ವಿಲನ್ ಚಿತ್ರದ ವಿವಾದಿತ ಗೀತೆಗೆ ಕತ್ತರಿ ಹಾಕಲು ಮನವಿ
Team Udayavani, Oct 23, 2018, 3:38 PM IST
ವಿಜಯಪುರ: ದಿ ವಿಲನ್ ಚಲನ ಚಿತ್ರದಲ್ಲಿ ಅಳವಡಿರುವ ಗೀತೆಯೊಂದು ಅಂಧರನ್ನು ಅವಮಾನಿಸುತ್ತಿದ್ದು ಕೂಡಲೇ ಗೀತೆಯನ್ನು ತೆಗೆದು ಹಾಕಬೆಕು ಹಾಗೂ ಚಿತ್ರ ನಿರ್ದೇಶಕ ಪ್ರೇಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ವಿಕಲಚೇತನರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಪ್ರಮುಖ ಭೀಮನಗೌಡ ಪಾಟೀಲ ಸಾಸನೂರ, ದಿ ವಿಲನ್ ಚಿತ್ರದಲ್ಲಿ ಗರುಡ್ನಂಗೆ ಇಧ್ದೋನ್ ನೋಡ್ಲಾ ಕುರುಡ್ನಂಗ್ ಆಗೋದೊ ಎಂಬ ಪದ ದೃಷ್ಟಿ ದೋಷಿತರನ್ನು ಅವಮಾನಿಸುವಂತಿದ್ದು ಅಂಧರ ಭಾವನೆಗೆ ಧಕ್ಕೆ ತಂದಿದೆ ಎಂದು ದೂರಿದರು.
ವಿನೋದ ಖೇಡ ಮಾತನಾಡಿ, ವಿಕಲಚೇತನರ ಕಾಯ್ದೆ ಅನ್ವಯ ಯಾವುದೇ ವಿಕಲಚೇತನರ ನ್ಯೂನ್ಯತೆ ಎತ್ತಿ ಹಿಡಿಯಬಾರದು. ಅಷ್ಟೇ ಅಲ್ಲದೇ ದೃಷ್ಟಿ ದೋಷಿತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದವರ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುವ ಅವಕಾಶವಿದೆ. ಹೀಗಾಗಿ ಕೂಡಲೇ ಚಿತ್ರದ ಅವಮಾನಿತ ಗೀತೆಯನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು. ಅಶೋಕ ವಾಲೀಕಾರ, ಮಲ್ಲಿಕಾರ್ಜುನ ಉಮರಾಣಿ, ಪರಶುರಾಮ ಗಾಯಕವಾಡ, ಎ.ಎ. ಹಕೀಂ, ಅಂಬಣ್ಣ ಗುನ್ನಾಪುರ, ರಾಜು ಭುಯ್ನಾರ, ಶಂಕ್ರಮ್ಮ ಕೋರಿ, ಮಹಾದೇವಿ ಮಾನೆ, ಹೀನಾ ಚೌಧರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.