಾಗಣಿತದಷ್ಟು ಸೂಕ್ಷ್ಮವೂ ಅನ್ನಿಸಿದೆ.

ಪ್ರೀತಿ, ಜವಾಬ್ದಾರಿ, ಮಮತೆ, ನಗು, ನೆಮ್ಮದಿಗಳೇ ನಮ್ಮಿಬ್ಬರ ನಡುವಿನ ಫಾರ್ಮುಲಾ ಆಗಲಿ. ನೀ ನನಗೆ ಸರಳಬಡ್ಡಿಯಷ್ಟು ಪ್ರೀತಿ ಕೊಡು, ನಾ ನಿನಗೆ ಚಕ್ರಬಡ್ಡಿಯಷ್ಟು ಮುದ್ದು ಮಾಡುವೆ. ನನಗೋ ಐಊಖ=ಖಊಖ ಮಾಡುವಾಸೆ. ನಿಮ್ಮದೇ ಮನೆಯ ಪಕ್ಕ ಆಗ್ನೇಯ ದಿಕ್ಕಿನತ್ತ ಇರುವ ಆ ಚಚೌಕಾಕಾರ ಆ ಕಾಂಪೌಂಡಿನ ಪುಟ್ಟ ತ್ರಿಭುಜಾಕಾರದ ಗುಡಿಯ ಬಳಿ ಮಂಗಳ”ಸೂತ್ರ’ ಹಿಡಿದು “ಗುರು’ವಾರ ಕಾದಿರುತ್ತೇನೆ. ನಿನಗೂ ನನ್ನ ಮೇಲೆ ಮನಸ್ಸಿದ್ದರೆ ನನ್ನ ಬಳಿ ಅರ್ಧ ಅಡಿಯೂ ಜಾಗ ಉಳಿಯದಂತೆ ನಿಂತು “ಐ ಲವ್‌ ಯೂ’ ಎಂದುಬಿಡು. ಇಲ್ಲ, ನಾಚಿಕೆಯಾಗುವುದೆಂದರೆ ನನ್ನ ಪಕ್ಕದಲ್ಲೇ ತಲೆ ತಗ್ಗಿಸಿಕೊಂಡು ಹಾದು ಒಮ್ಮೆ 45 ಡಿಗ್ರಿಯಷ್ಟು ತಿರುಗಿ ನಸುನಕ್ಕುಬಿಡು. ಉಳಿದ ಲೆಕ್ಕಾಚಾರವೆಲ್ಲ ನಾನೇ ಮಾಡಿಕೊಳ್ಳುವೆ.

ಅರ್ಜುನ್‌ ಶೆಣೈ

ಟಾಪ್ ನ್ಯೂಸ್

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.