ಪ್ರಣಾಳಿಕೆಗೆ ಚಾಯ್ ಪೆ ಚರ್ಚಾ
Team Udayavani, Oct 23, 2018, 6:00 AM IST
ಭೋಪಾಲ/ಐಜ್ವಾಲ್: ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಣಾಳಿಕೆ ರಚಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಲಹೆ ಆಹ್ವಾನಿಸಲು ಬಿಜೆಪಿ ನಿರ್ಧರಿಸಿದ್ದು, ರಥಯಾತ್ರೆ, ಚಾಯ್ ಪೇ ಚರ್ಚಾ ಮೂಲಕ ಸಲಹೆಗಳನ್ನು ಸಂಗ್ರಹಿಸಲು ಮುಂದಾಗಿದೆ. ಇದೇ ಉದ್ದೇಶಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು “ಉಜ್ವಲ ಮಧ್ಯ ಪ್ರದೇಶ’ (ಪ್ರಾಸ್ಪರಸ್ ಮಧ್ಯ ಪ್ರದೇಶ) ಎಂಬ ಅಭಿಯಾನ ಉದ್ಘಾಟಿಸಲಿದ್ದಾರೆ. ಅದರ ಪ್ರಕಾರ ಪ್ರತಿ ವಿಧಾನಸಭಾ ಕ್ಷೇತ್ರ ದಿಂದ 5 ರಿಂದ 7 ಸಾವಿರ ಸಲಹೆಗಳನ್ನು ಸ್ವೀಕರಿಸುವ ಗುರಿ ಹೊಂದಲಾಗಿದೆ. 100 ವಿದ್ಯುನ್ಮಾನ ಸಲಹಾ ಬೂತ್ ಗಳನ್ನು ಸ್ಥಾಪಿಸಲಾಗುತ್ತದೆ. ಮಧ್ಯಪ್ರದೇಶ ಸರ್ಕಾರದ ಸಾಧನೆಗಳ ಪ್ರಚಾರಕ್ಕೆ 50 ರಥ ಯಾತ್ರೆ ಆಯೋಜಿಸಲಾಗುತ್ತದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಗ್ರಾ.ಪಂ. ಅಧ್ಯಕ್ಷನ ಹತ್ಯೆ: ಮಧ್ಯ ಪ್ರದೇಶದ ಬಲ್ವಾರಿ ಕಲಾ ಪಂಚಾಯಿತಿ ಅಧ್ಯಕ್ಷ, ಸ್ಥಳೀಯ ಕಾಂಗ್ರೆಸ್ ನಾಯಕ ನಜರು ಬಿಲ್ ಎಂಬುವರನ್ನು ಕಲ್ಲು ಹೊಡೆದು ಮತ್ತು ಬಾಣದಿಂದ ಚುಚ್ಚಿ ಕೊಲ್ಲಲಾಗಿದೆ. ಚುನಾವಣೆ ನಡೆಯಲಿರುವ ಮಧ್ಯ ಪ್ರದೇಶದಲ್ಲಿ ಈ ಸಾಲಿನಲ್ಲಿ ನಡೆದ ಮೊದಲ ರಾಜಕೀಯ ಹತ್ಯೆ ಇದಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ನಾಯಕ ಸೂರಜ್ ಎಂಬಾತನೇ ಈ ಕೃತ್ಯಕ್ಕೆ ಕಾರಣ ಎಂದು ಎಸ್‌ಪಿ ಬೀರೇಂದ್ರ ಸಿಂಗ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 21 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಗ್ರಾಮ ಪಂಚಾಯಿತಿ ಗಂಧ್ವಾನಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, 2008, 2013ರಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ವರ್ಗಾವಣೆ: ಭಿಂಡ್ ಜಿಲ್ಲಾಧಿ ಕಾರಿ ಯನ್ನು ವರ್ಗಾಯಿಸಲು ಚುನಾವಣಾ ಆಯೋಗ ಆದೇಶ ನೀಡಿದೆ. ಡಿ.ಸಿ.ಯ ಕಾರ್ಯನಿರ್ವಹಣೆ ಬಗ್ಗೆ ಕಾಂಗ್ರೆಸ್ ದೂರು ನೀಡಿದ್ದರಿಂದ ಈ ಕ್ರಮ ಕೈಗೊಂಡಿದೆ.
ಎಡವಟ್ಟು ತಂದ ಸ್ಟಿಕ್ಕರ್
ಮಧ್ಯಪ್ರದೇಶದ ಜಬುವಾ ಜಿಲ್ಲಾಡಳಿತ “ಮತ ಚಲಾವಣೆ ನಮ್ಮ ಹಕ್ಕು; ಅದಕ್ಕಾಗಿ ಪ್ರತಿಜ್ಞಾ ಬದ್ಧರಾಗಿದ್ದೇವೆ’ ಎಂಬ ಅರಿವು ಮೂಡಿಸುವ 2 ಲಕ್ಷ ಸ್ಟಿಕ್ಕರ್‌ಗಳನ್ನು ಮುದ್ರಿಸಿತ್ತು. ಮನೆ, ಸಾರ್ವಜನಿಕ ಕಟ್ಟಡಗಳ ಬಾಗಿಲಿಗೆ ಅಂಟಿಸಲಾಗಿತ್ತು. ಮದ್ಯದ ಬಾಟಲಿಗೆ ಅದನ್ನು ಅಂಟಿಸಿ ಅರಿವು ಮೂಡಿಸಲೂ ನಿರ್ಧರಿಸಲಾಗಿತ್ತು. ಆದರೆ ಮದ್ಯ ಸೇವನೆಯಿಂದ ಉಂಟಾಗುವ ಹಾನಿಯ ಎಚ್ಚರಿಕೆಯ ಮೇಲೆಯೇ ಸ್ಟಿಕ್ಕರ್ ಅಂಟಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಬಾಟಲ್‌ಗಳ ಮೇಲೆ ಸ್ಟಿಕ್ಕರ್ ಬೇಡ ಎಂದು ಜಿಲ್ಲಾಡಳಿತ ತೀರ್ಮಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.