ಇತಿಹಾಸ ಸೇರಲಿದೆಯೇ ಮಲೇಶ್ಯ ಕ್ರಿಕೆಟ್ ಮೈದಾನ?
Team Udayavani, Oct 23, 2018, 6:00 AM IST
ಕೌಲಾಲಂಪುರ: ಹಲವು ಮಹತ್ವದ ಕ್ರಿಕೆಟ್ ಪಂದ್ಯಗಳಿಗೆ ಸಾಕ್ಷಿಯಾಗಿದ್ದ ಇಲ್ಲಿನ ಕಿನ್ರಾರ ಓವಲ್ ಕ್ರಿಕೆಟ್ ಸ್ಟೇಡಿಯಂ ಇನ್ನು ಬರೀ ನೆನಪಾಗಿ ಉಳಿಯುವ ಸಾಧ್ಯತೆಯೊಂದು ಕಿಗೋಚರಿಸಿದೆ. ಈ ಮೈದಾನವನ್ನು ಮಲೇಶ್ಯ ಕ್ರಿಕೆಟ್ ಸಂಸ್ಥೆ ಲೀಸ್ಗೆ ಪಡೆದುಕೊಂಡು ಅಭಿವೃದ್ಧಿಪಡಿಸಿತ್ತು. ಅದರ ಅವಧಿ ಮುಗಿದಿರುವುದರಿಂದ ಇದರ ಮಾಲಕರು ಮೈದಾನದಲ್ಲಿ ಬೇರೆ ಬೇರೆ ಚಟುವಟಿಕೆ ನಡೆಸಲು ನಿರ್ಧರಿಸಿದ್ದಾರೆ. ಆದ್ದರಿಂದ ಮೈದಾನವನ್ನು ತಿಂಗಳ ಅಂತ್ಯಕ್ಕೆ ಬಿಟ್ಟುಕೊಡಲು ಮಲೇಶ್ಯ ಕ್ರಿಕೆಟ್ ಸಂಸ್ಥೆಗೆ ಸೂಚಿಸಲಾಗಿದೆ.
2003ರಲ್ಲಿ ಕಿನ್ರಾರ ಮೈದಾನ ಸಿದ್ಧವಾಗಿತ್ತು. ಭಾರತ, ಆಸ್ಟ್ರೇಲಿಯ, ವೆಸ್ಟ್ ಇಂಡೀಸ್ ತಂಡಗಳು ಪಾಲ್ಗೊಂಡಿದ್ದ ಏಕದಿನ ಪಂದ್ಯಗಳಿಗೆ ಈ ಮೈದಾನ ಆತಿಥ್ಯ ವಹಿಸಿತ್ತು. ಅಂಡರ್-19 ವಿಶ್ವಕಪ್ ಪಂದ್ಯಗಳೂ ನಡೆದಿದ್ದವು. ಸಚಿನ್ ತೆಂಡುಲ್ಕರ್ 2006ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇದೇ ಮೈದಾನದಲ್ಲಿ ಅಜೇಯ 141 ಬಾರಿಸಿದ್ದರು. ವಿಶ್ವದರ್ಜೆಯ ಸೌಲಭ್ಯಗಳನ್ನೂ ಇದು ಹೊಂದಿದೆ. ಆದರೆ ಇದನ್ನೀಗ ಕಳೆದುಕೊಳ್ಳುವ ಅನಿವಾರ್ಯತೆಯಲ್ಲಿ ಮಲೇಶ್ಯ ಕ್ರಿಕೆಟ್ ಮಂಡಳಿಯಿದೆ. ಸದ್ಯ ಮೈದಾನ ವನ್ನು ಉಳಿಸಿಕೊಳ್ಳಬೇಕಾದರೆ ಸ್ವತಃ ಐಸಿಸಿಯೇ ಕಾರ್ಯಪ್ರವೃತ್ತವಾಗ ಬೇಕಾಗಿದೆ. ಐಸಿಸಿ ಯಾವ ಹೆಜ್ಜೆ ಇಡುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.