ನಿಮ್ಮವರ ಶವ ತೆಗೆದುಕೊಂಡು ಹೋಗಿ
Team Udayavani, Oct 23, 2018, 6:00 AM IST
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ರವಿವಾರ ಭಾರತದ ಗಡಿಯೊಳಗೆ ಒಳನುಸುಳಲು ಯತ್ನಿಸಿದ ಇಬ್ಬರು ನುಸುಳುಕೋರರನ್ನು ಸೇನಾಪಡೆ ಹೊಡೆದುರು ಳಿಸಿದ್ದು, ಅವರ ಶವಗಳನ್ನು ತೆಗೆದುಕೊಂಡು ಹೋಗಿ ಎಂದು ಪಾಕಿಸ್ಥಾನಕ್ಕೆ ಭಾರತ ಸೂಚಿಸಿದೆ. ಸುಂದರ್‌ಬನಿ ವಲಯದ ಗಡಿ ನಿಯಂತ್ರಣಾ ರೇಖೆಯಲ್ಲಿ ರವಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಒಳನುಸುಳು ಕೋರರು ಸಾವನ್ನಪ್ಪಿದ್ದರು. ಈ ವೇಳೆ ಮೂವರು ಯೊಧರೂ ಹುತಾತ್ಮರಾಗಿದ್ದಾರೆ.
ನುಸುಳುಕೋರರನ್ನು ಪಾಕ್‌ನ ಗಡಿ ಕಾರ್ಯಪಡೆ (ಬಿಎಟಿ) ಯೋಧರು ಎಂದು ಹೇಳಲಾಗಿದೆ. ಯೋಧರ ಸಮವಸ್ತ್ರ ಧರಿಸಿದ್ದ ಇವರ ಶವಗಳನ್ನು ವಾಪಸ್ ತೆಗೆದುಕೊಂಡು ಹೋಗು ವಂತೆ ಅಧಿಕೃತ ಚಾನೆಲ್ ಮೂಲಕ ಸಂವಹನ ನಡೆಸಲಾಗಿದೆ. ಅಷ್ಟೇ ಅಲ್ಲ, ನಿಮ್ಮ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಎಚ್ಚರಿಕೆಯನ್ನೂ ಪಾಕ್‌ಗೆ ನೀಡಲಾಗಿದೆ ಎಂದು ಸೇನೆ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ರವಿವಾರ ಐದರಿಂದ ಆರು ನುಸುಳುಕೋರರು ಗಡಿಯನ್ನು ದಾಟಿ ಭಾರತದ ನೆಲ ಪ್ರವೇಶಿಸಿದ್ದರು. ರವಿವಾರ ಎರಡು ಕಡೆ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆರು ಉಗ್ರರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲ, ಪಾಕ್ ಪ್ರದೇಶ ದಲ್ಲಿ ಭಾರಿ ಪ್ರಮಾಣದಲ್ಲಿ ಉಗ್ರರು ನೆಲೆಸಿದ್ದು, ಇವರು ಒಳನುಸುಳುವುದಕ್ಕೆ ಸತತ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ವಿವಾದ ಬಗೆಹರಿಸಲು ಭಾರತ ಮುಂದಾಗಬೇಕು: ರವಿವಾರ ಕಾಶ್ಮೀರದಲ್ಲಿ ಏಳು ನಾಗರಿಕರು ಸಾವನ್ನಪ್ಪಿದ್ದನ್ನು ಖಂಡಿಸಿ ರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ವಿಶ್ವಸಂಸ್ಥೆ ನಿಲುವಳಿಯ ಆಧಾರದಲ್ಲಿ ಹಾಗೂ ಕಾಶ್ಮೀರ ಜನರ ಬೇಡಿಕೆಯ ಮೇರೆಗೆ ಕಾಶ್ಮೀರ ವಿವಾದವನ್ನು ಬಗೆಹರಿಸುವ ಅಗತ್ಯ ವನ್ನು ಭಾರತ ಈಗಲಾದರೂ ಮನಗಾಣಲಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.